ತುರುವೇಕೆರೆ: ರಾಜ್ಯ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ನೀಡದಿದ್ದರೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದ ವೇಳೆ ಉಪವಾಸ ಸತ್ಯಾಗ್ರಹ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ರಾಜ್ಯಧ್ಯಕ್ಷ ಸಿ. ಎಂ.ನಾಗೇಶ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದಿಂದ ತಾಲೂಕು ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್‌ನಿಂದಾಗಿ ರಾಜ್ಯದ 345ಕ್ಕೂಹೆಚ್ಚು ಖಾಸಗಿ ಶಾಲಾ ಶಿಕ್ಷಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು,ಈಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿ ಸುವುದಾಗಿ ಹೇಳಿದ್ದರೂ ಇಲ್ಲಿಯವರೆಗೂ ಸರ್ಕಾರದಿಂದ ನಯಾಪೈಸೆ ಸಿಕ್ಕಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಧಾರವಾಡ ನ್ಯಾಯಾಲಯ ಪ್ರಾಥಮಿಕ ಶಾಲಾ ಖಾಸಗಿ ಶಿಕ್ಷಕರಿಗೆ 26,300 ಮತ್ತು ಪ್ರೌಢ ಶಾಲಾ ಖಾಸಗಿ ಶಿಕ್ಷಕರುಗಳಿಗೆ 33,300 ರೂ.ಗಳ ಮೂಲ ವೇತನವನ್ನು ಕೊಡಬೇಕೆಂದು ವಿಶೇಷ ಪ್ರಕರಣವೊಂದರಲ್ಲಿ ನ್ಯಾಯಾಲಯ ಆದೇಶ ಹೊರಡಿಸಿದ್ದರೂ ಇಲ್ಲಿಯವರೆಗೆ ಯಾವ ಸರ್ಕಾರ ಗಳು ಪಾಲನೆಮಾಡಿಲ್ಲ ಎಂದು ದೂರಿದರು.
ಶಿಕ್ಷಕರ ಕಲ್ಯಾಣ ನಿಧಿಗೆಖಾಸಗಿ ಶಾಲಾ ಶಿಕ್ಷಕರು ವಂತಿಗೆ ಹಣ ನೀಡುತ್ತಾ ಬಂದಿದ್ದರೂ ಅದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ. ಖಾಸಗಿ ಶಿಕ್ಷಕರಿಗೆ ಸೇವಾ ಭದ್ರತೆಯಿಲ್ಲದ್ದರಿಂದ ನಿವೃತ್ತಿಯ ನಂತರಅವರಬದುಕುಅತಂತ್ರವಾಗಲಿಎಂದರು. ಕರ್ನಾಟಕ ರಾಜ್ಯಖಾಸಗಿ ಶಾಲಾ ಶಿಕ್ಷಕರ ಬಳಗದ ರಾಜ್ಯ ಕಾರ್ಯದರ್ಶಿ ಅಮರೇಂದ್ರ ಮಾತನಾಡಿ,
ಪುಸ್ತಕ ಹಿಡಿದ ಶಿಕ್ಷಕನ ಬದುಕು ಅನಾಥವಾಗಿದ್ದು ಸಂಘಟನೆ, ಹೋರಾಟದ ಮೂಲಕ ನಮ್ಮ ಹಕ್ಕು ಬಾಧ್ಯತೆಗಳನ್ನು ಪಡೆಯಬೇಕಿದೆ ಎಂದರು. ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯಕ್ ಮಾತನಾಡಿ, ನಮ್ಮ ಸಂಘಕ್ಕೆ ರಾಜ್ಯಾದ್ಯಂತ 15 ಸಾವಿರಕ್ಕೂ ಹೆಚ್ಚುಶಿಕ್ಷಕರು ನೋಂದಣಿಯಾಗಿದ್ದಾರೆ. ನಮ್ಮ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೈತಿಕ ಬೆಂಬಲ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ತುಕಾರಾಂ, ಅಧ್ಯಕ್ಷ ಸಿ.ವಿ.ಮೋಹನ್‌ಕುಮಾರ್,ಕಾರ್ಯದರ್ಶಿ ಹೇಮಂತ್, ಉಪನ್ಯಾಸಕರ ಸಂಘದ ಡಾ.ಚಂದ್ರಯ್ಯ, ಶ್ರೀನಿವಾಸ್, ಶಶಿಕುಮಾರ್, ನರಸಿಂಹಮೂರ್ತಿ, ಪ್ರಕಾಶ್, ಸುರೇಂದ್ರಕುಮಾರ್ ಇದ್ದರು.