Advertisement

ಕೋತಿಗಳಿಗೆ ಸೂಕ್ತ ನೆಲೆ ಒದಗಿಸಿ: ದೆಹಲಿ ಹೈಕೋರ್ಟ್‌

08:30 AM Sep 19, 2017 | Team Udayavani |

ನವದೆಹಲಿ: “ಕೋತಿಗಳು ಮನುಕುಲದ ಮೂಲ. ಆದರೆ ಮಾನವರು “ನಾಗರಿಕತೆ ಹೆಸರಲ್ಲಿ ಅವುಗಳನ್ನು ಒಕ್ಕಲೆಬ್ಬಿಸಿದ್ದಾರೆ,’ ಎಂದು ದೆಹಲಿ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ. “ಮಾನವನ ಈ ಸ್ವಾರ್ಥ ಕಾರಣಕ್ಕಾಗಿ ಕೋತಿಗಳು ಇಂದು ಕಸದ ರಾಶಿ, ತೊಟ್ಟಿಯಲ್ಲಿ ಆಹಾರ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ,’ ಎಂದೂ ಖೇದ ವ್ಯಕ್ತಪಡಿಸಿರುವ ಕೋರ್ಟ್‌, “ಈ ಪ್ರಾಣಿಗಳನ್ನು “ಗೌರವ’ದಿಂದ ಕಾಣುವ ಮತ್ತು ಅವುಗಳಿಗೆ “ಸೂಕ್ತ ನೆಲೆ’ ಒದಗಿಸುವ ಅಗತ್ಯವಿದೆ,’ ಎಂದಿದೆ. ಸ್ಥಳೀಯ ಪಾಲಿಕೆಗಳು ಕೋತಿಗಳನ್ನು ಹಿಡಿದು ಅವುಗಳನ್ನು ಸ್ಥಳಾಂತರಿಸುವಂತೆ 2007ರಲ್ಲಿ ಹೈಕೋರ್ಟ್‌ ನೀಡಿದ ಆದೇಶ ಮಾರ್ಪಡಿಸುವಂತೆ ಕೋರಿ ದೆಹಲಿ ಪಾಲಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next