Advertisement

ವಿಶೇಷ ಮಕ್ಕಳಿಗೆ ಸರ್ಕಾರದಿಂದ ಸೌಲಭ್ಯ ಒದಗಿಸಿ

05:46 PM May 25, 2018 | Team Udayavani |

ಇಳಕಲ್ಲ: ಬೆಳವಣಿಗೆಯಲ್ಲಿ ನ್ಯೂನ್ಯತೆ ಹೊಂದಿರುವ ಮಕ್ಕಳಿಗೆ ಸರ್ಕಾರದ ಸೌಲಭ್ಯ ಒದಗಿಸುವಂತೆ ತಾಲೂಕು ಪಾಲಕರ ಒಕ್ಕೂಟದಿಂದ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಒಕ್ಕೂಟದ ಅಧ್ಯಕ್ಷರು ಮಂಜುನಾಥ ಸುನಗಲ ಮಾತನಾಡಿ, ಮೇ 16 ವಿಶ್ವದೆಲ್ಲೆಡೆ ವಿಶ್ವ ಶೀಘ್ರ ಮದ್ಯಸ್ಥಿಕೆಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು. ಈ ದಿನಾಚರಣೆ ಬಗ್ಗೆ ಎಷ್ಟೋ ಜನರಿಗೆ ಮತ್ತು ಅ ಧಿಕಾರಿಗಳಿಗೇ ಗೊತ್ತೆ ಇಲ್ಲ, ಶೀಘ್ರ ಮಧ್ಯಸ್ಥಿಕೆ ಇಲ್ಲದೆ ಹುಟ್ಟುವ ಮಕ್ಕಳು ಬೆಳವಣಿಗೆಯಲ್ಲಿ ಕುಂಟಿತವಾಗುತ್ತಿದ್ದು ಇಂದು ಸಾಮಾನ್ಯವಾಗಿದೆ. ವಿಶ್ವ ಶೀಘ್ರ ಮಧ್ಯಸ್ಥಿಕೆಯ ದಿನಾಚರಣೆ ಮೂಲ ಉದ್ದೇಶ ವಿಶ್ವದಲ್ಲಿ ಜನ್ಮತಾಳುವ ಎಲ್ಲ ಮಕ್ಕಳು ಆರೋಗ್ಯದಿಂದ ಇದ್ದು, ಯಾವುದೇ ತೊಂದರೆಗೆ ಒಳಗಾಗದೆ ಮಕ್ಕಳಗೆ ಸಿಗಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಪಡೆಯುವುದಾಗಿದೆ. ಬೆಳವಣಿಗೆಯಲ್ಲಿ ನ್ಯೂನ್ಯತೆ ಹೊಂದಿರುವ ಮಕ್ಕಳ ಪಾಲಕರಾದ ನಾವು ಕಳೆದ 2 ವರ್ಷಗಳಿಂದ ಇಳಕಲ್ಲ ನಗರದ ಆಶಾದೀಪ ಸಂಸ್ಥೆ ವತಿಯಿಂದ ಮಕ್ಕಳಿಗೆ ಪುನಶ್ಚೇತನ ಸೇವೆ ಪಡೆದುಕೊಳ್ಳುತ್ತಿದ್ದು, ಇದರಿಂದ ಮಕ್ಕಳಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಆದರೆ ಇನ್ನುಳಿದ ಸೇವೆಗಳು ನಮಗೆ ಸರ್ಕಾರದಿಂದ ಸಿಗುತ್ತಿಲ್ಲವಾದ್ದರಿಂದ ನಾವು ಮಕ್ಕಳನ್ನು ಕಳೆದುಕೊಳ್ಳುವಂತ ಸ್ಥಿತಿ ಬಂದಿದೆ. ಮಕ್ಕಳ ಪುನಶ್ಚೇತನಕ್ಕಾಗಿ ಕೆಲವು ಸಂಸ್ಥೆಗಳು ಮಾತ್ರ ಕೆಲಸ ಮಾಡಿದರೆ ಸಾಲದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಪುನಶ್ಚೇತನದ ಅವಶ್ಯಕತೆ ಇದೆ ಎಂದರು.

ನಾವು ಆರ್ಥಿಕವಾಗಿ ದುರ್ಬಲರಿದ್ದು ಮಕ್ಕಳಿಗೆ ಬೇಕಾದ ಸಾಧನ ಸಲಕರಣೆ ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವು ವಿಕಲಚೇತನರ 5% ಅನುದಾನದ ಅಡಿಯಲ್ಲಿ ಇರುವ ಹಣವನ್ನು ಇದಕ್ಕಾಗಿ ವಿನಿಯೋಗಿಸಬೇಕು. ಮಕ್ಕಳಿಗೆ ವೈದ್ಯಕೀಯ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದು ಆರೋಗ್ಯ ಇಲಾಖೆ ಅಡಿಯಲ್ಲಿ ಇರುವ ಆರ್‌ಬಿಎಸ್‌ಕೆ ಕಾರ್ಯಕ್ರಮವನ್ನು ಪುನಾರಂಭಿಸಬೇಕು. ಮಕ್ಕಳಿಗೆ ಆರೋಗ್ಯ ವಿಮೆಗಳನ್ನು ಮಾಡಿಸಲು ವೈದ್ಯಕೀಯ ಪ್ರಮಾಣ ಪತ್ರದ ಅವಶ್ಯಕತೆ ಇದ್ದು, ಅದನ್ನು ತಾಲೂಕು ಮಟ್ಟದಲ್ಲಿ ವಿತರಿಸಬೇಕು. ವೈದ್ಯಕೀಯ ಚಿಕಿತ್ಸೆಗಾಗಿ ಬೇರೆ ಬೇರೆ ನಗರಗಳಿಗೆ ಪ್ರಯಾಣಿಸಿದಾಗ ಮಗುವಿನ ಜೊತೆಗೆ ತಂದೆ/ತಾಯಿಗಳಿಗೂ ಉಚಿತ ಬಸ್‌ ಪಾಸ್‌ ವಿತರಿಸಬೇಕು. ತಾಲೂಕು ಮಟ್ಟದಲ್ಲಿ ಎಲ್ಲ ಮಕ್ಕಳ ಪುನಶ್ಚೇತನಕ್ಕಾಗಿ ಪುರ್ನವಸತಿ ಕೇಂದ್ರ ಸ್ಥಾಪಿಸಬೇಕು. ಶೀಘ್ರ ಮಧ್ಯಸ್ಥಿಕೆ ಬಗ್ಗೆ ಜನರಲ್ಲಿ ಮತ್ತು ಸರಕಾರದ ಅಧಿ ಕಾರಿಗಳಲ್ಲಿ ಮಾಹಿತಿ ಕೊರತೆ ಇದ್ದು, ಇದರ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯಿಂದ ಮಾಡಬೇಕು ಎಂಬ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಉಪಾಧ್ಯಕ್ಷ ರುದ್ರಯ್ನಾ ಎಲಿಶಿರಗುಪ್ಪಿಮಠ, ರಮೇಶ ಬೀಳಗಿ, ಶಾಂತಾ ಗೊಟೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next