“ಲೈಫ್ ಈಸ್ ಬ್ಯೂಟಿಫುಲ್’ -ಹೀಗೊಂದು ಸಿನಿಮಾ ಹೆಸರನ್ನು ನೀವು ಕೇಳಿರಬಹುದು. ಪೃಥ್ವಿ ಅಂಬರ್ ನಾಯಕರಾಗಿರುವ ಈ ಚಿತ್ರ ಈಗ ತನ್ನ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಅರುಣ್ ಕುಮಾರ್ ಹಾಗೂ ಸಾಬು ಅಲೋಶಿಯಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಚಿತ್ರವನ್ನು ಫ್ರೈಡೇ ಫಿಲಂಸ್ ಹಾಗೂ ಸಿಲ್ವರ್ ಟ್ರೈನ್ ಇಂಟರ್‌ನ್ಯಾಶನಲ್ ಜೊತೆಯಾಗಿ ನಿರ್ಮಿಸಿದೆ. ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ 40 ದಿನಗಳ ಕಾಲ ನಡೆದಿದೆ.
ಇದನ್ನೂ ಓದಿ:ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಸ್ವರಾಜ್ ಶೆಟ್ಟಿ
ವಿಭಿನ್ನ ಕಥಾಹಂದರವೊಂದಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರ ಮಾಡಿದ್ದಾರೆ. ಜೊತೆಗೆ ಲಾಸ್ಯಾ ನಾಗರಾಜ್, ಸಿದ್ಲಿಂಗು ಶ್ರೀಧರ್ ಕೂಡಾ ನಟಿಸಿದ್ದಾರೆ. ಚಿತ್ರಕ್ಕೆ ನೊಬಿನೌ ಪೌಲ್ ಅವರ ಸಂಗೀತವಿದೆ. ಚಿತ್ರಕ್ಕೆ ನಿರ್ದೇಶಕ ಲೋಹಿತ್ ಬೆನ್ನೆಲುವಾಗಿ ನಿಂತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಕಿಶೋರ್, “ನಮ್ಮ ಸಿನಿಮಾ ಬ್ಯಾನರ್‌ನ ಮೂಲ ಉದ್ದೇಶ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು. ಈ ಸಿನಿಮಾದಲ್ಲಿ ಕಥೆಯೇ ಹೀರೋ. ಕಥೆ ಇಡೀ ಚಿತ್ರವನ್ನು ಮುಂದುವರೆಸಿಕೊಂಡು ಹೋಗುವಂತಿರಬೇಕು. ಯಾವುದೇ ನಟ, ನಟಿಗಿಂತ ಕಥೆಯೇ ಪ್ರಧಾನವಾಗಿ ಮುಂದೆ ನಿಲ್ಲಬೇಕು. ಹೀಗೆ ವಿಭಿನ್ನ ರೀತಿಯ ಕತೆಗಳನ್ನು ಆಯ್ಕೆ ಮಾಡಿ ಚಿತ್ರ ನಿರ್ಮಿಸುವ ಇರಾದೆ ನಮ್ಮ ಚಿತ್ರತಂಡದ್ದು. ಮುಂದಿನ ದಿನಗಳಲ್ಲಿ ನವ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಕೂಡಾ ನಮ್ಮ ಬ್ಯಾನರ್‌ಗಿದೆ’ ಎನ್ನುತ್ತಾರೆ.
ಇದನ್ನೂ ಓದಿ: ಲಾಕ್ ಗೆ ಶೇಕ್ ಆಗದ ಸನ್ನಿ ಲಿಯೋನ್!