Advertisement
ಪ್ರತಿಭಟನೆ ನಡೆಸಿದ್ದ ಬಜರಂಗ್, ಸಾಕ್ಷಿ ಮತ್ತು ವಿನೇಶ್ ವಿರುದ್ಧ ಯಾವುದೇ ಕಠಿನ ಕ್ರಮ ತೆಗೆದು ಕೊಳ್ಳುವು ದಿಲ್ಲವೆಂದು ಲಿಖೀತ ಭರವಸೆ ನೀಡಿದರೆ ಡಬ್ಲ್ಯುಎಫ್ಐ ಮೇಲಿನ ತಾತ್ಕಾಲಿಕ ಅಮಾನತು ಆದೇಶ ವನ್ನು ಹಿಂಪಡೆಯುವುದಾಗಿ ಯುಡಬ್ಲ್ಯುಡಬ್ಲ್ಯು ಮಂಗಳವಾರ ತಿಳಿಸಿತ್ತು. ನಿಗದಿತ ಸಮಯದೊಳಗೆ ಚುನಾವಣೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಯುಡಬ್ಲ್ಯುಡಬ್ಲ್ಯು ಕಳೆದ ವರ್ಷದ ಆಗಸ್ಟ್‌ನಲ್ಲಿ ಡಬ್ಲ್ಯುಎಫ್ಐ ಅನ್ನು ಅಮಾನತುಗೊಳಿಸಿತ್ತು.
“ಅಮಾನತು ಆದೇಶ ಹಿಂಪಡೆಯುವ ನಿಟ್ಟಿನಲ್ಲಿ ಸಂಜಯ್ ಸಿಂಗ್ ಮೋಸದ ವಿಧಾನ ಅನುಸರಿಸಿದ್ದಾರೆ ಎಂಬ ವಿಷಯ ನಮಗೆ ನಿನ್ನೆಯಷ್ಟೇ ತಿಳಿ ಯಿತು. ಈ ಬಗ್ಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜತೆ ಕೇಳಿದಾಗ, ನಾವು ಏನು ಮಾಡುತ್ತೇವೆ ಎಂಬುದು ನಿಮಗೆ ತಿಳಿಯುತ್ತದೆ ಎಂದು ಹೇಳಿದರು. ಒಂದು ವೇಳೆ ಬೃಜ್ ಭೂಷಣ್ ಮತ್ತು ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್ಐನ ವ್ಯವ ಹಾರ ಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದರೆ ನಾವು ಪ್ರತಿಭಟನೆ ಆರಂಭಿಸದೇ ಬೇರೆ ಮಾರ್ಗವಿಲ್ಲ’ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
“ನಮ್ಮ ಪ್ರತಿಭಟನೆ ಸದ್ಯ ಅಮಾನತು ಗೊಂಡಿದೆ. ನಾನು ಕುಸ್ತಿ ಸ್ಪರ್ಧೆಯಿಂದ ನಿವೃತ್ತಿ ಯಾಗಿರಬಹುದು. ಆದರೆ ಬೃಜ್‌ಭೂಷಣ್ ಮತ್ತು ಅವರ ಆಪ್ತರು ಫೆಡರೇಶನ್ ಕಾರ್ಯ ಚಟುವಟಿಕೆ ಯಲ್ಲಿ ಭಾಗಿಯಾಗಿ ವನಿತಾ ಕುಸ್ತಿಪಟುಗಳಿಗೆ ಕಿರುಕುಳ ನೀಡುವು ದನ್ನು ಸಹಿಸಲು ಸಾಧ್ಯವಿಲ್ಲ’ ಎಂದವರು ಸ್ಪಷ್ಟಪಡಿಸಿದರು.