Advertisement

ನೆರೆ ಸಂತ್ರಸ್ತರಿಗೆ ಶೀಘ್ರ ಸೂಕ್ತ ಪರಿಹಾರ ಕಲ್ಪಿಸಿ: ಮಾಜಿ ಸಿ.ಎಂ ಸಿದ್ದರಾಮಯ್ಯ

03:33 PM Sep 18, 2019 | Suhan S |

ಬೆಂಗಳೂರು : ಈಶ್ವರಪ್ಪ ಸಂಸ್ಕೃತಿ ಇಲ್ಲದ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್. ಕೆಟ್ಟ ಭಾಷೆ ಮಾತಾನಾಡಲು ಎಲ್ಲರಿಗೂ ಬರುತ್ತದೆ. ಜನ ಜನಪ್ರತಿನಿಧಿ ಗಳ ಬಗ್ಗೆ ಜನರು ನೋಡುತ್ತಾರೆ. ಕೆಟ್ಟದಾಗಿ ಮಾತನಾಡುವುದು ಅವರ ಕಸುಬಾಗಿದೆ. ಬಿಜೆಪಿಗೆ ಓಟು ಹಾಕುವವರು ಮಾತ್ರ ದೇಶಭಕ್ತ ಮುಸ್ಲೀಮರು ಎಂದು ಹೇಳುತ್ತಾರೆ. ಕಾಂಗ್ರೆಸ್ ಗೆ ಓಟ್ ಹಾಕೋರು ಪಾಕಿಸ್ತಾನದ ಪರ ಇದ್ದಾರೆ ಅಂತ ಹೇಳ್ತಾರೆ. ಅವರ ಮಾತಿಗೆ ಅರ್ಥ ಇದೇಯಾ? ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ ಗುಡುಗಿದರು.

Advertisement

ವಿಶೇಷ ಶಾಸಕಾಂಗ ಸಬೆ ಕರೆಯಲಾಗಿತ್ತು ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಬೀಕರ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. 22 ಜಿಲ್ಲೆ 103 ತಾಲೂಕಿನಲ್ಲಿ ಹಿಂದೆಂದಿಗಿಂತಲೂ ಪ್ರವಾಹ ಹೆಚ್ಚಾಗಿದೆ. ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಮನೆಗೆ ನೀರು ನುಗ್ಗಿರುವ ಕುಟುಂಬಗಳಿಗೆ 10 ಸಾವಿರ ಪರಿಹಾರ ನೀಡಿಲ್ಲ.  ತಾತ್ಕಾಲಿಕ ಶೆಡ್ ಹಾಕಿಕೊಟ್ಟಿಲ್ಲ. 10 ಸಾವಿರ ಪಾತ್ರೆ, ಬಟ್ಟೆ, ಮಕ್ಕಳ ಪುಸ್ತಕ ಹಾಸಿಗೆ ಗಳನ್ನು ತೆಗೆದುಕೊಳ್ಳಲು ಕೊಟ್ಟಿದ್ದಾರೆ. ಒಂದು ಮನೆಯಲ್ಲಿ ನಾಲ್ಕೈದು ಕುಟುಂಬ ಇರುತ್ತವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ನಮಗೂ ಈ ಪ್ರವಾಹಕ್ಕೂ ಸಂಬಂಧವಿಲ್ಲ ಎನ್ನುವಂತೆ. ಇದ್ದಾರೆ.  ಪ್ರಧಾನಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರವೂ ಒತ್ತಡ ಹೇರುವ ಕೆಲಸ ಮಾಡುತ್ತಿಲ್ಲ. ಬೆಂಗಳೂರಿಗೆ ಬಂದರೂ ಪ್ರಧಾನಿ ಒಂದು ಮಾತನಾಡಿಲ್ಲ.  ರಾಜ್ಯದಲ್ಲಿ ಬರಗಾಲವಿಲ್ಲ ಬಿದ್ದಿದೆ. ಬರ ತಾಲೂಕು ಘೋಷಣೆಗೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.

ಸೂಕ್ತ ಪರಿಹಾರ ಕಲ್ಪಿಸಲು ಒತ್ತಾಯಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಧಾನಸೌಧದ ಮಧ್ಯದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಈ ವೇಳೆಯಲ್ಲಿ ಅನುದಾನ ತಾರತಮ್ಯದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರ ಅಳಲು ತೊಡಿಕೊಂಡರು.

ಅನರ್ಹರು ಅರ್ಹರಾದ್ರು, ನಾವು ಅರ್ಹರಾಗಿ ಅನರ್ಹರಾಗಿದ್ದೇವೆ ಶಾಸಕಾಂಗ ಸಭೆಯಲ್ಲಿ ಕೈ ಶಾಸಕರ ಅಳಲು ಅನರ್ಹ ಶಾಸಕರು ತಂತಮ್ಮ ಕ್ಷೇತ್ರಕ್ಕೆ ಅನುದಾನ ತಂದಿದ್ದಾರೆ ಅನುದಾನ ತರುವ ಮೂಲಕ  ಅನರ್ಹ ಕ್ಷೇತ್ರದ ಜನರ ಮುಂದೆ ಅರ್ಹರಾಗಿದ್ದಾರೆ ಆದ್ರೆ ನಾವು ಅರ್ಹರಾಗಿದ್ದು, ಕ್ಷೇತ್ರದ ಜನರ ಮುಂದೆ ಅನರ್ಹ ರಾಗಿದ್ದೇವೆ  ಉತ್ತರ ಕರ್ನಾಟಕ ಕೈ ಶಾಸಕರು ಸಿಎಲ್ಪಿ ಯಲ್ಲಿ ಸರ್ಕಾರದ ನಡೆಗೆ ಆಕ್ಷೇಪವಿದೆ. ನೆರೆ ವಿಚಾರದಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ. ಅನರ್ಹ ಶಾಸಕರ ಕ್ಷೇತ್ರಗಳಿಗೂ ಹಣ ಬಿಡುಗಡೆ ಮಾಡಿದ್ದಾರೆ. 25 ಕೋಟಿ ಹಣ ಪ್ರತಿಯೊಂದು ಬಿಜೆಪಿ ಕ್ಷೇತ್ರದ ಶಾಸಕರಿರುವ ಕ್ಷೇತ್ರಗಳಿಗೆ ಬಿಡುಗಡೆ ಮಾಡಿದ್ದಾರೆ.ನಮಗೆ ವರ್ಷ ಕೊಡಬೇಕಾದ ಎರಡು ಕೋಟಿ ಶಾಸಕರ ಅನುದಾನ ದಲ್ಲಿ ಬರೀ 50 ಲಕ್ಷ ಬಿಡುಗಡೆ ಮಾಡಿದ್ದಾರೆ.ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

 

 

 

ಇದೇ ಸಂದರ್ಭದಲ್ಲಿ ಮಾತಾನಾಡಿದ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್  ಇಂಥಹ ಕ್ರೂರ ಕೇಂದ್ರ ಸರ್ಕಾರ ಯಾವತ್ತೂ ನೋಡಿಲ್ಲ. ನೆರೆ ಪ್ರವಾಹದಿಂದ ಇಷ್ಟು ಮಟ್ಟಿಗೆ ಹಾನಿಯಾಗಿದೆ. ಅಮಿತ್ ಷಾ, ನಿರ್ಮಲ ಸೀತಾರಾಮ್ ಇಬ್ಬರು ಬಂದ್ರು ಹೋದ್ರು ಏನೂ ಮಾತಾಡಿಲ್ಲ. ಯಡಿಯೂರಪ್ಪ ನವರು ಕೂಡ ಈ ಬಗ್ಗೆ ಬಾಯಿ ಬಿಡ್ತಾ ಇಲ್ಲ  ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ,ಸರ್ಕಾರ ಕೊಡ್ತಾ ಇರೋ 10ಸಾವಿರ ಶೇಕಡ 20 ರಷ್ಟು ಜನರಿಗೆ ತಲುಪಿದೆ.ಸಿಎಂ ಗೆ ಏನು ಮಾಡ್ಬೇಕು ಅನ್ನೋದು ತೋಚುತ್ತಾ ಇಲ್ಲ ಎಂದರು.

ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಾ ಇಲ್ಲ.ಅದಕ್ಕಾಗಿ ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಅನಿವಾರ್ಯ ನಿರ್ಮಾಣ ಆಗಿದೆ. ಇದೇ ತಿಂಗಳ 24ರಂದು ಬೆಳಗಾವಿ ಯಲ್ಲಿ  ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಮುಂದಿನ ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶದಲ್ಲಿ ಪ್ರತಿಭಟನೆ ಮಾಡ್ತೇವೆ, ವಿರೋಧ ಪಕ್ಷದವರನ್ನು ಕರೆದು ಸಿಎಂ ಮಾತುಕತೆ ನಡೆಸುತ್ತಾ ಇಲ್ಲ, ಕರೆದು ಚರ್ಚೆ ಮಾಡಲಿ ಸಿಎಂ ನಾವು ಬರ್ತೆನೆ ಜನರ ಸಮಸ್ಯೆ ಪರಿಹಾರ ಆಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next