ಬೆಂಗಳೂರು: ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ, ಗುಡ್ಡ ಕುಸಿತದಿಂದ ಮನೆ ಮಠ ಕಳೆದುಕೊಂಡು ಗುರುತಿನ ಚೀಟಿಯೂ ಇಲ್ಲದವರಿಗೆ ಪಡಿತರ ಚೀಟಿ ವಿತರಿಸಲು ಸರ್ಕಾರ ಮುಂದಾಗಿದೆ. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಆಸ್ತಿ-ಪಾಸ್ತಿ ಸೇರಿ ಎಲ್ಲ ರೀತಿಯ ದಾಖಲೆ ಕಳೆದು ಕೊಂಡಿರುವವರಿಗೆ ತಕ್ಷಣಕ್ಕೆ ಫೋಟೋ ಸಹಿತ ಪಡಿತರ ಚೀಟಿ ನೀಡಿ ಮುಂದೆ ಇತರೆ ಅಗತ್ಯ ಗುರುತಿನ ಚೀಟಿ ಮಾಡಿ ಕೊಳ್ಳಲು ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ.
ಮನೆ ಬಿಟ್ಟು ನೆಂಟರ ಮನೆಯಲ್ಲಿ ಆಶ್ರಯ ಪಡೆದಿರುವವರು, ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೆ.1 ರಿಂದ ಒಂದು ತಿಂಗಳ ಈ ಅಭಿಯಾನ ಕೈಗೊಳ್ಳಲಿದೆ. ನಿರಾಶ್ರಿತರು ಸೇರಿ ಅಗತ್ಯ ಇರುವವರಿಗೆಲ್ಲಾ ಪಡಿತರ ಚೀಟಿ ವಿತರಿಸಿ ಮೂರ್‍ನಾಲ್ಕು ತಿಂಗಳು ಉಚಿತ ಪಡಿತರ ವಿತರಿ ಸುವುದು. ಇದಕ್ಕಾಗಿ ಪಡಿತರ ಮಳಿಗೆ ಗಳನ್ನೂ ಇಲಾಖೆಯಿಂದಲೇ ಸ್ಥಾಪಿಸುವುದು ಇದರ ಉದ್ದೇಶ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಳಿ ಇರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಬಿಪಿಎಲ್
ಹಾಗೂ ಎಪಿಎಲ್ ಕಾರ್ಡ್ ವಿತರಣಾ ಡಾಟಾ ಅನ್ವಯ ನಿರಾಶ್ರಿತರ ಶಿಬಿರದ ಬಳಿ ಪಡಿತರ ಚೀಟಿ ವಿತರಣೆ ಕೇಂದ್ರ ತೆರೆಯುವುದು. ಕುಟುಂಬ ಸದಸ್ಯರ ಫೋಟೋ ಸಹಿತ ಪಡಿತರ ಚೀಟಿ ನೀಡುವುದು. ಇದಕ್ಕಾಗಿ ಪಡಿತರ ಮಳಿಗೆಗಳನ್ನೂ ಇಲಾಖೆಯಿಂದಲೇ ಸ್ಥಾಪಿಸುವುದು ಇದರ ಉದ್ದೇಶ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಳಿ ಇರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ವಿತರಣಾ ಡಾಟಾ ಅನ್ವಯ ನಿರಾಶ್ರಿತರ ಶಿಬಿರದ ಬಳಿ ಪಡಿತರ ಚೀಟಿ ವಿತರಣೆ ಕೇಂದ್ರ ತೆರೆಯುವುದು. ಕುಟುಂಬ ಸದಸ್ಯರ ಫೋಟೋ ಸಹಿತ ಪಡಿತರ ಚೀಟಿ ನೀಡುವುದು. ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳ ತಂಡ ತಿಂಗಳ ಕಾಲ ಕೊಡಗು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದ್ದು, ಪಡಿತರ ಚೀಟಿ ನೀಡುವ ಕೆಲಸದಲ್ಲಿ ತೊಡಗಲಿದ್ದಾರೆ.
ಬಹುತೇಕ ಕಡೆ ಪಡಿತರ ವಿತರಣೆ ಮಳಿಗೆಗಳು ಕೊಚ್ಚಿ ಹೋಗಿರುವುದರಿಂದ ಇಲಾಖೆ ವತಿಯಿಂದ ಹೊಸ ಮಳಿಗೆಗಳ ಸ್ಥಾಪನೆಗೂ ನಿರ್ಧರಿಸಲಾಗಿದೆ. ಇದರ ಉಸ್ತುವಾರಿಗಾಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಪೂರೈಕೆ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ಸಚಿವರ ನೇತೃತ್ವದ ತಂಡ ಶನಿವಾರದಿಂದ ನಾಲ್ಕು ದಿನ ಕೊಡಗು ಪ್ರವಾಸ ಬೆಳೆಸಲಿದೆ. ಬ್ಲಾಂಕೆಟ್, ಬಕೆಟ್ ಮತ್ತು ಜಗ್, ನೈಟಿ, ಸ್ಯಾನಿಟರಿ ನ್ಯಾಪ್ಕಿನ್, 500 ಟನ್ ಅಕ್ಕಿ, 100 ಕ್ವಿಂಟಾಲ್ ಸಕ್ಕರೆ, ಸಾಂಬಾರ್ ಪುಡಿ ಪ್ಯಾಕೆಟ್ ನಿರಾಶ್ರಿತರ ಶಿಬಿರಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೊಸದಾಗಿ ಪಡಿತರ ಚೀಟಿ ಮಾಡಿಕೊಡಲು ವಿಶೇಷವಾಗಿ ಗುಡ್ಡಗಾಡು ಪ್ರದೇಶ ಹಾಗೂ ಅರಣ್ಯದ ಅಂಚಿನಲ್ಲಿರುವ ಕುಟುಂಬಗಳಿಗೆ ತಕ್ಷಣ ಪಡಿತರ ಚೀಟಿ ವಿತರಿಸಲು ನಿಯಮಾವಳಿ ಸರಳೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ತಾತ್ಕಾಲಿಕ ಪಡಿತರ ಚೀಟಿ ನೀಡಲು ನಿರ್ಧರಿಸಲಾಗಿದೆ. ಜತೆಗೆ ಪ್ರತಿ ಕುಟುಂಬಕ್ಕೂ 10 ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ, 1 ಕೆಜಿ ತೊಗರಿ ಬೇಳೆ, ಒಂದು ಕೆಜಿ ಎಣ್ಣೆ ವಿತರಿಸಲಾಗುವುದು. 50 ಸಾವಿರ ಬ್ಯಾಗ್‌ಗಳನ್ನು ಸಿದ್ಧಪಡಿಸಿ ಶನಿವಾರದಿಂದ ಅಗತ್ಯ ಇದ್ದವರಿಗೆ ವಿತರಿಸಲಾಗುವುದು.
● ಜಮೀರ್ ಅಹಮದ್,ಆಹಾರ ಸಚಿವ
ಎಸ್. ಲಕ್ಷ್ಮಿನಾರಾಯಣ