Advertisement

ಸ್ವಂತ ಖರ್ಚಿನಲ್ಲಿ ನಿರ್ಗತಿಕರಿಗೆ ದಿನಸಿ ವಿತರಿಸಿದ ಪಿಎಸ್ಐ

11:45 AM Apr 24, 2020 | Suhan S |

ಧಾರವಾಡ: ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ಮಹೇಂದ್ರ ನಾಯಕ್‌ ಸ್ವಂತ ಹಣದಿಂದ ಖರೀದಿಸಿದ ಸುಮಾರು 2.50 ಲಕ್ಷ ಮೌಲ್ಯದ ದಿನಸಿಯನ್ನು ಠಾಣಾ ವ್ಯಾಪ್ತಿಯ ಬಡ-ನಿರ್ಗತಿಕರಿಗೆ ಹಂಚಿ ಮಾದರಿಯಾಗಿದ್ದಾರೆ.

Advertisement

ತಮ್ಮ ಠಾಣೆಯ ಸುಮಾರು 35ಕ್ಕೂ ಹೆಚ್ಚು ಸಿಬ್ಬಂದಿ, ಬೀಟ್‌ ಪೊಲೀಸರ ಸಹಾಯದಿಂದ ಧಾರವಾಡ ಗ್ರಾಮೀಣ ವ್ಯಾಪ್ತಿಯ ಮಾವಿನಕೊಪ್ಪ, ಹುಣಸಿಕುಮರಿ, ಲಾಳಗಟ್ಟಿ, ವಡವನಾಗಲಾವಿ, ಇಟಿಗಟ್ಟಿ, ಶಿವಳ್ಳಿ, ಹಳ್ಳಿಗೇರಿ, ಯರಿಕೊಪ್ಪ, ನರೇಂದ್ರ, ಕ್ಯಾರಕೊಪ್ಪ, ನಿಗದಿ ಮತ್ತು ಅಮ್ಮಿನಭಾವಿ ಸೇರಿದಂತೆ ಸುಮಾರು 20 ಹಳ್ಳಿಗಳಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಬಡವರು, ಇಟ್ಟಂಗಿ ಭಟ್ಟಿ ಕಾರ್ಮಿಕರು, ಕೂಲಿ ಕಾರ್ಮಿಕರು, ಮಕ್ಕಳಿಲ್ಲದ ವಯೋವೃದ್ಧರು, ಪಡಿತರ ಚೀಟಿ ಹೊಂದಿರದ ಕುಟುಂಬಗಳ ಮನೆಗೆ ದಿನಸಿ ತಲುಪಿಸಿದ್ದಾರೆ. ಪಿಎಸ್‌ಐ ಮಹೇಂದ್ರ ನಾಯಕ್‌ ಅವರ ಕಾರ್ಯಕ್ಕೆ ಎಸ್‌ಪಿ ವರ್ತಿಕಾ ಕಟಿಯಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಮ್ಮಿನಭಾವಿ ಗ್ರಾಮದಲ್ಲಿ ದಿನಸಿ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದವರಾದ ಇವರು, ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಸಹಾಯದಿಂದ ವಿಜಯಪುರ ಹಾಗೂ ಚಡಚಣ ತಾಲೂಕಿನ 15 ಹಳ್ಳಿಯ ಕೂಲಿಕಾರ್ಮಿಕರಿಗೆ, ಬಡವರಿಗೆ ಆಹಾರದ ಕಿಟ್‌ ವಿತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next