Advertisement

ಕಂಬಳಕ್ಕಾಗಿ ಕಹಳೆ; ಬೃಹತ್ ಹಕ್ಕೊತ್ತಾಯ ಜಾಥಾ,ಬೀದಿಗಿಳಿದ ಕೋಣಗಳು

01:08 PM Jan 28, 2017 | Team Udayavani |

ದಕ್ಷಿಣ ಕನ್ನಡ:ತುಳು ನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕೆಂದು ಒತ್ತಾಯಿಸಿ ಶನಿವಾರ ಮೂಡಬಿದ್ರೆಯಲ್ಲಿ ಬೃಹತ್ ಹಕ್ಕೊತ್ತಾಯ ಜಾಥಾಕ್ಕೆ ಚಾಲನೆ ನೀಡಲಾಯಿತು.

Advertisement

ಕಂಬಳ ಪ್ರಕರಣದ ವಿಚಾರಣೆಯನ್ನು ಜ.30ರ ಮೊದಲು ಕೈಗೆತ್ತಿಕೊಳ್ಳಲು ನ್ಯಾಯಾಲವನ್ನು ಕೋರಲು ಸಮಯಾವಕಾಶ ಇಲ್ಲದಿರುವುದರಿಂದ ಶುಕ್ರವಾರ ಕಂಬಳ ನಡೆಸುವುದಿಲ್ಲ. ಕಂಬಳ ಉಳಿಸುವುದಕ್ಕಾಗಿ ಹಕ್ಕೊತ್ತಾಯ ಜಾಥಾ ಮಾತ್ರ ನಡೆಸಲಾಗುವುದು ಎಂದು ಮೂಡಬಿದ್ರೆ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಶಾಸಕ ಕೆ.ಅಭಯಚಂದ್ರ ಜೈನ್ ತಿಳಿಸಿದ್ದರು.

ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ ಸ್ವರಾಜ್ ಮೈದಾನದಲ್ಲಿ ಸುಮಾರು 200 ಜತೆ ಕೋಣಗಳೊಂದಿಗೆ ಸಾವಿರಾರು ಮಂದಿ ಕಂಬಳಾಭಿಮಾನಿಗಳು ಕಾಲ್ನಡಿಗೆ ಮೂಲಕ ಕಡಲಕೆರೆ ನಿಸರ್ಗಧಾಮದವರೆಗೆ ಜಾಥಾ ನಡೆಯಲಿದೆ.

ವಿವಾದ ಕೋರ್ಟ್ ಕಟಕಟೆಯಲ್ಲಿರುವುದರಿಂದ ಕೋಣಗಳನ್ನು ಕಂಬಳದ ಕೆರೆಗೆ ಇಳಿಸುವುದಿಲ್ಲ. ಮಧ್ಯಾಹ್ನ ಗಂಜಿ ಊಟ ಮಾಡಿ ತೆರಳುವ ಮೂಲಕ ಹಕ್ಕೊತ್ತಾಯ ಜಾಥಾ ಮುಕ್ತಾಯಗೊಳ್ಳಲಿದೆ.

ಹೈಲೈಟ್ಟ್:

Advertisement

*ಕಂಬಳ ಕ್ರೀಡೆಗೆ ಆಗ್ರಹಿಸಿ ಬೃಹತ್ ಹಕ್ಕೊತ್ತಾಯ

*3 ಕಿಲೋ ಮೀಟರ್ ವರೆಗೂ ಪ್ರತಿಭಟನಾ ಮೆರವಣಿಗೆ

*ಕಂಬಳಕ್ಕಾಗಿ ಬೀದಿಗಿಳಿದ 200ಕ್ಕೂ ಹೆಚ್ಚು ಕೋಣಗಳು

*ಮೂಡಬಿದ್ರೆಯಲ್ಲಿ ಕಂಬಳದ ಮೇಲಿನ ನಿಷೇಧ ತೆರವಿಗೆ ಆಗ್ರಹಿಸಿ ಸಾವಿರಾರು ಜನರಿಂದ ಹಕ್ಕೊತ್ತಾಯ ಜಾಥಾ

Advertisement

Udayavani is now on Telegram. Click here to join our channel and stay updated with the latest news.

Next