Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

12:10 PM May 24, 2020 | mahesh |

ಮುದ್ದೇಬಿಹಾಳ: ರಾಜ್ಯದಲ್ಲಿ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದ್ದು, ಸರ್ಕಾರ ಅಂಥವರ ನೆರವಿಗೆ ಧಾವಿಸಬೇಕು ಎಂದು ಬಹುಹಳ್ಳಿ ಕುಡಿಯುವ ನೀರು ಸರಬರಾಜು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಆಗ್ರಹಿಸಿದ್ದಾರೆ.

Advertisement

ನಾಗರಬೆಟ್ಟದಲ್ಲಿರುವ ಅಡವಿಸೋಮನಾಳ ಮತ್ತು 30 ಹಳ್ಳಿಗಳ ಬಹುಹಳ್ಳಿ ಯೋಜನಾ ಘಟಕದಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್
ಲಾಕಡೌನ್‌ ನಂತರ ಕಠಿಣ ಪರಿಸ್ಥಿತಿಯಲ್ಲೂ ಬಹುಹಳ್ಳಿ ಯೋಜನೆ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಪ್ರತಿ ಹಳ್ಳಿಗೂ ಶುದ್ಧ ನೀರು ತಲುಪಿಸುವ ಕೆಲಸ ಮಾಡಿದ್ದಾರೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ಸೌಲಭ್ಯವನ್ನು ಎಲ್ಲ ಬಹುಹಳ್ಳಿ ಯೋಜನೆಯ ಕಾರ್ಮಿಕರಿಗೂ ವಿಸ್ತರಿಸಬೇಕು. ಕನಿಷ್ಠವೇತನ, ಮೂಲಭೂತ ಸೌಲಭ್ಯ, ಇಪಿಎಸ್‌, ಇಎಸ್‌ಐ ಕಾರ್ಡ್‌, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ಕಾರ್ಮಿಕರಾದ ಪರಸಪ್ಪ ವಳಕಲದಿನ್ನಿ, ಯಲ್ಲಪ್ಪ ಚಲವಾದಿ, ಪರಮಪ್ಪ ರಕ್ಕಸಗಿ, ಬಸವರಾಜ ವಳಕಲದಿನ್ನಿ, ಸಿದ್ದಪ್ಪ ವಾಲಿಕಾರ, ಹಣಮಂತ ಚಲವಾದಿ, ಮಹಾಂತೇಶ ಹಿರೇಮಠ, ನಾಗಪ್ಪ ಮುರಾಳ, ಅಮ್ಮಪ್ಪ ಚಲವಾದಿ, ಪರಸಪ್ಪ ಮುರಾಳ, ಪರಮಣ್ಣ ವಳಕಲದಿನ್ನಿ, ಭೀಮಪ್ಪ ವಳಕಲದಿನ್ನಿ, ಶರಣಪ್ಪ ವಳಕಲದಿನ್ನಿ, ಶರಣಪ್ಪ ಕೊಂಡಗೂಳಿ, ನಿಸ್ಸಾರುದ್ದೀನ ಪಾಶಾ, ರಾಜಶೇಖರ ದೊಡಮನಿ ಇದ್ದರು. ಈ ವೇಳೆ ಗುತ್ತಿಗೆಪದ್ಧತಿ ರದ್ದುಗೊಳಿಸುವ ಬರಹದ ಬೋರ್ಡ್‌ ಹಿಡಿದು ಸಾಂಕೇತಿಕ ಧರಣಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next