Advertisement

ರೈತರಿಗೆ ಸೂಕ್ತ ಪರಿಹಾರ ನೀಡಿ

03:58 PM Jan 06, 2021 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ನೆರೆ ಮತ್ತು ಬರದಿಂದ ತತ್ತರಿಸಿರುವ ರೈತರಿಗೆ ಸೂಕ್ತ ಪರಿಹಾರ ಮಂಜೂರು ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಸಂಯೋಜಕ, ಕಿಸಾನ್‌ ಘಟಕದಕಾರ್ಯಾಧ್ಯಕ್ಷ ಮಾಣಿಕರಡ್ಡಿ ಕುರಕುಂದಿ ಆಗ್ರಹಿಸಿದ್ದಾರೆ.

Advertisement

ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾದಗಿರಿ ಜಿಲ್ಲೆಯಲ್ಲಿಭೀಮಾ ಪ್ರವಾಹದಿಂದ ಮತ್ತುನಿರಂತರ ಸುರಿದ ಧಾರಾಕಾರಮಳೆಯಿಂದ ಹತ್ತಿ ಮತ್ತು ಭತ್ತದಬೆಳೆಗಳು ಹಾನಿಯಾಗಿದೆ.ಎಕರೆಗೆ ಮೂವತ್ತು ಸಾವಿರಖರ್ಚು ಮುಡಿದಂತ ಭತ್ತದಬೆಳೆಗಾರರು ಎಕರೆಗೆ 15 ಸಾವಿರವೆಚ್ಚ ಮಾಡಿದ ಹತ್ತಿ ಬೆಳೆಗಾರರು ಯಾವುದೇ ಉತ್ಪನ್ನವಿಲ್ಲದೇಸಂಕಷ್ಟದಲ್ಲಿದ್ದು ಸರ್ಕಾರ ನೆರವಿಗೆಧಾವಿಸಬೇಕು ಎಂದಿದ್ದಾರೆ.

ಕೇಂದ್ರ ಸರ್ಕಾರದ ಮೇಲೆಒತ್ತಡ ಹೇರಿ ತಮ್ಮದೇ ಸರ್ಕಾರಇರುವುದರಿಂದ ರಾಜ್ಯ-ಕೇಂದ್ರಸರ್ಕಾರ ಕೂಡಿ ಜಿಲ್ಲೆಯರೈತರಿಗೆ ಸಮರ್ಪಕ ಪರಿಹಾರನೀಡಬೇಕೆಂದು ಹಾಗೂಜಿಲ್ಲೆಯ ರೈತರ ಸಂಪೂರ್ಣಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಯಾದಗಿರಿ ಜಿಲ್ಲೆಯ 3 ತಾಲೂಕು ರಚನೆ ಮಾಡಿದ್ದುಇಲ್ಲಿಯವರೆ ತಾಲೂಕುಕಚೇರಿ ಪ್ರಾರಂಭ ಮಾಡಿಲ್ಲ ತಾಲೂಕು ಕೇಂದ್ರದ ಉದ್ದೇಶ ಈಡೇರಿಲ್ಲ ಸಾರ್ವಜನಿಕರು, ರೈತರಿಗೆ ಉತ್ತಮ ಸರ್ಕಾರಿಸೇವೆ ದೊರೆಯುತ್ತಿಲ್ಲ.ಹಾಗಾಗಿ ಸಮರ್ಪಕ ತಾಲೂಕುಅನುಷ್ಠಾನಕ್ಕೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕ್ಷೇತ್ರಾಭಿವೃದ್ಧಿಯೇ ಮೂಲ ಗುರಿ :

Advertisement

ಯಾದಗಿರಿ: ಸಮಗ್ರ ಗುರುಮಠಕಲ್‌ ಕ್ಷೇತ್ರದ ಅಭಿವೃದ್ಧಿಯೇ ಶಾಸಕರ ಗುರಿಯಾಗಿದೆ. 2018ರ ವಿಧಾನಸಭೆಚುನಾವಣೆ ಸಂದರ್ಭದಲ್ಲಿ ಕ್ಷೇತ್ರದಜನತೆಗೆ ನೀಡಿದ್ದ ಭರವಸೆ ಈಡೇರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಜೆಡಿಎಸ್‌ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ಹೇಳಿದರು.

ನಗರದಲ್ಲಿರುವ ಗುರುಮಠಕಲ್‌ಶಾಸಕರ ಜನಸಂಪರ್ಕ ಕಚೇರಿಯಲ್ಲಿಕೊಂಕಲ್‌ ವಲಯದ ಕಾಂಗ್ರೆಸ್ಮತ್ತು ಬಿಜೆಪಿ ಕಾರ್ಯಕರ್ತರನ್ನುಪಕ್ಷಕ್ಕೆ ಬರಮಾಡಿಕೊಂಡು ಅವರುಮಾತನಾಡಿದರು.ಗುರುಮಠಕಲ್‌ ಕ್ಷೇತ್ರದಲ್ಲಿ ಈ ಬಾರಿ ಗ್ರಾಪಂ ಚುನಾವಣೆಯಲ್ಲಿಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ನಮ್ಮ ಬೆಂಬಲಿತಅಭ್ಯರ್ಥಿಗಳು ಕ್ಷೇತ್ರದಿಂದ 22ರಿಂದ 25 ಪಂಚಾಯಿತಿಗಳಲ್ಲಿ ಅಧಿಕಾರಹಿಡಿಯಲಿದ್ದಾರೆ. ಈ ಚುನಾವಣೆಮುಂದಿನ ಜಿಪಂ, ತಾಪಂ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.

ಯುವ ಮುಖಂಡ ನಿತ್ಯಾನಂದ ಪೂಜಾರಿ ಮಾತನಾಡಿ, ಕ್ಷೇತ್ರದಜನತೆ ಯುವ ನಾಯಕ ಶರಣಗೌಡಕಂದಕೂರ ದೂರದೃಷ್ಟಿಗೆ ಎಲ್ಲೆಡೆಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಅವರ ನಾಯಕತ್ವದಲ್ಲಿ ಮತಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇಅನುಮಾನವಿಲ್ಲ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಬಿಜೆಪಿ ತೊರೆದ ಆನಂದ ಗಂಗಮ್ಮೊಳ, ತುಳಜಾರಾಮ್ ಕಟ್ಟೆಲ್, ಆನಂದ, ಮಲ್ಲುರೆಡ್ಡಿ, ಆನಂದ ಪಲ್ಲೇನೋರ ನಂದೆಪಲ್ಲಿ, ಬಸವರಾಜಪೂಜಾರಿ, ಸಂಗೀತಾ ಸಾಯಿಬಣ್ಣ ಜೆಡಿಎಸ್‌ಗೆ ಸೇರ್ಪಡೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next