ಸಂಘಟನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ.
Advertisement
ಮಹಾನಗರ ಪಾಲಿಕೆ ವ್ಯಾಪ್ತಿಯ 15ನೇ ವಾರ್ಡ್‌ನ ಭಾರತ್ ಕಾಲೋನಿ 1ನೇ ಕ್ರಾಸ್ ಕುಂಬಾರ ಓಣಿ ಪಕ್ಕದಲ್ಲಿರುವ 40ಕ್ಕೂಹೆಚ್ಚು ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಹಾಗಾಗಿ ಇಲ್ಲಿನ ಜನರು ಈಗಲೂ ಬಹಿರ್ದೆಸೆಗೆ ಬಯಲಿಗೆ ಹೋಗಬೇಕಿದೆ.
ಬಯಲು ಶೌಚಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಮಹಿಳೆಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೊಮ್ಮೆ ರಾತ್ರಿ ಆಗುವರೆಗೆ ಕಾಯಬೇಕಾಗುತ್ತದೆ. ವಯಸ್ಕ ಹೆಣ್ಣು ಮಕ್ಕಳ ಸ್ಥಿತಿಯ ಬಗ್ಗೆ ಹೇಳುವಂತೆಯೇ ಇಲ್ಲ ಎಂದು ಪ್ರತಿಭಟನಾಕಾರರು ಅಳಲು
ತೋಡಿಕೊಂಡರು.
ಶೌಚಾಲಯ ವ್ಯವಸ್ಥೆ ಇಲ್ಲ. ಇಲ್ಲಿನ ಹೆಣ್ಣು ಮಕ್ಕಳು ಬಯಲು ಶೌಚಾಲಯಕ್ಕೆ ಹೋಗಲು ಭಯಪಡುತ್ತಾರೆ. ಶೌಚಕ್ಕೆ ಹೋಗುವ
ಹೆಣ್ಣು ಮಕ್ಕಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು. ಶೌಚಕ್ಕೆ ಕುಳಿತವರ ಮೇಲೆ ಕಲ್ಲು ಎಸೆಯುವುದು ಸಹ ನಡೆಯುತ್ತದೆ
ಎಂದು ತಿಳಿಸಿದರು. ಸ್ಮಾರ್ಟ್‌ಸಿಟಿ ಯೋಜನೆಯಡಿ ಎಲ್ಲಾ ಕಡೆ ರಸ್ತೆ ಮಾಡಲಾಗುತ್ತಿದೆ. ಮಹಿಳೆಯರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆ ದೂರ
ಮಾಡುವ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿತರು ಗಮನ ಹರಿಸಿಲ್ಲ. ಮೊದಲು ಭಾರತ್ ಕಾಲೋನಿ 1ನೇ ಕ್ರಾಸ್ ಕುಂಬಾರ
ಓಣಿ, ಬಾಷಾನಗರ 2ನೇ ಕ್ರಾಸ್ ರುದ್ರಭೂಮಿ ಪಕ್ಕದ ನಿವಾಸಿಗಳಿಗೆ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಕೊಳಗೇರಿಯಲ್ಲಿ ಶೌಚಾಲಯ ವ್ಯವಸ್ಥೆಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಸಲ್ಲಿಸಿ, ಹೋರಾಟ ನಡೆಸಲಾಗಿದೆ.
Related Articles
Advertisement
ಸ್ಲಂ ಜನಾಂದೋಲನ ಜಿಲ್ಲಾ ಸಂಚಾಲಕಿ ರೇಣುಕ ಯಲ್ಲಮ್ಮ ಹಾವೇರಿ, ಪುಷ್ಪಮ್ಮ, ಹುಲುಗಮ್ಮ, ಪಾರ್ವತಿ, ಎಚ್. ಶಂಕರ್,ಎಂ. ಬಸವರಾಜ್, ಶಬೀºರ್, ಗಂಗಮ್ಮ, ಸಿ. ರೇಖಾ, ಹೊಳಿಯಮ್ಮ, ಜಯಂತಿ, ಜಯಂತಿ, ಕೆ. ಹನುಮಂತಪ್ಪ, ಶಾಂತಮ್ಮ, ಗೀತಮ್ಮ, ಚಂದ್ರಮ್ಮ, ವಸಂತಮ್ಮ, ರಂಜಿತಾ, ಬಸಪ್ಪ, ರುದ್ರಗೌಡ, ಚಂದ್ರಪ್ಪ, ಸಂತೋಷ್‌ನಾಯ್ಕ, ಸರೋಜಾ, ನಿರ್ಮಲ ಇತರರು ಇದ್ದರು.