Advertisement

ಗೋವನಾಳದಲ್ಲಿ ದಿಢೀರ್‌ ಪ್ರತಿಭಟನೆ

06:24 PM Dec 14, 2020 | Suhan S |

ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮದಲ್ಲಿನ 3.36 ಎಕರೆ ಕುಡಿಯುವ ಕೆರೆ ಜಾಗೆಯ ಆಸ್ತಿ ದಾಖಲೆ ಈಗ ಅಂಜುಮನ್‌ ಏ ಇಸ್ಲಾಂ ಸೊಸೈಟಿವಕ್ಫ್ ಹೆಸರಿಗೆ ಬದಲಾವಣೆಯಾಗಿದ್ದಕ್ಕೆ ಭಾನುವಾರ ಗ್ರಾಮಸ್ಥರು ಏಕಾಏಕಿ ಪ್ರತಿಭಟನೆಗಿಳಿದ ಪರಿಣಾಮ ಗ್ರಾಮದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

Advertisement

ನೂರಾರು ವರ್ಷಗಳಿಂದ ಕುಡಿಯುವ ನೀರಿನ ಕೆರೆ ಅಂತಲೇ ಇದ್ದ ಉತಾರ ಈಗ ಏಕಾಏಕಿ ಅಂಜುಮನ್‌ ಕಮಿಟಿಗೆ ಹೇಗೆ ವರ್ಗಾವಣೆಗೊಂಡಿದೆ. ಇದರ ಹಿಂದೆ ಯಾರ ಕೈವಾಡವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಮೊದಲಿನಂತೆ ಕೆರೆಯ ಹೆಸರಿನಲ್ಲಿ ದಾಖಲೆ ಮರುದಾಖಲಾಗಬೇಕು ಎಂದು ಗ್ರಾಮದ ಹಿರಿಯರು, ಯುವಕರು ಭಾನುವಾರ ಬೆಳಗ್ಗೆ ಗ್ರಾಮದಲ್ಲಿ ಸಭೆ ಸೇರಿದರು.

ಕೆರೆ ಆಸ್ತಿ ದಾಖಲೆ ಕೂಡಲೇ ಮೊದಲಿನಂತೆ ಬದಲಾಗಬೇಕು. ಇಲ್ಲದಿದ್ದರೆ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮದಲ್ಲಿ ಗುಂಪುಗುಂಪಾಗಿ ಚರ್ಚಿಸ ತೊಡಗಿದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟಿ, ಪಿಎಸ್‌ಐ ಶಿವಯೋಗಿ ಲೋಹಾರ ಉಂಟಾಗಿರುವ ತೊಂದರೆಯನ್ನು ಸರಿಪಡಿಸಬಹುದಾಗಿದ್ದು, ಯಾರೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಎಲ್ಲರೂ ಶಾಂತ ರೀತಿಯಿಂದ ವರ್ತಿಸಲು ಮನವಿ ಮಾಡಿದರು. ಮುಖಂಡ ಭರಮಣ್ಣ ರೊಟ್ಟಿಗವಾಡ ಮಾತನಾಡಿ, ಗ್ರಾಮಕ್ಕೆ ಹೊಂದಿರುವ ಸರ್ಕಾರಿಜಮೀನಿನಲ್ಲಿದ್ದ 3.36 ಎಕರೆ ಕುಡಿಯುವ ನೀರಿನ ಕೆರೆ ದಾಖಲೆ ಈಗ ಅಂಜುಮನ್‌ ಏ ಇಸ್ಲಾಂ ಸೊಸೈಟಿಗೆ ಸೇರಿದ ಆಸ್ತಿಯಾಗಿ ದಾಖಲಾಗಿದೆ.

ಕೆರೆಗೆ ಹೊಂದಿಕೊಂಡು 35 ಕುಟುಂಬಗಳು ವಾಸಿಸುತ್ತಿವೆ. ಈಗ ಕೆರೆ ಜಮೀನು ಇಸ್ಲಾಂ ಕಮಿಟಿಗೆ ಪರಭಾರೆಯಾಗಿರುವ ಕಾಗದ ಪತ್ರಗಳಿಂದ ಗ್ರಾಮದಲ್ಲಿ ಗೊಂದಲ, ಕೋಮು ಸಂಘರ್ಷಕ್ಕೆ ಕಾರಣವಾಗುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಮೊದಲಿನಂತೆ ಕೆರೆ ದಾಖಲೆ ಬದಲಾಗದೇ ನಮ್ಮ ಗ್ರಾಮದ ಜನರ ಉಪಯೋಗಕ್ಕಾಗಿ ಇರಬೇಕು. ಈಗ ಗ್ರಾಪಂ ಚುನಾವಣೆ ನಡೆಯುತ್ತಿದ್ದು, ಇಂತಹ ಹೊತ್ತಲಲ್ಲಿ ಗ್ರಾಮದಲ್ಲಿಅಶಾಂತಿಯ ವಾತಾವರಣ ನಿರ್ಮಾಣವಾಗುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ವಿನಂತಿಸಿದರು.

ಈ ವೇಳೆ ತಹಶೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟಿ, ಸದರಿ ಸರ್ಕಾರಿ ಜಮೀನಿನ ಖಾತೆ ಬದಲಾವಣೆಯಾದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗ್ರಾಮದ ಕೆಲವು ಮುಖಂಡರು ಇಲಾಖೆಗೆಮನವಿ ಪತ್ರ ನೀಡಿದರೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಯಾರೂ ಊಹಾಪೋಹಕ್ಕೆ ಕಿವಿಗೊಡಬೇಡಿ ಮತ್ತು ಅಶಾಂತಿ ವಾತಾವರಣಕ್ಕೆ ಕಾರಣರಾಗಬೇಡಿ ಎಂದರು.

Advertisement

ಶೇಖರಗೌಡ ಕೊರಡೂರ, ನಾಗರಾಜ ದೊಡ್ಡಮನಿ, ಚಂದ್ರು ತಳವಾರ, ಮಂಜುನಾಥ ಕೆಂಚನಗೌಡ್ರ, ಗೌಡಪ್ಪಗೌಡ ಸಣ್ಣಗೌಡ್ರ,ಚಂದ್ರಗೌಡ ಕರಿಗೌಡರ, ದೇವಪ್ಪ ಬಡಿಗೇರ, ಶಂಭು ಕೇರಿ, ಮಾರುತಿ ಬಾರಕೇರ, ಚಿನ್ನಪ್ಪ ಕೊರಕನವರ, ನಿಂಗನಗೌಡ್ರ ಪೊಲೀಸ್‌ಪಾಟೀಲ, ದೇವೆಚಿದ್ರಪ್ಪ ಬಡಿಗೇರ,ದುಂಡಪ್ಪ ಮಣಕಟ್ಟಿ, ಮಹಾದೇವಪ್ಪ ಮಾಡಳ್ಳಿ, ನಾಗಪ್ಪ ಸಂಕದಾಳ, ನೀಲಪ್ಪಸವಣೂರ, ನಾಗಪ್ಪ ಮಾಡಳ್ಳಿ, ಪಾಂಡುರಂಗ ಭಂಡಾರಕರ, ನೀಲಪ್ಪ ಸವಣೂರ,ಮಂಜುನಾಥ ಕಟ್ಟಿಮನಿ, ಪ್ರಕಾಶ ಮಲ್ಲೂರ ಅನೇಕರಿದ್ದರು. ಕ್ರೈಂ ಪಿಎಎಸ್‌ಐ ಪಿ.ಎಂ. ಬಡಿಗೇರ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next