Advertisement
ಅವರು ಶನಿವಾರ ಬೈಕಂಪಾಡಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಪ್ರಾದೇಶಿಕ ಪರಿಸರ ಪ್ರಯೋಗ ಶಾಲೆ ಹಾಗೂ ಹಿರಿಯ ಪರಿಸರ ಅಧಿಕಾರಿ ಕಚೇರಿ ಕಟ್ಟಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.
ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಮೂರು ತಿಂಗಳ ಒಳಗಾಗಿ ಪ್ರತೀ ಕೈಗಾರಿಕೆ ಪ್ರಾಥಮಿಕ ಕಲ್ಮಶ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕು. ಇಲ್ಲದಿದ್ದಲ್ಲಿ ಪರವಾನಿಗೆ ರದ್ದುಪಡಿಸಲು ಸ್ಪಷ್ಟ ಆದೇಶವಾಗಿದೆ ಎಂದರು.
Related Articles
ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಂಡಳಿ ಸದಸ್ಯ ಕಾರ್ಯದರ್ಶಿ ಎಸ್. ಶಾಂತಪ್ಪ, ಮಂಡಳಿಯ ಸದಸ್ಯ ಜೆ. ಕಾವೇರಿಯಪ್ಪ, ಮುಖ್ಯ ಪರಿಸರ ಸಂರಕ್ಷಣಾಧಿಕಾರಿ ರಮೇಶ್, ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್ ಮತ್ತಿತರರು ಉಪಸ್ಥಿತರಿದ್ದರು.
Advertisement
ರಾಜಶೇಖರ್ ಪುರಾಣಿಕ್ ಸ್ವಾಗತಿಸಿ ದರು. ಜಯಪ್ರಕಾಶ್ ವಂದಿಸಿದರು. ನರೇಶ್ ಸಸಿಹಿತ್ಲು ನಿರ್ವಹಿಸಿದರು.
ಅತ್ಯಾಧುನಿಕ ಪ್ರಯೋಗಾಲಯಸುಮಾರು 3.87 ಕೋ.ರೂ ವೆಚ್ಚದಲ್ಲಿ ಈ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದ್ದು ಪ್ರಾದೇಶಿಕ ಅಧಿಕಾರಿ ಮಟ್ಟದ ಹುದ್ದೆ ಸಹಿತ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಾಣವಾಗಲಿದೆ. ವಾಯು, ಜಲ, ಭೂಮಿ ಎಲ್ಲ ಮಾದರಿಯ ಮಾಲಿನ್ಯವನ್ನು ಈ ಪ್ರಯೋಗಾಲಯದ ಮೂಲಕ ಪರೀಕ್ಷೆ ನಡೆಸ ಬಹುದಾಗಿದೆ. ಪಶ್ಚಿಮ ಘಟ್ಟದ ವ್ಯಾಪ್ತಿ ಸೂಕ್ಷ್ಮ ಪರಿಸರ ವಾತಾವರಣ ಹೊಂದಿದ್ದು ಸರಕಾರ ಈ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡಲು ಮುಂದಾಗಿದೆ. 11 ತಿಂಗಳಲ್ಲಿ ಕಟ್ಟಡ ನಿರ್ಮಾಣ ಸಂಪೂರ್ಣಗೊಳ್ಳಲಿದೆ.