Advertisement

ಪ್ಲೇಕಾರ್ಡ್‌ ನೇತು ಹಾಕಿಕೊಂಡು ಪ್ರತಿಭಟನೆ

05:26 PM Feb 19, 2020 | Suhan S |

ನೆಲಮಂಗಲ : ಕಂದಾಯ ಇಲಾಖೆಯಲ್ಲಿ ತಮ್ಮ ಜಮೀನು ದಾಖಲೆ ಸರಿಪಡಿಸಿ ಕೊಡುವಂತೆ ಒಂದೂವರೆ ವರ್ಷಗಳಿಂದ ಕಚೇರಿಗೆ ಅಲೆದಾಡಿದರೂ, ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿ, ಶಶಿಧರ್‌ ಕೊರವಿ ಎನ್ನುವವರು ಪ್ಲೇ ಕಾರ್ಡ್‌ ಹಾಕಿಕೊಂಡು ತಾಲೂಕು ಕಚೇರಿ ಎದುರು ವಿನೂತನವಾಗಿ ಪ್ರತಿಭಟಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿ ಎದುರು ಬೆಳ್ಳಗ್ಗೆ 9.30ಕ್ಕೆ ಆಗಮಿಸಿದ ಹುಬ್ಬಳ್ಳಿ ಮೂಲದ ಶಶಿಧರ್‌ ಕೊರವಿ ನ್ಯಾಯಕೊಡಿ, ಅಧಿಕಾರಿಗಳನ್ನು ವಜಾಗೊಳಿಸಿ ಎಂದು ಪ್ಲೇಕಾರ್ಡ್‌ಗಳನ್ನು ನೇತುಹಾಕಿಕೊಂಡು, ಬಾಯಿಗೆ ಬಟ್ಟೆಕಟ್ಟಿಕೊಂಡು ಮೌನ ಪ್ರತಿಭಟನೆ ಮಾಡಿದರು.

ಪ್ರತಿಭಟನೆಗೆ ಕಾರಣ : ತಾಲೂಕಿನ ಟಿ.ಬೇಗೂರು ಸಮೀಪದ ಅರಳಸಂದ್ರ ಗ್ರಾಮದ ಶಶಿಧರ್‌ ಕೊರವಿ ಒಡೆತನದ ಸರ್ವೆ ನಂ 12/2 ಹಾಗೂ 13/1ರ ಜಮೀನನ್ನು ಮಾರಾಟ ಮಾಡಲಾಗಿದ್ದು , ಪಹಣಿಯಲ್ಲಿ ಪ್ರತ್ಯೇಕ ಹೆಸರು ನಮೂದಿಸಿರುವುದಿಲ್ಲ. ಇದರಿಂದಮಾರಾಟ ಮಾಡಿರುವ ಜಮೀನಿನ ವಿಸ್ತೀರ್ಣಕ್ಕೆ ತಕ್ಕಂತೆ ಅವರುಗಳ ಹೆಸರು ಪ್ರತ್ಯೇಕ ಪಹಣಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ 100ಕ್ಕೂ ಹೆಚ್ಚು ಭಾರಿ ಕಚೇರಿಗೆ ಅಲೆದರೂ, ಈವರೆಗೂ ಪಹಣಿ ಮಾಡಿಕೊಟ್ಟಿಲ್ಲ .

ಮೇಲಾಧಿಕಾರಿಗಳ ಆದೇಶಕ್ಕೆ ಕಿಮ್ಮಕಿಲ್ಲ ಶಶಿಧರ್‌ ಕೊರವಿಯವರ ಜಮೀನು ದಾಖಲಾತಿ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಭೂದಾಖಲೆಗಳ ಉಪನಿರ್ದೇಶಕ ವಿಜಯ ಭವಾನಿಯವರು ತಹಶೀಲ್ದಾರರಿಗೆ 2019ರ ಜನವರಿಯಲ್ಲಿ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೂ, ದಾಖಲಾತಿ ನೀಡುವಲ್ಲಿ ಅಧಿಕಾರಿಗಳುಮುಂದಾಗಿಲ್ಲ. ಈಗಾಗಲೇ ಕಂದಾಯ ಸಚಿವರಿಗೂ ಹಾಗೂ ಡಿಸಿಯವರಿಗೆ ಶಶಿಧರ್‌ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next