Advertisement
ಎರಡು ದಿನಗಳ ಭೇಟಿಗಾಗಿ ಆಗಮಿಸಿ, ನೆಡುಂಬಶ್ಶೇರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಸರ್ಕಾರ ಬಡವರಿಗೆ ಮನೆಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ, ಎರಡು ಲಕ್ಷ ಮನೆಗಳನ್ನು ಅನುಮೋದಿಸಲಾಗಿದೆ ಮತ್ತು ಕೇರಳದಲ್ಲಿ 1.30 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
Related Articles
Advertisement
ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಭೇಟಿ
ಕೇರಳದ ಎರ್ನಾಕುಲಂ ಜಿಲ್ಲೆಯ ಕಾಲಡಿ ಗ್ರಾಮದಲ್ಲಿರುವ ಸಂತ-ತತ್ತ್ವಜ್ಞಾನಿ ಆದಿ ಶಂಕರಾಚಾರ್ಯರ ಜನ್ಮಸ್ಥಳವಾದ ಆದಿ ಶಂಕರ ಜನ್ಮ ಭೂಮಿ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ನೀಡಿದರು.
ಕಾಲಡಿಗೆ ತೆರಳುವ ಮುನ್ನ ಮೋದಿ ಅವರು ಭಾರತಕ್ಕೆ ಸಂತ ದಾರ್ಶನಿಕರ ಕೊಡುಗೆಗಳನ್ನು ನೆನಪಿಸಿಕೊಂಡರು ಮತ್ತು ಅದ್ವೈತ ತತ್ವಕ್ಕೆ ಹೆಸರುವಾಸಿಯಾದ ಆದಿ ಶಂಕರ ಪರಂಪರೆಯನ್ನು ಕೇರಳದಿಂದ ವಿವಿಧ ಆಧ್ಯಾತ್ಮಿಕ ನಾಯಕರು ಮತ್ತು ಶ್ರೀ ನಾರಾಯಣ ಗುರು, ಚಟ್ಟಂಪಿ ಸ್ವಾಮಿಕಲ್ ಮತ್ತು ಅಯ್ಯಂಕಾಳಿ ಮುಂತಾದ ಸಮಾಜ ಸುಧಾರಕರು ಮುನ್ನಡೆಸಿದರು ಎಂದು ಹೇಳಿದರು.
“ಭಾರತೀಯ ಮಹಾನ್ ಸಂತರ ಪರಂಪರೆಯನ್ನು ಗೌರವಿಸಲು” ಪೆರಿಯಾರ್ ನದಿಯ ದಂಡೆಯ ಮೇಲಿರುವ ಆದಿಶಂಕರರ ಜನ್ಮಸ್ಥಳಕ್ಕೆ ಪ್ರಧಾನಿ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.