Advertisement

ರೈತರಿಗೆ ಅಗತ್ಯ ಮಾಹಿತಿ ಒದಗಿಸಿ: ರಮೇಶ್‌ಕುಮಾರ್‌

10:03 PM Jun 24, 2021 | Team Udayavani |

ಶ್ರೀನಿವಾಸಪುರ: ರೈತರ ಜೀವಾಳವಾದಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳು ಆಯಾ ಕಾಲಕ್ಕೆ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಕೃಷಿ ಚಟಿವಟಿಕೆ ಗಳಿಗೆ ಉಪಯುಕ್ತವಾದ ಸಾಧನ-ಸಲಕರಣೆ ನೀಡುವ ಮೂಲಕ ಮಾಹಿತಿ ನೀಡಬೇಕೆಂದು ಶಾಸಕಕೆ.ಆರ್‌. ರಮೇಶ್‌ಕುಮಾರ್‌ ಹೇಳಿದರು.

Advertisement

ಶ್ರೀನಿವಾಸಪುರ ಪಟ್ಟಣದಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಅರಿವು ಮೂಡಿಸುವ ರಥಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಉಪಯೋಗವಾಗಲಿ: ರೈತರಿಗೆ ಸಂಬಂಧಪಡುವ ಎಲ್ಲಾ ಇಲಾಖೆಗಳು ರೈತರಿಗೆ ಬೇಕಾದ ಮಾಹಿತಿಯನ್ನು ಆಯಾ ಕಾಲಕ್ಕೆ ನೀಡಬೇಕು.

ಸರ್ಕಾರದಿಂದ ಬರುವ ಅನುದಾನಗಳನ್ನು ಕೃಷಿ ಸಲಕರಣೆ ಇತ್ಯಾದಿಯಾಗಿ ಒದಗಿಸಬೇಕು. ಇನ್ನು ಕಿಸಾನ್‌ ಸಮ್ಮಾನ್‌ ಯೋಜನೆ ರೈತರಿಗೆ ಉಪಯೋಗವಾಗಲಿ ಎಂದು ಆಶಿಸಿದರು. ಇದೇ ವೇಳೆ ರೈತರಿಗೆ ಬಿತ್ತನೆ ಬೀಜ ವಿತರಿಸಿದರು.

ಪ್ರಚಾರದಿಂದ ಅರಿವು: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ ಮಾತನಾಡಿ, ಧ್ವನಿ ವರ್ಧಕದ ಮೂಲಕ ಪ್ರತಿ ಹೋಬಳಿಯಲ್ಲಿ 3 ದಿನ ಪ್ರಚಾರ ಮಾಡಲಾಗುತ್ತದೆ. ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಸರ್ಕಾರದ ಆದೇಶದಂತೆ ಪ್ರಚಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಶ್ರೀನಿ ವಾಸನ್‌, ರಾಜ್ಯ ರೈತ ಸಂಘದ ಎನ್‌.ಶ್ರೀರಾಮರೆಡ್ಡಿ, ಬೈರಾರೆಡ್ಡಿ, ಹೆಬ್ಬಟ ರಮೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next