Advertisement
ತಾಲೂಕಿನ ಸೋಲೂರು ಬಳಿ ಇರುವ ಹಾಲು ಶಿಥಲೀಕೇಂದ್ರದ ಬಳಿ ಹಾಲು ಖರೀದಿಸದೆ ತಡೆಹಿಡಿದಿರುವುದರ ವಿರುದ್ಧ ಬಸವನಪಾಳ್ಯದ ಹಾಲು ಉತ್ಪಾದಕ ಮಹಿಳಾ ಸಂಘದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನಾ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ತಿಪ್ಪಸಂದ್ರ ಹೋಬಳಿ ಬಸವನಪಾಳ್ಯದಲ್ಲಿ 15 ವರ್ಷಗಳ ಹಿಂದೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಪ್ರಾರಂಭಿಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಹಾಲು ಉತ್ಪಾದಕರಿಗೆ ಡೇರಿ ಆಡಳಿತ ಮಂಡಳಿ ಯಾವುದೇ ಸವಲತ್ತು ಕೊಟ್ಟಿಲ್ಲ.
Related Articles
Advertisement
ಹಲವು ಭಾರಿ ನ್ಯಾಯ ಪಂಚಾಯ್ತಿ ನಡೆಸಿದರೂ ಕಾರ್ಯದರ್ಶಿ ಪತಿ ತಿದ್ದುಕೊಂಡಿಲ್ಲ ಎಂದರು. ಸೋಲೂರು ಪ್ರತಿಭಟನಾ ಸ್ಥಳಕ್ಕೆ ಶಾಸಕ ಎ.ಮಂಜುನಾಥ್ ಭೇಟಿ ನೀಡಿ ಅಧಿಕಾರಿಗಳು, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ರೈತ ಮಹಿಳೆಯರೊಂದಿಗೆ ಡೇರಿ ಸಮಸ್ಯೆ ಕುರಿತು ಚರ್ಚಿಸಿದರು.ಸಮಸ್ಯೆ ಬಗೆಹರಿಸಿ ಡೇರಿಯಲ್ಲಿ ಹಾಲು ಶೇಖರಣೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಎ.ಮಂಜುನಾಥ್ ಅವರಿಗೆ ಡೇರಿಯ ಅವ್ಯವಹಾರದ ಬಗ್ಗೆ ಶಿಥಲೀಕೇಂದ್ರದ ಉಪ ವ್ಯವಸ್ಥಾಪಕ ಜವರಯ್ಯ ಮಾಹಿತಿ ನೀಡಿದರು.
ರಾಜಕೀಯ ತಿರುವು: ಬಸನಪಾಳ್ಯದ ಡೇರಿ ವಿಚಾರ ರಾಜಕೀಯ ತಿರುವು ಪಡೆದುಕೊಂಡು ಪ್ರತಿಭಟನಾ ಧರಣಿ ತಾರಕ್ಕೇರಿತ್ತು. ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾ ಧರಣಿ ನಡೆಯಿತು.
ಆರೋಪ: ರೈತ ಮುಖಂಡ ಗಂಗೋನಹಳ್ಳಿ ಲಿಂಗೇಗೌಡ ಮಾತನಾಡಿ, ಡೇರಿಯಲ್ಲಿ ಆಗಿರುವ ಅವ್ಯವಹಾರ ಬಮೂಲ್ ಅಧ್ಯಕ್ಷ ಮತ್ತು ಅಧಿಕಾರಿಗಳ ಗಮನಕ್ಕೆ ಬಂದರೂ ಏಕೆ ರೈತ ಮುಖಂಡರಿಗೆ ತಿಳಿಸಲಿಲ್ಲ, ಕಾರ್ಯದರ್ಶಿ ಧನಲಕ್ಷ್ಮೀ ಅವರ ವಂಚನೆ ಬಗ್ಗೆ ರೈತರ ಗಮನಕ್ಕೆ ತಂದಿಲ್ಲ. ಹಾಲಿನ ಗುಣಮಟ್ಟ ಸರಿಯಿಲ್ಲ ಎಂದು ವಾಪಸ್ಸು ಕಳಿಸಿದ್ದಾರೆ ಎಂದು ಆರೋಪಿಸಿದರು. ಬಮೂಲ್ ನಿರ್ದೇಶಕ ಕೆ.ಬಿ.ರಾಜಣ್ಣ, ಕೆಡಿಪಿ ಸದಸ್ಯ ನಾಗರಾಜು, ಸಾಗರ್, ನೂರಾರು ರೈತ ಮುಖಂಡರು, ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.