Advertisement

Matsyagandha: ಖಡಕ್‌ ಖಾಕಿ ಗೆಟಪ್‌ನಲ್ಲಿ ಪೃಥ್ವಿ ಅಂಬರ್‌ ಮಿಂಚು

03:17 PM Jan 30, 2024 | Team Udayavani |

“ಸಹ್ಯಾದ್ರಿ ಪ್ರೋಡಕ್ಷನ್ಸ್‌’ ಬ್ಯಾನರ್‌ನಡಿಯಲ್ಲಿ ಬಿ. ಎಸ್‌ ವಿಶ್ವನಾಥ್‌ ನಿರ್ಮಾಣದ ದೇವರಾಜ್‌ ಪೂಜಾರಿ ನಿರ್ದೇಶನದಲ್ಲಿ ಪೃಥ್ವಿ ಅಂಬರ್‌ ನಾಯಕನಾಗಿ ನಟಿಸಿರುವ “ಮತ್ಸ್ಯಗಂಧ’ ಸಿನಿಮಾದ ಫ‌ಸ್ಟ್‌ಲುಕ್‌ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ಇನ್ನು ಬಿಡುಗಡೆಯಾಗಿರುವ “ಮತ್ಸ್ಯಗಂಧ’ ಸಿನಿಮಾದ ಫ‌ಸ್ಟ್‌ಲುಕ್‌ ಟೀಸರ್‌ನಲ್ಲಿ ನಟ ಪೃಥ್ವಿ ಅಂಬರ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಕನ್ನಡದಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ಲವರ್‌ ಬಾಯ್‌ ಆಗಿ, ಕಾಲೇಜ್‌ ಹುಡುಗನಾಗಿ ಮಿಂಚಿದ್ದ ನಟ ಪೃಥ್ವಿ ಅಂಬರ್‌ ಇದೇ ಮೊದಲ ಬಾರಿಗೆ “ಮತ್ಸ್ಯಗಂಧ’ ಸಿನಿಮಾದಲ್ಲಿ ಖಾಕಿ ತೊಟ್ಟು ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

“ಮತ್ಸ್ಯಗಂಧ’ ಸಿನಿಮಾದಲ್ಲಿ ಪೃಥ್ವಿ ಅಂಬರ್‌ ಅವರೊಂದಿಗೆ ಲೋಕಿ ಸೌರವ್‌, ಪ್ರಶಾಂತ್‌ ಸಿದ್ಧಿ, ನಾಗರಾಜ್‌ ಬೈಂದೂರ್‌, ಶರತ್‌ ಲೋಹಿತಾಶ್ವ, ಮೈಮ್‌ ರಾಮದಾಸ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ಪ್ರಶಾಂತ್‌ ಸಿದ್ದಿ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಮೊದಲ ಬಾರಿಗೆ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಭಾಗಿರಥಿ’ ಅನ್ನೋ “ಮತ್ಸ್ಯಗಂಧ’ ಸಿನಿಮಾದ ಹಾಡು ಕೂಡ ಕೇಳುಗರನ್ನು ಸೆಳೆಯಲು ಯಶಸ್ವಿಯಾಗಿತ್ತು. ಇದೀಗ “ಮತ್ಸ್ಯಗಂಧ’ ಸಿನಿಮಾದ ಫ‌ಸ್ಟ್‌ಲುಕ್‌ ಟೀಸರ್‌ ಕೂಡ ಬಿಡುಗಡೆಯಾಗಿದ್ದು, ಇದೇ ಫೆಬ್ರವರಿ 23ಕ್ಕೆ ರಾಜ್ಯದಾದ್ಯಂತ “ಮತ್ಸ್ಯಗಂಧ’ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ಉದಯವಾಣಿ ಸಿನಿ ಸಮಾಚಾರ

Advertisement

Udayavani is now on Telegram. Click here to join our channel and stay updated with the latest news.

Next