Advertisement

ಪಿಎಸ್ಐ ಅಕ್ರಮ ನೇಮಕಾತಿ : ಸಿಐಡಿಯಿಂದ ಎರಡನೇ ಆರೋಪ ಪಟ್ಟಿ ಸಲ್ಲಿಕೆ

09:02 PM Jul 29, 2022 | Team Udayavani |

ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾ ತಂಡ 1609 ಪುಟಗಳ ಎರಡನೇ ಆರೋಪ ಪಟ್ಟಿ ( ಚಾಜ್೯ಶೀಟ್) ಸಲ್ಲಿಸಿದೆ.

Advertisement

545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಳೆದ ಜುಲೈ 5ರಂದು 1974 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಕ್ಕೆ ಸಲ್ಲಿಸಿದ ನಂತರ ಈಗ 1609 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ.

ನಗರದ ಎಂಎಸ್ ಐ ಡಿಗ್ರಿ ಮಹಾವಿದ್ಯಾಲಯದಲ್ಲಿನ ಪರೀಕ್ಷೆ ಕೇಂದ್ರದಲ್ಲಿ ಬ್ಲೂಟೂತ್ ಬಳಕೆ ಹಾಗೂ ಇತರ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ಕಿಂಗ್ ಪಿನ್ ರುದ್ರಗೌಡ ಪಾಟೀಲ್, ಪರೀಕ್ಷಾ ರ್ಥಿಗಳು ಹಾಗೂ ಸಹಾಯ ಮಾಡಿದವರು ಒಳಗೊಂಡ 8 ಆರೋಪಿಗಳನ್ನು ಒಳಗೊಂಡ ಸುದೀರ್ಘ ವಾಗಿ ನಡೆದು ಬಂದ ತನಿಖಾ ಹಾದಿಯನ್ನು ಸಾಕ್ಷ್ಯಾಧಾರ ಗಳೊಂದಿಗೆ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶುಕ್ರವಾರ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಸಿಐಡಿ ಡಿವೈಎಸ್ಪಿ ವಿರೇಂದ್ರಕುಮಾರ ಅವರು ತನಿಖಾಧಿಕಾರಿಯಾಗಿ ಚಾಜ್೯ಶೀಟ್ ಸಲ್ಲಿಸಿದ್ದಾರೆ.

ಪರೀಕ್ಷಾರ್ಥಿ ಪ್ರಭು ತಂದೆ ಶರಣಪ್ಪ ಹಾಗೂ ಇವರ ತಂದೆ ಶರಣಪ್ಪ, ಚಂದ್ರಕಾಂತ ಕುಲಕರ್ಣಿ, ಆರ್.‌ಡಿ.‌ಪಾಟೀಲ್, ಕಾಶೀನಾಥ್ ಚಿಲ್, ಪ್ರಕಾಶ ಊಡಗಿ ಅವರನ್ನು ಆರೋಪಿಗಳನ್ನಾಗಿ ಪಟ್ಟಿ ಸಲ್ಲಿಸಲಾಗಿದೆ.

ಮೊದಲ ಆರೋಪ ಪಟ್ಟಿಯಲ್ಲಿ
ಗೋಕುಲ್ ಬಡಾವಣೆಯಲ್ಲಿರುವ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಒಡೆತನದ ಜ್ಞಾನಜೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ 34 ಆರೋಪಿಗಳನ್ನು ಒಳಗೊಂಡ ಸುದೀರ್ಘವಾಗಿ ನಡೆದು ಬಂದ ತನಿಖಾ ಹಾದಿಯನ್ನು ಸಾಕ್ಷ್ಯಾ ಧಾರಗಳೊಂದಿಗೆ ಸಲ್ಲಿಸಲಾಗಿರುವುದನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ.

Advertisement

ಒಟ್ಟಾರೆ ಬ್ಲೂಟೂತ್ ಬಳಸಿ ಹೇಗೆ ಅಕ್ರಮ ಎಸಗಲಾಗಿದೆ ಜೊತೆಗೆ ಯಾರ್ಯಾರು ಅಕ್ರಮದಲ್ಲಿ ತಮ್ಮ ಪಾತ್ರ ನಿರೂಪಿಸಿದ್ದಾರೆ ಹಾಗೂ ಹಣದ ವ್ಯವಾರ ಸೇರಿದಂತೆ ಇತರ ಎಲ್ಲಾ ಆಯಾಮಗಳ ಒಳಗೊಂಡ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.‌

ಕಳೆದ ಏಪ್ರಿಲ್ ತಿಂಗಳಿನ ಮೊದಲ ವಾರದಲ್ಲಿ ಪ್ರಕರಣ ಬಯಲಿಗೆ ಬಂದು ಇಲ್ಲಿನ ಜೋಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next