Advertisement

ಸಚಿವರಿಂದ ರೈತರ ಅವಮಾನ ಖಂಡಿಸಿ ಪ್ರತಿಭಟನೆ

05:57 PM Jan 28, 2022 | Shwetha M |

ಬಸವನಬಾಗೇವಾಡಿ: ರೈತರ ಸಮಸ್ಯೆ ಆಲಿಸದೆ ಉದ್ಧಟತನ ಪ್ರದರ್ಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ವರ್ತನೆ ಖಂಡಿಸಿ ಗುರುವಾರ ರೈತರು ಮಿನಿ ವಿಧಾನಸೌಧ ತಹಶೀಲ್ದಾರ್‌ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್‌ ಎಂ.ಎನ್‌. ಬಳಿಗಾರಗೆ ಮನವಿ ಸಲ್ಲಿಸಿದರು.

Advertisement

ಬುಧವಾರ ಪಟ್ಟಣದ ಮಾರ್ಗಮಧ್ಯ ಹೋಗುವಾಗ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರು ಕಾರಿನಲ್ಲೇ ಕುಳಿತು ಮನವಿ ಸ್ವೀಕರಿಸಿ ಹೋರಾಟಗಾರರಿಗೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟಿಸಿದರು.

ಈ ವೇಳೆ ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಸಚಿವರ ಪಕ್ಕದಲ್ಲಿಯೇ ಕುಳಿತಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ರೈತ ಮುಖಂಡರಿಗೆ ಉಡಾಫೆ ಮಾತನಾಡಿ, ದಾರಿ ಮಧ್ಯದಲ್ಲಿ ಕಾರು ಏಕೆ ತಡೆದು ನಿಲ್ಲಿಸುತ್ತಿರಿ. ನಿಮ್ಮದು ಯಾವ ರೈತ ಸಂಘ. ಯಾವ ದಾರಿ ಸಮಸ್ಯೆ. ನಿಮಗೆ ತಿಳಿವಳಿಕೆ ಇಲ್ಲವೆಂದು ಅವಮಾನ ಮಾಡಿದ್ದಾರೆ. ಕೂಡಲೇ ಶಾಸಕರು ರೈತ ಮುಖಂಡರಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಗುರುಲಿಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಶೇಖಪ್ಪ ಸಕ್ಕನ, ಗಿರಿಮಲ್ಲಪ್ಪ ದೊಡಮನಿ, ಚನ್ನಬಸಪ್ಪ ಸಿಂಧೂರ, ಹೊನಕೆರಪ್ಪ ತೆಲಗಿ, ಗೊಲ್ಲಾಳಪ್ಪ ಚೌಧರಿ, ಮಲ್ಲಪ್ಪ ಮಾಡ್ಯಾಳ, ರಾಜೇಸಾಬ ವಾಲಿಕಾರ, ಕೃಷ್ಣಪ್ಪ ಬೊಮ್ಮರಡ್ಡಿ, ರೇವಪ್ಪಗೌಡ ಸೇರಿದಂತೆ ಅನೇಕರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next