ಜಗಳೂರು: ಮಡ್ರಳ್ಳಿ ಚೌಡೇಶ್ವರಿ ಹಾಗೂ ಕೊಡದಗುಡ್ಡದ ಶ್ರೀವೀರಭದ್ರೇಶ್ವರ ಸ್ವಾಮಿಯ ಜಾತ್ರೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಭಕ್ತಾದಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶಾಸಕ ಎಸ್.ವಿ. ರಾಮಚಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಮಡ್ರಳ್ಳಿ ಸಮುದಾಯ ಭವನದಲ್ಲಿ ಶ್ರೀ ಚೌಡೇಶ್ವರಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಮಾ.22ರಿಂದ 25 ರವರೆಗೆ ಜಾತ್ರೆ ನಡೆಯಲಿದ್ದು, ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ತುರ್ತು ಚಿಕಿತ್ಸೆ, ಅಗ್ನಿ ಶಾಮಕ ವಾಹನ, ಪೊಲೀಸ್ ಭದ್ರತೆ ಮೊದಲಾದ ಸೌಲಭ್ಯ ಒದಗಿಸಬೇಕು.
22 ರಂದು ರಥೋತ್ಸವ ಜರುಗುವಾಗ ದೇವಾಲಯದ ಸಮೀಪ ಬೃಹತ್ ವಾಹನಗಳ ಸಂಚಾರ ನಿರ್ಬಂಧಿಸಬೇಕು. ಜಾತ್ರೆಯಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಕೊಂಡುಕುರಿ, ಪಶುಪಾಲನೆ, ಕಂದಾಯ, ಶಿಕ್ಷಣ ಇಲಾಖೆ, ರೇಷ್ಮೇ ಸೇರಿದಂತೆ ಹಲವು ಇಲಾಖೆಗಳ ವಸ್ತು ಪ್ರದರ್ಶನ ಏರ್ಪಡಿಸಿದರೆ ಜನರಿಗೆ ವಿವಿಧ ಇಲಾಖೆಗಳ ಮಾಹಿತಿ ಲಭ್ಯವಾಗಲಿದೆ. ಇದೇ ರೀತಿ ಕೊಡದಗುಡ್ಡದಲ್ಲಿ ನಡೆಯುವ ಜಾತ್ರೆಯಲ್ಲೂ ಸಹ ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು.
ಜಿಪಂ ಸದಸ್ಯ ಎಸ್.ಕೆ. ಮಂಜುನಾಥ್, ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ, ಇಓ ಜಾನಕಿರಾಮ್, ಜಿಪಂ ಸಹಾಯಕ ಕಾರ್ಯ ನಿರ್ವಾಹಕಾಧಿಕಾರಿ ಬಾಲಸ್ವಾಮಿ, ಟಿಎಚ್‌ಓ ನಾಗರಾಜ್, ಬೆಸ್ಕಾ ಇಂಜಿನಿಯರ್ ಪ್ರವೀಣಕುಮಾರ್, ಸಿಪಿಐ ಪ್ರವೀಣ್
ನೀಲಮ್ಮನವರ್, ಬಿಳಿಚೋಡು ಪಿಎಸ್‌ಐ ಉಮೇಶಬಾಬು, ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಹನುಮಂತಪ್ಪ, ಮುಖಂಡರಾದ ಚಂದ್ರಪ್ಪ, ಗಿರಿಯಪ್ಪ, ದಳಪತಿ ಬಸೆಟ್ಟೆಪ್ಪ, ಮಲ್ಲೇಶಪ್ಪ, ಪೂಜಾರಿ ಮಲ್ಲಪ್ಪ, ಕಾಡಪ್ಪ, ಹಳ್ಳೆಪ್ಪ, ಪಿಡಿಒ ನಾಗರಾಜ್, ಶಿವಕುಮಾರ್, ಶಶಿಧರ ಪಾಟೀಲ್, ಅಂಜಿನಪ್ಪ, ಕರಿಯಪ್ಪ ಹಾಜರಿದ್ದರು.