ಎನ್. ಆರ್. ಪುರ: ಕೃಷಿ ಯಂತ್ರಧಾರೆ ಬಾಡಿಗೆ ಆಧಾರಿತ ಸೇವಾ ಕೇಂದ್ರದಲ್ಲಿ ರೈತರಿಗೆ ಅವಶ್ಯಕವಾಗಿರುವ ಯಂತ್ರಗಳನ್ನು ಬಾಡಿಗೆಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಇಲ್ಲಿನ ಕೃಷಿ ಇಲಾಖೆಯಲ್ಲಿ ಸೋಮವಾರ ನಡೆದ ಕೃಷಿ ಯಂತ್ರಧಾರೆ ಬಾಡಿಗೆ ಆಧಾರಿತ ಸೇವಾ ಕೇಂದ್ರ ಆರಂಭಿಸುವ ಬಗ್ಗೆ ನಡೆದ ಪೂರ್ವಭಾವಿಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ದಿನ ಬಾಡಿಗೆ ನೀಡುವಯಂತ್ರಗಳ ಬಗ್ಗೆ ದಾಖಲೆ ನಿರ್ವಹಿಸಬೇಕು. ಕೃಷಿ ಇಲಾಖೆಯವರು, ಕೃಷಿಕ ಸಮಾಜದವರು ಯಂತ್ರಗಳನ್ನುಬಾಡಿಗೆ ಪಡೆದವರು ಸಮರ್ಪಕವಾಗಿ ಬಳಸುತ್ತಿರುವ ಬಗ್ಗೆ ಸ್ಥಳ ಪರಿಶೀಲನೆನಡೆಸಬೇಕು. ಅಡಕೆ ಸಂಸ್ಕರಣೆಗೆ ಸಹಾಯಕವಾಗುವಂತಹ ಎಲ್ಲಾರೀತಿಯ ಯಂತ್ರಗಳು ರೈತರಿಗೆ ಬಾಡಿಗೆಗೆ ದೊರೆಯುವಂತೆ ನೋಡಿಕೊಳ್ಳಬೇಕು.ಬಾಡಿಗೆಯನ್ನು ಸ್ಥಳೀಯವಾಗಿಪಡೆಯುವ ಬಾಡಿಗೆ ದರಕ್ಕಿಂತ ಕಡಿಮೆ ಬಾಡಿಗೆ ಪಡೆಯಬೇಕೆಂದು ಸಲಹೆ ನೀಡಿದರು.
ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಬಾಡಿಗೆ ಕೇಂದ್ರದಲ್ಲಿ ಐಎಸ್ ಐ ಮುದ್ರೆ ಇರುವ ಯಂತ್ರಗಳು ಖರೀದಿಸಲು ಸೂಚಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಬಾಡಿಗೆದೊರೆಯುವಂತೆ ಮಾಡಬೇಕು.ಪಟ್ಟಣದ ಹೃದಯ ಭಾಗದಲ್ಲಿ ಸೇವಾ ಕೇಂದ್ರ ಆರಂಭಿಸಬೇಕೆಂದರು.
ಸಹಾಯಕ ಕೃಷಿ ಅಧಿಕಾರಿ ಸುಭಾಷ್ ಮಾತನಾಡಿ, ಜಿಲ್ಲೆಗೆ 2019- 20ನೇ ಸಾಲಿನಲ್ಲಿ 16 ಕೃಷಿ ಯಂತ್ರಧಾರೆ ಸೇವಾ ಕೇಂದ್ರ ಮಂಜೂರಾಗಿದ್ದು ಬಾಳೆಹೊನ್ನೂರು ಭಾಗದಲ್ಲಿ ಈ ಹಿಂದೆಆರಂಭಿಸಲಾಗಿದೆ. ಪ್ರಸ್ತುತ ಕಸಬಾ ಹೋಬಳಿ ವ್ಯಾಪ್ತಿಗೆ ಮಂಜೂರಾಗಿದೆ. ಸರ್ಕಾರ ಶೇಕಡ 75 ಸಹಾಯಧನ ನೀಡಲಿದೆ. ಉಳಿದ ಶೇಕಡ 25ರಷ್ಟು ಅನುದಾನ ಸಂಬಂಧಿ ಸಿದ ಏಜೆಸ್ಸಿಯವರು ಭರಿಸಬೇಕು ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ವಿ. ನಿಲೇಶ್ ಮಾತನಾಡಿ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರ ಆರಂಭಿಸುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಪ್ರಸ್ತುತ ಮಂಜೂರಾಗಿದ್ದುಇದನ್ನು ಪಟ್ಟಣದ ವ್ಯಾಪ್ತಿಯಲ್ಲಿ ಆರಂಭಿಸಬೇಕೆಂದರು. ಸಮೃದ್ಧಿ ಕೃಷಿ ಸ್ವಸಹಾಯ ಸಂಘದರಾಜೇಂದ್ರಕುಮಾರ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಕೃಷಿ ಇಲಾಖೆಗೆ ಹೊಂದಿಕೊಂಡತೆ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಲು ಕ್ರಮಕೈಗೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ತಾಪಂ ಅಧ್ಯಕ್ಷೆ ಪ್ರೇಮಾ, ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಜಾನಕೀರಾಂ.ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುಬ್ಬಣ್ಣ. ನಿರ್ದೇಶಕ ಬಸವರಾಜಪ್ಪ, ರೈತಮುಖಂಡ ವಿನಾಯಕ್ ಮಾಳೂರು ದಿಣ್ಣೆ , ಗಣೇಶ್ ಇದ್ದರು