Advertisement

ಪಿಎಸ್ ಐ ನೇಮಕ ಹಗರಣ: ನ್ಯಾಯಾಂಗ ತನಿಖೆ ನಡೆಸಬೇಕು: ಸಿದ್ದರಾಮಯ್ಯ

01:44 PM May 04, 2022 | Team Udayavani |

ಬೆಂಗಳೂರು: ಪಿಎಸ್ ಐ ವರ್ಗಾವಣೆ ಆರೋಪಿಗಳು ಸಚಿವ ಅಶ್ವತ್ಥನಾರಾಯಣ ಅವರ ನೆಂಟರು. ಈ ಸರಕಾರ ಸಾಮಾನ್ಯ ಜನಪೀಡಕ ಸರಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಆರೋಪಿಗಳಾದ ದರ್ಶನ ಗೌಡ ಹಾಗೂ ನಾಗೇಶ್ ಗೌಡ ಸಚಿವ ಅಶ್ವತ್ಥನಾರಾಯಣ ಅವರ ನೆಂಟರು. ಈ ಕಾರಣಕ್ಕಾಗಿ ಅವರನ್ನು ಬಿಟ್ಟುಕಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ಅಕ್ರಮ ನಡೆದಿದ್ದು, ಅಶ್ವತ್ಥನಾರಾಯಣ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ರಾಜ್ಯದಲ್ಲಿರುವುದು 40% ಸರಕಾರ. ಜನಪೀಡಕ ಸರಕಾರ. ಆದರೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೊಮ್ಮಾಯಿ ಸರಕಾರಕ್ಕೆ ಬೆನ್ನು ತಟ್ಟಿ ಹೋಗಿದ್ದಾರೆ. ಇದರರ್ಥ ಕೇಂದ್ರ ಸರಕಾರ ಈ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿದಂತಲ್ಲವೇ ? ಪ್ರಧಾನಿ ನರೇಂದ್ರ ಮೋದಿಯವರು ಕಮಿಷನ್ ಆರೋಪಕ್ಕೆ ಸಂಬಂಧಪಟ್ಡಂತೆ ಮೌನಕ್ಕೆ ಶರಣಾಗಿರುವುದರ ಅರ್ಥವೇನು? ಜನರ ಕಣ್ಣಿಗೆ ಮಣ್ಣೆರೆಚುವುದನ್ನು ಇನ್ನಾದರೂ ಬಿಡಿ ಎಂದು ಆರೋಪಿಸಿದರು.

ಇದನ್ನೂ ಓದಿ:ಪಿಎಸ್ಐ ನೇಮಕಾತಿ ಅಕ್ರಮ: ತರಬೇತಿ ಪಡೆಯುತ್ತಿದ್ದ ಪಿಎಸ್ಐ ಸಿಐಡಿ ವಶಕ್ಕೆ

ಪಿಎಸ್ ಐ ನೇಮಕ ಹಗರಣದಲ್ಲಿ ಗೃಹ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಭಾಗಿಯಾಗಿರುವುದರಿಂದ ಸಿಐಡಿ ತನಿಖೆಯಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ಹೀಗಾಗಿ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಈ ಸರಕಾರದ ವಿರುದ್ಧ ನಾವು ರಾಜಕೀಯ ಹೋರಾಟ ನಡೆಸುತ್ತೇವೆ. ಸದ್ಯದಲ್ಲೇ ಇನ್ನಷ್ಟು ಇಲಾಖೆಗಳಲ್ಲಿ ನಡೆದ ಅಕ್ರಮದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next