Advertisement

ಹಳ್ಳಿಗಳಿಗೆ ಕುಡಿವ ನೀರು ಪೂರೈಸಿ

02:28 PM Sep 25, 2020 | Suhan S |

ಚಿಂತಾಮಣಿ: ಭಕ್ತರಹಳ್ಳಿ ಅರಸೀಕೆರೆ ನೀರನ್ನು ಕೆರೆಯಲ್ಲೇ ಶುದ್ಧೀಕರಿಸಿ ಅಚ್ಚುಕಟ್ಟುದಾರರಿಗೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬೇಕೆಂದು ಪ್ರತಿಭಟಿಸಿದ್ದ ಗ್ರಾಮಸ್ಥ ರೊಂದಿಗೆ ತಹಶೀಲ್ದಾರ್‌ ಹನುಮಂತರಾಯಪ್ಪ ಮತ್ತು ಇಒ ಮಂಜುನಾಥ ಸಭೆ ನಡೆಸಿ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಮೇಲಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

Advertisement

ಸಭೆಯಲ್ಲಿ ಭಕ್ತರಹಳ್ಳಿ, ಅರಿಸೀಕೆರೆಯಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸಿ ಆ ನೀರನ್ನು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಚ್ಚುಕಟ್ಟುದಾರರಿಗೂ ಹಾಗೂ ಶೆಟ್ಟಿಹಳ್ಳಿಯ ಗ್ರಾ.ಪಂನ ಎರಡೂ ಹಳ್ಳಿ ಜೊತೆಗೆ ನಗರಕ್ಕೆ ಪೈಪ್‌ ಲೈನ್‌ ಮೂಲಕ ನೀರು ಹರಿಯುವ ದಾರಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಶುದ್ಧ ನೀರು ಒದಗಿಸಬೇಕೆಂದು ಒತ್ತಾಯಿಸಿದರು. ದಂಡಾಧಿಕಾರಿ ಹನುಮಂತರಾಯಪ್ಪ ಮಾತನಾಡಿ,ಈವಿಚಾರವನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು. ನಾನು ರೈತ ಕುಟುಂಬದಿಂದ ಬಂದಿದ್ದು, ನನಗೂ ರೈತರ ಸಮಸ್ಯೆಗಳ ಬಗ್ಗೆ ತಿಳಿದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.

ತಾಪಂ ಇಒ ಮಂಜುನಾಥ್‌ ಮಾತನಾಡಿ, ಈ ವಿಚಾರವನ್ನು ಜಿಪಂ ಸಿಇಒ ಬಳಿ ಚರ್ಚಿಸಿದ್ದೇನೆ ಎಂದರು. ಕರ್ನಾಟಕ ನಗರ ನೀರು ಸರಬರಾಜು ಇಲಾಖೆಯ ಎಇಇ ಶ್ರೀನಿವಾಸರೆಡ್ಡಿ ಮತ್ತು ಟಿ.ಎಸ್‌.ಸುರೇಶ್‌, ಗ್ರಾಮೀಣ ನೀರು ಸರಬರಾಜು ಇಲಾಖೆಯ ಹೇಮಂತ್‌, ಶಿವಾನಂದ್‌, ಡಿವೈಎಸ್‌ಪಿ ವಿ.ಲಕ್ಷ್ಮಯ್ಯ, ಜಿಪಂ ಸದಸ್ಯ ಶ್ರೀನಿವಾಸ್‌, ಟಿ.ಪಿ.ಎಸ್‌ ಉಪಾಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಆಯುಕ್ತ ಉಮಾಶಂಕರ್‌, ಪದ್ಮನಾಭ್‌, ಗ್ರಾಮಸ್ಥರಾದ ಕತ್ತರಿಗುಪ್ಪೆ, ಹಾಲು ನಾರಾಯಣಸ್ವಾಮಿ, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next