Advertisement

ಭದ್ರತಾ ಖಾತ್ರಿ ಒದಗಿಸಿ: ರೆಫ್ರಿ ಆಗ್ರಹ

12:44 PM Aug 29, 2017 | Team Udayavani |

ಪಲ್ಲೆಕಿಲೆ: ಭಾರತ-ಶ್ರೀಲಂಕಾ ನಡುವಿನ ತೃತೀಯ ಏಕದಿನ ಪಂದ್ಯದ ವೇಳೆ ಒಂದು ವರ್ಗದ ಪ್ರೇಕ್ಷಕರು ಅಂಗಳಕ್ಕೆ ಬಾಟ್ಲಿ ಹಾಗೂ ಇನ್ನಿತರ ವಸ್ತುಗಳನ್ನೆಸೆದ ಘಟನೆಯನ್ನು ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಗಂಭೀರವಾಗಿ ಪರಿಗಣಿಸಿ ದ್ದಾರೆ. ಮುಂದಿನ ಪಂದ್ಯ ಗಳ ವೇಳೆ ಆಟಗಾರರಿಗೆ ಭದ್ರತಾ ಖಾತ್ರಿ ಒದ ಗಿಸುವಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಆಗ್ರ ಹಿಸಿದ್ದಾರೆ.

Advertisement

ಭಾರತದ ಗೆಲುವಿಗೆ ಇನ್ನೇನು 8 ರನ್‌ ಅಗತ್ಯವಿದೆ ಎನ್ನುವಾಗ ಪಲ್ಲೆಕಿಲೆ ಸ್ಟೇಡಿಯಂನ ಹುಲ್ಲುಹಾಸಿನ ವಿಭಾಗದಲ್ಲಿದ್ದ ವೀಕ್ಷ ಕರು ರೊಚ್ಚಿಗೆದ್ದು ಲಂಕಾ ಕ್ಷೇತ್ರರಕ್ಷಕರತ್ತ ಪ್ಲಾಸ್ಟಿಕ್‌ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ಎಸೆದಿದ್ದರು. ತವರಿನ ತಂಡ ಏಕದಿನದಲ್ಲೂ ಸರಣಿ ಸೋಲುವುದನ್ನು ಇವರಿಂದ ಸಹಿಸಲಾಗಿರಲಿಲ್ಲ. ಇದರಿಂದ ಸುಮಾರು 35 ನಿಮಿಷ ಆಟ ಸ್ಥಗಿತಗೊಂಡಿತು.

“ಈ ಘಟನೆಯ ಬಳಿಕ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಬೆನ್ನು ಬೆನ್ನಿಗೆ ತುರ್ತು ಸಭೆಗಳನ್ನು ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುವ ಪ್ರಯತ್ನ ಮಾಡಿದೆ. ಭದ್ರತಾ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಭದ್ರತಾ ಯೋಜನೆಗಳನ್ನೂ ರೂಪಿಸ ಲಾಗಿದೆ. ಕೊಲಂಬೋದಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಲಾಗುವುದು’ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಅಧಿಕಾರಿ
ಯೊಬ್ಬರು ತಿಳಿಸಿದ್ದಾರೆ.

ನಾಟಕೀಯ ಬೆಳವಣಿಗೆಗಳು
ರವಿವಾರದ ಘಟನೆಯ ವೇಳೆ ಕೆಲವು ನಾಟ ಕೀಯ ಬೆಳವಣಿಗೆಗಳೂ ಸಂಭವಿಸಿದವು. ಅಂಪಾ ಯರ್‌ಗಳು ಪಂದ್ಯವನ್ನು ನಿಲ್ಲಿಸುವ ಸೂಚನೆ ನೀಡಿದರು. ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಂಡು ಪೆವಿಲಿಯನ್‌ ಸೇರಿಕೊಂಡರು. ಸ್ವಲ್ಪ ಹೊತ್ತಿನಲ್ಲಿ ಎಲ್ಲರೂ ಮತ್ತೆ ಮೈದಾನಕ್ಕಿಳಿದರು. ದುಂಡಾವರ್ತಿ ನಡೆಸಿದ ವಿಭಾಗದ ವೀಕ್ಷಕರನ್ನು ಹೊರಗಟ್ಟಿ ಆಟವನ್ನು ಮುಂದುವರಿಸಲಾಯಿತು. ಆಗ 1996ರ ವಿಶ್ವಕಪ್‌ ಕೂಟದ ಭಾರತ-ಶ್ರೀಲಂಕಾ ನಡುವಿನ ಕೋಲ್ಕತಾದ ಸೆಮಿಫೈನಲ್‌ ಪಂದ್ಯದ ದೃಶ್ಯಾವಳಿ ಕಣ್ಮುಂದೆ ಸುಳಿದು ಹೋಯಿತು. ಅಂದು ಲಂಕೆ ಎದುರು ಭಾರತ ಸೋಲುತ್ತಿದ್ದಾಗ ವೀಕ್ಷಕರು ಭಾರೀ ದುಂಡಾವರ್ತಿ ನಡೆಸಿ ಸ್ಟೇಡಿಯಂಗೆ ಅಗ್ನಿಸ್ಪರ್ಶ ಮಾಡಿದ್ದರು. ರವಿವಾರದ ಅಹಿತಕರ ಘಟನೆಯಿಂದ ದ್ವೀಪ ರಾಷ್ಟ್ರದ ಕ್ರಿಕೆಟ್‌ ಮತ್ತೆ ಕೆಟ್ಟ ಕಾರಣಕ್ಕಾಗಿ ಸುದ್ದಿ ಯಾಗಿದೆ. ಡಂಬುಲದ ಮೊದಲ ಪಂದ್ಯದಲ್ಲಿ ಲಂಕಾ ಸೋತಾಗ ಅಭಿಮಾನಿಗಳು ತಂಡದ ಬಸ್ಸನ್ನು ಅರ್ಧ ಗಂಟೆ ಕಾಲ ತಡೆದು ನಿಲ್ಲಿಸಿ ತಮ್ಮ ಆಕ್ರೋಶವನ್ನು ಹೊರಗೆಡಹಿದ್ದರು.

ಗಾವಸ್ಕರ್‌ ಖಂಡನೆ
ಈ ವಿದ್ಯಮಾನವನ್ನು ಸುನೀಲ್‌ ಗಾವಸ್ಕರ್‌ ಖಂಡಿಸಿದ್ದು, “ಕ್ರಿಕೆಟಿಗರು ಶ್ರೇಷ್ಠ ಪ್ರದರ್ಶನ ನೀಡುವಾಗ ವೀಕ್ಷಕರಿಗೆ ಹೇಗೆ ಮೈದಾನಕ್ಕೆ ಬೆಲೆ ಬಾಳುವ ವಸ್ತುಗಳನ್ನು ಎಸೆಯುವ ಅಧಿಕಾರವಿಲ್ಲವೋ ಹಾಗೆಯೇ ತಂಡದ ಸೋಲಿನ ಸಮಯದಲ್ಲೂ ಬಾಟ್ಲಿ ಮೊದಲಾದ ಯಾವುದೇ ವಸ್ತುವನ್ನು ಎಸೆಯುವ ಅಧಿಕಾರವಿಲ್ಲ’ ಎಂದು ನುಡಿದಿದ್ದಾರೆ.

Advertisement

ಫೀಲ್ಡ್‌ನಲ್ಲೇ ಮಲಗಿದ ಧೋನಿ
ಈ ಘಟನೆಯ ವೇಳೆ ಎಲ್ಲರೂ ತೀವ್ರ ಒತ್ತಡಲ್ಲಿದ್ದರೆ ಮಹೇಂದ್ರ ಸಿಂಗ್‌ ಧೋನಿ ಮಾತ್ರ ಕೂಲ್‌ ಆಗಿ ಕ್ರೀಡಾಂಗಣದಲ್ಲೇ ಉದ್ದಕ್ಕೆ ಮಲಗಿಕೊಂಡಿದ್ದಾರೆ. ಈ ಫೋಟೋ ಟ್ವಿಟರ್‌ನಲ್ಲಿ ಈಗ ವೈರಲ್‌ ಆಗಿದೆ. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಲೈಕ್ಸ್‌, ಕಾಮೆಂಟ್ಸ್‌ ಮಾಡಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
    ಶ್ರೀಲಂಕಾ ವಿರುದ್ಧ ಭಾರತ ಸತತ 8 ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿತು. ಇದು ನಿರ್ದಿಷ್ಟ ತಂಡವೊಂದರ ವಿರುದ್ಧ ಭಾರತ ಸಾಧಿಸಿದ ಅತ್ಯಧಿಕ ಸಂಖ್ಯೆಯ ಸತತ ಸರಣಿ ಗೆಲುವು. ಈ ದಾಖಲೆ ಯಾದಿಯಲ್ಲಿ ಭಾರತಕ್ಕೆ ಜಂಟಿ ದ್ವಿತೀಯ ಸ್ಥಾನ. ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಕೂಡ ಸತತ 8 ಸರಣಿಗಳನ್ನು ಗೆದ್ದಿತ್ತು. ವಿಶ್ವದಾಖಲೆ ಕೂಡ ಪಾಕಿಸ್ಥಾನ ಹೆಸರಲ್ಲೇ ಇದೆ. ಅದು ವೆಸ್ಟ್‌ ಇಂಡೀಸ್‌ ವಿರುದ್ಧ ಸತತ 9 ಏಕದಿನ ಸರಣಿಗಳನ್ನು ಜಯಿಸಿತ್ತು.

     ಜಸ್‌ಪ್ರೀತ್‌ ಬುಮ್ರಾ ಏಕದಿನ ಪಂದ್ಯವೊಂದರಲ್ಲಿ ಮೊದಲ ಸಲ 5 ವಿಕೆಟ್‌ ಉರುಳಿಸಿದರು (27ಕ್ಕೆ 5). ಕಳೆದ ವರ್ಷ ಜಿಂಬಾಬ್ವೆ ವಿರುದ್ಧ 22ಕ್ಕೆ 4 ವಿಕೆಟ್‌ ಪಡೆದದ್ದು ಬುಮ್ರಾ ಅವರ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. 

     ಬುಮ್ರಾ “ಲಿಸ್ಟ್‌ ಎ’ ಕ್ರಿಕೆಟ್‌ನಲ್ಲೂ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದರು (27ಕ್ಕೆ 5). 2015-16ರ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ದಿಲ್ಲಿ ವಿರುದ್ಧ 28ಕ್ಕೆ 5 ವಿಕೆಟ್‌ ಉರುಳಿಸಿದ್ದು ಹಿಂದಿನ ಉತ್ತಮ ಬೌಲಿಂಗ್‌.

     ಬುಮ್ರಾ ಅತೀ ಕಡಿಮೆ 19 ಪಂದ್ಯಗಳಲ್ಲಿ 4 ಸಲ 4 ಪ್ಲಸ್‌ ವಿಕೆಟ್‌ ಹಾರಿಸಿ ಭಾರತೀಯ ದಾಖಲೆ ಬರೆದರು. ಹಿಂದಿನ ಸಾಧಕ ಮೊಹಮ್ಮದ್‌ ಶಮಿ. ಅವರು 4 ಸಲ “4 ಪ್ಲಸ್‌’ ವಿಕೆಟ್‌ ಕೀಳಲು 35 ಪಂದ್ಯಗಳನ್ನಾಡಿದ್ದರು.

     ರೋಹಿತ್‌ ಶರ್ಮ 12ನೇ ಶತಕ ಹೊಡೆದರು. ವಿದೇಶದಲ್ಲಿ ದಾಖಲಾದ 8ನೇ ಶತಕ. ಶ್ರೀಲಂಕಾದಲ್ಲಿ ಮೊದಲನೆಯದು. 

    ಧೋನಿ ಯಶಸ್ವಿ ಚೇಸಿಂಗ್‌ ವೇಳೆ ನೂರರ ಸರಾಸರಿ (101.84) ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿದರು (ಕನಿಷ್ಠ ಸಾವಿರ ರನ್‌ ಮಾನದಂಡ). 

     ಲಹಿರು ತಿರಿಮನ್ನೆ ಭಾರತದ ವಿರುದ್ಧ ಸತತ 3 ಪಂದ್ಯಗಳಲ್ಲಿ 50 ಪ್ಲಸ್‌ ರನ್‌ ಬಾರಿಸಿದ ಶ್ರೀಲಂಕಾದ 6ನೇ ಬ್ಯಾಟ್ಸ್‌ಮನ್‌ ಎನಿಸಿದರು. ಭಾರತದೆದುರಿನ ಹಿಂದಿನೆರಡು ಪಂದ್ಯಗಳಲ್ಲಿ ಅವರು 59 ಹಾಗೂ 52 ರನ್‌ ಹೊಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next