Advertisement

ಪ್ರಾಂತ ರೈತ ಸಂಘದಿಂದ ಧರಣಿ

03:42 PM Mar 01, 2017 | Team Udayavani |

ಜೇವರ್ಗಿ: ಉದ್ಯೋಗ ಖಾತ್ರಿ ಸಮರ್ಪಕ ಜಾರಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ವತಿಯಿಂದ ಮಂಗಳವಾರ ತಹಶೀಲ್ದಾರ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. 

Advertisement

ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ  ಹೊಸಮನಿ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ ಮಾಡಬೇಕು. ಕೂಲಿ ದಿನಗಳನ್ನು 250 ದಿನಗಳವರೆಗೆ ಹೆಚ್ಚಿಸುವುದು, ಕೂಲಿ ದರ 300 ರೂ. ನೀಡುವುದು ಹಾಗೂ ಉದ್ಯೋಗ ಖಾತ್ರಿ ಕೆಲಸಕ್ಕಾಗಿ ಅರ್ಜಿ ಹಾಕಿದ ಎಲ್ಲಾ ಕೂಲಿ ಕಾರ್ಮಿಕರಿಗೆ ಕೆಲಸ  ಕೊಡಬೇಕು. ಇಲ್ಲವೇ ನಿರುದ್ಯೋಗಿ ಭತ್ಯೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. 

ಸೂಕ್ತ ದಾಖಲೆಗಳೊಂದಿಗೆ ಫಾರಂ ಸಂಖ್ಯೆ 6 ರಲ್ಲಿ ಭರ್ತಿಮಾಡಿಕೊಟ್ಟರೂ ಕೆಲಸ  ಕೊಡದೆ ಇರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೂ ಮುನ್ನ ಹಳೆಯ ತಹಶೀಲ ಕಚೇರಿಯಿಂದ ಮಿನಿವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕೂಲಿಕಾರ್ಮಿಕರು ಸರಕಾರದ ವಿರುದ್ಧ ಘೋಷಣೆ ಕೂಗಿದರು. 

ವೆಂಕೋಬರಾವ್‌ ವಾಗಣಗೇರಿ,  ಪರಶುರಾಮ ಬಡಿಗೇರ ಸಿದ್ದರಾಮ ಹರವಾಳ, ಕಲ್ಲಪ್ಪ ಡೊಣಿ, ಭೀಮಣ್ಣ ಮಾಗಣಗೇರಿ, ಸಿದ್ದಣ್ಣ ವಾಗಣಗೇರಿ, ಪೀರಪ್ಪ ಯಾತನೂರ, ವಿಠಲ್‌ ಎಸ್‌.ಹಟ್ಟಿ, ರೇವಣಸಿದ್ದ ದೊಡ್ಮನಿ, ಸಿದ್ದರಾಮ ಹೂಗಾರ, ತಾಯಪ್ಪ ಹೊಸಮನಿ, ದೇವಿಂದ್ರ ನಡುವಿನಕೇರಿ, ಮಹಾದೇವಪ್ಪ, ಕಾಲೇಸಾಬ, ಧರ್ಮಣ್ಣ ಎನ್‌. ಬಡಿಗೇರ, ಮಲ್ಲಿಕಾರ್ಜುನ ಬಸವಂತ್ರಾಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next