ಕುಂದಾಪುರ:ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ.ಅವರಿಗೆ ಶಿಕ್ಷಣದೊಂದಿಗೆ ಉದ್ಯೋಗ ಸಿಗಬೇಕು. ಖಾಸಗಿ ಸಂಸ್ಥೆಗಳಲ್ಲೂ ಶೇ.5 ಮೀಸಲಾತಿ ನೀಡುವುದರೊಂದಿಗೆ ಎಲ್ಲಾ ಅಂಗವಿಕಲರಿಗೂ ಉಚಿತ ಮನೆ, ನಿವೇಶನ ಹಾಗೂ ವಿಶೇಷ ಶೌಚಾಲಯ ನೀಡಲಿ ಇದು ಭಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಹಾಗೂ ಸಮಾಜ ವಿಜ್ಞಾನಿ ಜಿ.ಎನ್. ನಾಗರಾಜ ಹೇಳಿದರು.
ಅವರು ಕುಂದಾಪುರ ಕಾರ್ಮಿಕ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷದಿಂದ ಇಲ್ಲಿಯವರೆಗೆ ರಾಜ್ಯ-ಕೇಂದ್ರ ಸರಕಾರಗಳು ಅಂಗವಿಕಲರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸದೇ ಇದ್ದುದರಿಂದಾಗಿ ರಾಜ್ಯದ ಅಂಗವಿಕಲರ ಜೀವನದ ಸ್ಥಿತಿಗತಿಗಳಲ್ಲಿ ಯಾವುದೇ ಸುಧಾರಣೆಗಳಾಗಿಲ್ಲ. ಸರಕಾರಗಳು ಅಂಗವಿಕಲರಿಗೆ ಸಮಾನ ಅವಕಾಶ, ಪೂರ್ಣ ಭಾಗವಹಿಸುವಿಕೆ, ಹಕ್ಕುಗಳ ಸಂರಕ್ಷಣೆ ಕುರಿತಂತೆ ಮಾತುಗಳಾಯಿತೇ ವಿನಹ ಕೃತಿಯಲ್ಲಂತೂ ಸಾಧ್ಯವಾಗಲೇ ಇಲ್ಲ. ಹೀಗಾಗಿ ರಾಜ್ಯದ ಅಂಗವಿಕಲನ ಬದುಕು ಉತ್ತಮಗೊಳ್ಳುವುದಿರಲಿ ಸುಧಾರಣೆಯಾಗದೇ ಮತ್ತಷ್ಟು ಕಷ್ಟಗಳಿಗೆ ಸಿಲುಕಿದ್ದಾರೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷ ವೆಂಕಟೇಶ ಕೋಣಿ ಪ್ರಸ್ತಾವಿಕವಾಗಿ ಮಾತನಾಡಿ, ಕನಿಷ್ಠ ಜಿಲ್ಲೆಗೊಂದರಂತೆ ಬುದ್ಧಿಮಾಂದ್ಯ ಮತ್ತು ತೀವ್ರ ಅಂಗವಿಕಲತೆ ಇರುವವರಿಗೆ ಸರಕಾರ ಪುನರ್ವಸತಿ ಕೇಂದ್ರ ತೆರೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಮಂಜುನಾಥ ಹೆಬ್ಟಾರ್ ಕಾಲೊ¤àಡು ಸಮ್ಮೇಳನದ ಅಧ್ಯಕ್ಷತೆ ವಹಿಸಿದರು.
ವಾಗ್‌ಜ್ಯೋತಿ ಕಿವುಡ ಮತ್ತು ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಮೂಡಬಗೆ ಅಂಪಾರು ಇದರ ಮುಖ್ಯೋಪಾಧ್ಯಾಯ ರವೀಂದ್ರ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣ ಪೂಜಾರಿ ಕೋಟೇಶ್ವರ ವರದಿ ಮಂಡಿಸಿದರು. ಮುಖಂಡರಾದ ಜಿ.ಎನ್. ಯಶಸ್ವಿ, ಮುಕಾಂಬು ಯಡ್ತರೆ, ವನಿತಾ ಹೊಂಬಾಡಿ ಮಂಡಾಡಿ, ರಾಜು ಪೂಜಾರಿ ಮುದೂರು, ವಿಲ್ಸನ್ ಹಂಗಳೂರು, ವಿಜಯ ಕಿರಿಮಂಜೇಶ್ವರ, ರಾಧಕೃಷ್ಣ ಬೈಂದೂರು, ಅನಿತಾ ಪಡುವರಿ, ಬಾಬು ಕೆ. ದೇವಾಡಿಗ ಉಪ್ಪುಂದ , ನಾಗರಾಜ ತಲ್ಲೂರು, ವಿಜಯಶ್ರೀ ಕಂಬದಕೋಣೆ, ಕೃಷ್ಣ ನಾಯ್ಕ, ಬ್ರಹ್ಮಾವರ ಅಣ್ಣಯ್ಯ ಕೋಡಿ, ದಿನೇಶ ಶೇರುಗಾರ ಕಂಡೂÉರು ಉಪಸ್ಥಿತರಿದ್ದರು.