Advertisement
ಉದ್ದೇಶಿತ ಪಿಆರ್‌ಆರ್ ಯೋಜನೆ ಒಳಗೊಂಡ ಗ್ರಾಮಗಳ ಜಮೀನು ಕಳೆದುಕೊಂಡವರಿಗೆ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿರಿಸಿಕೊಂಡು ಸಂಧಾನಿತ ಮೊತ್ತ (ಸಂಧಾನ ಸೂತ್ರ)ದ ಮೂಲಕ ಪರಿಹಾರ ನಿಗದಿಪಡಿಸುವುದು. ಇದಕ್ಕೆ ಭೂಮಾಲಕರು ಒಪ್ಪದಿದ್ದರೆ, ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡುವ ಸಂಬಂಧದ ತಿದ್ದುಪಡಿಗೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ.
ಇನ್ನು ಸಣ್ಣ ಕೈಗಾರಿಕೆಗಳ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪನೆಗಾಗಿ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ನಿಯಮಿತ (ಎನ್‌ಎಸ್‌ಐಸಿ)ಕ್ಕೆ ಹಂಚಿಕೆ ಮಾಡಲು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಪೀಣ್ಯ 1ನೇ ಹಂತದಲ್ಲಿರುವ ಕೈಗಾರಿಕಾ ವಸಾಹತುಗಳು ನಿವೇಶನ/ ಮಳಿಗೆ ಸಂಖ್ಯೆ ಎ-180 ಅನ್ನು 30 ವರ್ಷಗಳ ಕರಾರು ಅವಧಿಗೆ ವಾರ್ಷಿಕ ರೂ. 1 ಶುಲ್ಕದ ಆಧಾರದಲ್ಲಿ ನೀಡಲು ತೀರ್ಮಾನಿಸಲಾಗಿದೆ ಎಂದೂ ಅವರು ಹೇಳಿದರು.