Advertisement

ಯಾದಗಿರಿಯಲ್ಲೂ ಕರವೇ ಪ್ರತಿಭಟನೆ

09:59 PM Dec 29, 2021 | Team Udayavani |

ಯಾದಗಿರಿ: ಎಂಇಎಸ್‌ ಮತ್ತು ಶಿವಸೇನೆ ನಿಷೇಧಿ ಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾ ಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಮೌನ ವಹಿಸಿರುವುದು ಖಂಡನೀಯ ಎಂದರು.

Advertisement

ತಾಯ್ನೆಲಕ್ಕಾಗಿ ಹೋರಾಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಲಾಗಿದೆ. ಮಹಾ ಮಾನವತಾವಾದಿ ಬಸವಣ್ಣನವರ ಭಾವಚಿತ್ರಕ್ಕೆ ಸಗಣಿ ಬಳಿಯಲಾಗಿದೆ. ಬೆಳಗಾವಿ-ಮಹಾರಾಷ್ಟ್ರದಲ್ಲಿ ಕನ್ನಡ ಧcಜಕ್ಕೆ ಬೆಂಕಿ ಹಾಗೂ ಬೆಳಗಾವಿಯಲ್ಲಿ ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕನ್ನಡಿಗರನ್ನು ಥಳಿಸಿ, ಹಲ್ಲೆ ನಡೆಸಲಾಗುತ್ತಿದೆ. ಇದಕ್ಕೆಲ್ಲ ಕಾರಣೀಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಭಯೋತ್ಪಾದಕ ಸಂಘಟನೆಗಳ ಗೂಂಡಾಗಳು.

ಆದ್ದರಿಂದ ಈ ಎರಡೂ ಸಂಘಟನೆ ನಿಷೇ ಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಈ ವೇಳೆ ಶಹಾಪುರ ತಾಲೂಕು ಅಧ್ಯಕ್ಷ ಭೀಮಣ್ಣ ಶಖಾಪುರ, ವಡಿಗೇರಿ ತಾಲೂಕು ಅಧ್ಯಕ್ಷ ಅಬ್ದುಲ್‌ ಚಿಗನೋರ್‌, ಯುವ ಘಟಕ ಅಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ನಗರಾಧ್ಯಕ್ಷರಾದ ಅಂಬ್ರೇಶ್‌ ಹತ್ತಿಮನಿ ಸಾಹೇಬ್‌ಗೌಡ ನಾಯಕ, ಸಿದ್ದಪ್ಪ ಕ್ಯಾಸಪ್ಪನಳ್ಳಿ, ಸಿದ್ದು ಕೋಯಿಲೂರು, ಹಣಮಂತ ತೇಕರಾಳ, ತಬ್ರೇಜ್‌ ಅಹ್ಮದ್‌, ಸಾಬು ಹೋರುಂಚಿ, ವಿಜಯ ರಾಠೊಡ, ದೀಪಕ ಒಡೆಯರ, ಸಿದ್ದು ಪಟ್ಟೆದಾರ್‌, ಮಲ್ಲಿಕಾರ್ಜುನ ಕನ್ನಡಿ,ಲಿಂಗಪ್ಪ ಗುಡುಗುಡಿ ಇತರರಿದ್ದರು

 

Advertisement

Udayavani is now on Telegram. Click here to join our channel and stay updated with the latest news.

Next