ನವದೆಹಲಿ: ದೇಶದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ಎರಡು ಕೊವಿಡ್ ಲಸಿಕೆಗಳಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಂತಸ ವ್ಯಕ್ತಪಡಿದ್ದು, ಇದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವ ಕ್ಷಣವಾಗಿದೆ ಎಂದಿದ್ದಾರೆ.
ಆಕ್ಸ್ ಫರ್ಡ್- ಆಸ್ಟ್ರಾಜನಿಕಾ ಕೊವಿಡ್ ಲಸಿಕೆ ಹಾಗೂ ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಗಳ ಸಾರ್ವತ್ರಿಕ ಬಳಕೆಗೆ ಅನುಮತಿ ನೀಡಿರುವ ಡಿಸಿಜಿಐ, ಶೀಘ್ರದಲ್ಲಿಯೇ ಈ ಲಸಿಕೆಗಳ ಹಂಚಿಕೆ ಪ್ರಾರಂಭಿಸಬಹುದು ಎಂದಿದ್ದು, ಆದರೆ ಈ ಲಸಿಕೆಗಳನ್ನು ತುರ್ತು ಬಳಕೆಗೆ ಮಾತ್ರ ಬಳಕೆ ಮಾಡಬಹುದು ಎಂದು ತಿಳಿಸಿದೆ.
ಈ ಕುರಿತಾಗಿ ಟ್ಟೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೊಂದು ಐತಿಹಾಸಿಕ ಕ್ಷಣವಾಗಿದೆ. ದೇಶವಾಸಿಗಳು ಬಹುದಿನಗಳಿಂದ ಕಾತರದಿಂದ ಕಾಯುತ್ತಿದ್ದ ಕ್ಷಣ ಈಗ ಒದಗಿ ಬಂದಿದೆ. ಈ ಲಸಿಕೆಯ ಲಭ್ಯತೆಗಾಗಿ ಶ್ರಮಿಸಿರುವ ನಮ್ಮ ಹೆಮ್ಮೆಯ ವಿಜ್ಞಾನಿಗಳ ಶ್ರಮವನ್ನು ದೇಶ ಸದಾ ಸ್ಮರಿಸುತ್ತದೆ ಎಂದು ನುಡಿದಿದ್ದಾರೆ.
ಇದನ್ನೂ ಓದಿ:ತ್ರಾಸಿ: ಅವೈಜ್ಞಾನಿಕ ಕಾಮಗಾರಿಯಿಂದ ಹೆಚ್ಚುತ್ತಿರುವ ಅಪಘಾತ
ಸದ್ಯ ಡಿಸಿಜಿಐ ಅನುಮತಿ ನೀಡಿರುವ ಲಸಿಕೆಗಳು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾಗಿದ್ದು, ನಮ್ಮ ಹೆಮ್ಮೆಯ ವಿಜ್ಞಾನಿಗಳು ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಬದ್ಧರಾಗಿದ್ದಾರೆ ಎಂಬುವುದಕ್ಕೆ ಇದೊಂದು ಅದ್ಭುತ ನಿದರ್ಶನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇಷ್ಟು ಕಾಲ ದೇಶವನ್ನು ಆವರಿಸಿಕೊಂಡಿದ್ದ ಕೋವಿಡ್ ಮಹಾಮಾರಿಯನ್ನು ಹೊಡೆದೋಡಿಸುವ ಸಮಯ ಇದೀಗ ಬಂದಿದ್ದು, ಈ ಸಂದರ್ಭದಲ್ಲಿ ನಾನು ನಮ್ಮ ಕೋವಿಡ್ ವಾರಿಯರ್ಸ್ ಗಳಾಗಿರುವ ವೈದ್ಯಕೀಯ ಸಮುದಾಯ, ಪೊಲೀಸ್ ಮುಂತಾದವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿಜ.16ರಂದು ಅಮಿತ್ ಶಾ ಬೆಂಗಳೂರಿಗೆ: ಜ.17ರಂದು ಜನ ಸೇವಕ್ ಸಮಾವೇಶದಲ್ಲಿ ಭಾಗಿ