Advertisement

ಉಚಿತ ಕುಡಿಯುವ ನೀರು ಒದಗಿಸುವ ಗ್ರಾ.ಪಂ. ಸದಸ್ಯ

10:17 PM May 17, 2020 | Sriram |

ಕಟಪಾಡಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉದ್ಯಮಗಳು ತತ್ತರಿಸಿದ್ದರೂ, ಉದ್ಯಮಿ ಕಟಪಾಡಿ ಗ್ರಾ.ಪಂ. ಸದಸ್ಯ ಅಬೂಬಕರ್‌ ಎ.ಅರ್‌. ಅವರು ಈ ರಮ್ಜಾನ್‌ ಮಾಸದಲ್ಲಿಯೂ ಬಸವಳಿಯದೆ ದಿನವೊಂದರ ಸುಮಾರು 7 ಸಾವಿರ ರೂ. ವ್ಯಯಿಸಿ ಸರಕಾರಿ ಗುಡ್ಡೆ ಕಾಲನಿಯ ನಿವಾಸಿಗಳಿಗೆ ನಿತ್ಯ ಕುಡಿಯುವ ನೀರನ್ನು ಸರಬರಾಜು ಮಾಡುವ ಮೂಲಕ ಮಾನವೀಯ ಸ್ಪಂದನೆಯನ್ನು ನೀಡುತ್ತಿದ್ದಾರೆ.

Advertisement

ಈ ಕಾಲನಿಯು 12 ಕ್ರಾಸ್‌ಗಳನ್ನು ಹೊಂದಿದ್ದು, ಬೇಸಗೆಯ ಕುಡಿಯುವ ನೀರಿನ ಬರವನ್ನು ನೀಗಿಸಲು ದಿನನಿತ್ಯ ಸುಮಾರು 28 ಸಾವಿರ ಲೀಟರ್‌ಗಳ‌ಷ್ಟು ಕುಡಿಯುವ ನೀರನ್ನು ವಾಹನದ ಮೂಲಕ ಮನೆ ಮನೆಗೆ ಸರಬರಾಜು ಮಾಡುವ ಈ ಪಂಚಾಯತ್‌ ಸದಸ್ಯ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.

ಕಟಪಾಡಿ ಗ್ರಾ.ಪಂ. ವ್ಯಾಪ್ತಿಗೊಳಪಡುವ ಈ ಕಾಲನಿಯಲ್ಲಿ ಸುಮಾರು 300ರಷ್ಟು ಮನೆಗಳಿದ್ದು, ಇದ್ದ ಬಾವಿ, ನೀರಿನ ಆಶ್ರಯವು ಬತ್ತಿ ಹೋಗಿರುತ್ತದೆ. ಅಬೂಬಕರ್‌ ಅವರ ಮನೆಯ ಬಾವಿಯಲ್ಲಿ ಹೇರಳವಾಗಿ ಹೊಂದಿರುವ ನೀರು ಮತ್ತು ಕಡಿಮೆಯಾದಲ್ಲಿ ತಮ್ಮದೇ ಇತರ ಬಾವಿಗಳ ನೀರನ್ನು 8 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ಗಳಿಗೆ ತುಂಬಿಸಿ ಸ್ವಂತ ಖರ್ಚಿನಲ್ಲಿಯೇ ಟೆಂಪೋದಲ್ಲಿ ಸರಬರಾಜು ಮಾಡಿ ಈ ಸರಕಾರಿ ಗುಡ್ಡೆಯ ಕಾಲನಿಯ ಬೇಡಿಕೆಯುಳ್ಳ ಮನೆಗಳಿಗೆ ಜಾತಿ-ಮತ, ಪಕ್ಷ, ಭೇದ ಮರೆತು ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ದಿನವೊಂದರ 200ರಿಂದ 300 ಲೀಟರ್‌ಗೂ ಅಧಿಕ ನೀರನ್ನು ಪ್ರತೀ ಮನೆಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಉದ್ಯಮಿ ಅಬೂಬಕರ್‌ ಮನೆಮಂದಿಯ ಸಹಕಾರದೊಂದಿದೆ ಸರಬರಾಜು ಮಾಡುತ್ತಿದ್ದು, ಜನಸೇವೆಯಲ್ಲಿ ನಿರತರಾಗಿರುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next