Advertisement

ರೈತರಿಗೆ ನ್ಯಾಯ, ಸೌವಲತ್ತು ತಲುಪಲಿ: ಲೋಕೇಶ್‌

07:23 AM May 28, 2020 | Lakshmi GovindaRaj |

ಮಾಗಡಿ: ಅನ್ಯಾಯಕ್ಕೆ ಒಳಗಾಗಿರುವ ರೈತರಿಗೆ ನ್ಯಾಯ ಹಾಗೂ ಸಿಗಬೇಕಾದ ಸರ್ಕಾರದ ಸೌಲತ್ತುಗಳು ನೇರವಾಗಿ ರೈತರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಯತ್ನ ಮಾಡಬೇಕು. ಪಟ್ಟಣದ ಕಲುಷಿತ ನೀರು ಭರ್ಗಾವತಿ ಕೆರೆಗೆ  ಹರಿಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಡೆಯಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ಒತ್ತಾಯಿಸಿದ್ದಾರೆ.

Advertisement

ಪಟ್ಟಣದ ಕಲ್ಯಾಗೇಟ್‌ ರೈತ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕೊರೊನಾ ಸಂಕಷ್ಟಕ್ಕೆ ರೈತರು ಒಳಗಾಗಿದ್ದಾರೆ. ತಾಲೂಕು ಕಚೇರಿ ರೆಕಾರ್ಡ್‌ ರೂಮ್‌, ಸರ್ವೇ ಇಲಾಖೆ ಜಡ್ಡು ಹಿಡಿದಿದೆ. ತಹಶೀಲ್ದಾರ್‌ ಈ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕಿದೆ. ಭರ್ಗಾವರಿ  ಕೆರೆಗೆ ಹರಿಯುತ್ತಿರುವ ಕಲುಷಿತ ನೀರನ್ನು ಪುರಸಭೆ ಮುಖ್ಯಾಧಿಕಾರಿಗಳು ತಡೆಯಬೇಕು ಎಂದು ಆಗ್ರಹಿಸಿದರು.

ಕುಣಿಗಲ್‌ನ ಜಾನ್ಸನ್‌ ಕಂಪನಿಯಿಂದ ತಿಪ್ಪಗೊಂಡನ ಹಳ್ಳಿ ಜಲಾಶಯದವರೆಗೆ 66 /11 ಕೆವಿ ದೊಡ್ಡ ಲೈನ್‌ ಹಾದು ಹೋಗಿದೆ.  ಈ ಸಂಬಂಧ ರೈತರ ಜಮೀನು ಭೂಸ್ವಾಧೀನ ವಾಗಿದೆ. ಮರಗಿಡಗಳು ನಾಶ ಮಾಡಿದ್ದಾರೆ. ನಷ್ಟಕೊಳ ಗಾಗಿರುವ ರೈತರಿಗೆ ಸಿಗಬೇಕಾದ ಪರಿಹಾರ ಧನ ನೀಡ ಬೇಕು. ಇಲ್ಲದಿದ್ದರೆ ತಾಲೂಕಾದ್ಯಂತ ಬೃಹತ್‌ ಹೋರಾಟ ಹಮ್ಮಿಕೊಳ್ಳುವುದಾಗಿ ಲೋಕೇಶ್‌ ಎಚ್ಚರಿಕೆ ನೀಡಿದ್ದಾರೆ.

ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ, ರಂಗ ಸ್ವಾಮಿ, ನಾರಾಯಣಪ್ಪ, ಪಟೇಲ್‌ ಹನುಮಂತಯ್ಯ, ಗಂಗರಂಗಯ್ಯ, ಜಯಣ್ಣ, ವೆಂಕಟೇಶ್‌, ಚಿಕ್ಕಣ್ಣ, ಶೇಖರಪ್ಪ,  ದೊಡ್ಡರಂಗಯ್ಯ, ರಂಗಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next