ಬೃಹತ್ ಮೆರವಣಿಗೆ ನಡೆಸಲಾಗುತ್ತಿದೆ. ಬಸವೇಶ್ವರ ವೃತ್ತದಲ್ಲಿ ಒಂದು ಘಂಟೆ ರಸ್ತಾ ರೋಖೋ ಮಾಡಿ ನಂತರ
ತಹಶೀಲ್ದಾರ್‌ಗೆ ಮನವಿ ನೀಡಲಾಗುತ್ತದೆ ಎಂದು ಎಸಿ ಕಚೇರಿ ಹೋರಾಟಗಾರರು ತಿಳಿಸಿದರು.
Advertisement
ಇಲ್ಲಿನ ಗಾರ್ಡನ್‌ನಲ್ಲಿ ಪೂರ್ವಭಾವಿ ಸಭೆ ನಡೆಸಿ ನಂತರ ಮಾತನಾಡಿದ ಪ್ರಮುಖ ಹೋರಾಟಗಾರ ನಗರಾಭಿವೃದ್ಧಿ ಯುವ ವೇದಿಕೆ ಸಂಚಾಲಕ ಬಸಯ್ಯಸ್ವಾಮಿ ನಂದಿಕೇಶ್ವರಮಠ, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರಕಾರದ ಆಡಳಿತಾವಧಿಯಲ್ಲಿ ಆಡಳಿತದ ಅನುಕೂಲಕ್ಕಾಗಿ ರಾಜ್ಯಾದ್ಯಂತ ಹತ್ತು ಕಡೆಗಳಲ್ಲಿಉಪ ವಿಭಾಗಾಧಿಕಾರಿಗಳ ಕಚೇರಿಗಳನ್ನು ಆರಂಭಿಸಬೇಕು ಎಂದು ತೀರ್ಮಾನಿಸಿದಾಗ ಆ ಹತ್ತರಲ್ಲಿ ಮುದ್ದೇಬಿಹಾಳ ಕೂಡಾ ಒಂದಾಗಿತ್ತು. ಅಂದಿನ ಸರಕಾರಗಳು ಅತಂತ್ರ ಸ್ಥಿತಿಯಲ್ಲಿ ಇದ್ದ ಕಾರಣ ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳಲಿಲ್ಲ. ಈ ಹಿಂದಿನ ಆಡಳಿತಗಳ ಅವಧಿಯಲ್ಲಿ ಇದ್ದವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸದ ಕಾರಣದಿಂದಾಗಿ ಮುದ್ದೇಬಿಹಾಳದಲ್ಲಿ ಎಸಿ ಕಚೇರಿ ಆರಂಭಕ್ಕೆ ವಿಳಂಬವಾಗಿದೆ. ಸರಕಾರದ ಈ ವಿಳಂಬ ನೀತಿಯಿಂದ ಈ ಭಾಗದ ರೈತರಿಗೆ ಬಹಳ ಅನ್ಯಾವಾಗುತ್ತಿದೆ ಎಂದರು. ಉಪ ವಿಭಾಗಾಧಿಕಾರಿ ಕಚೇರಿಗೆ ಮುದ್ದೇಬಿಹಾಳ ಸೂಕ್ತ ಸ್ಥಳವಾಗಿದೆ.
ಈಗಿನ ಹೊಸ ತಹಶೀಲ್ದಾರ್ ಕಚೇರಿಯಲ್ಲಿ ತಕ್ಷಣ ಉಪ ವಿಭಾಗಾಧಿಕಾರಿಗಳ ಕಚೇರಿ ಆರಂಭಿಸಬಹುದು. ಇದಲ್ಲದೆ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಾವಿರಕ್ಕೂ ಹೆಚ್ಚು ಭೂನ್ಯಾಯಗಳು ಇತ್ಯರ್ಥವಾಗದೇ ನನೆಗುದುಗೆ ಬಿದ್ದಿವೆ. ಈಗ ಇಂತಹ ಪ್ರಕರಣಗಳ ವಿಚಾರಣೆಗೆ ಈಗ ವಿಜಯಪುರದಿಂದ ಅಧಿಕಾರಿಗಳು ಬರುತ್ತಿದ್ದಾರೆ. ಒಮ್ಮೊಮ್ಮೆ ಇವರು ಬರುವದಿಲ್ಲ ಹೀಗಾಗಿ ಸಾಕಷ್ಟು ಖರ್ಚು ಮಾಡಿಕೊಂಡ ಬಂದ ರೈತರು ನಿರಾಶರಾಗುತ್ತಾರೆ. ಪ್ರಕರಣ
ನನೆಗುದಿಗೆ ಬಿದ್ದು ರೈತರ ದೈನಂದಿನ ಜೀವನಕ್ಕೆ ಬಹಳ ತೊಂದರೆಯಾಗುತ್ತಿದೆ. ಹೀಗಾಗಿ ಬರುವ ಹಣಕಾಸು ವರ್ಷದಲ್ಲಿಯೇ ಮುದ್ದೇಬಿಹಾಳದಲ್ಲಿ ನಿಯೋಜಿತ ಎಸಿ ಕಚೇರಿ ಆರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.
Related Articles
Advertisement
ಈ ಸಂದರ್ಭದಲ್ಲಿ ಧುರೀಣರಾದ ಪ್ರಭು ಕಡಿ, ಎಸ್.ಎನ್. ಪಟ್ಟಣಶೆಟ್ಟಿ (ವಕೀಲರು), ಎಸ್.ಎಂ. ಬನೋಶಿ, ಎಸ್.ಎಂ.ಚಿಲ್ಲಾಳಶೆಟ್ಟರ (ವಕೀಲರು), ಶಿವಬಸಪ್ಪ ಸಜ್ಜನ, ಚಂದ್ರಶೇಖರ ಅಂಬಿಗೇರ, ರಾಜು ಬಳ್ಳೊಳ್ಳಿ, ಮಹಾಂತೇಶ ಸಜ್ಜನರ, ಪುಂಡಲೀಕ ಮುರಾಳ, ಗುಲಾಂ ಧಪೇದಾರ, ಮಂಜುನಾಥ ಕುಂದರಗಿ, ಹನುಮಂತ ನಲವಡೆ, ರಾಜು ಹೊಳಿ, ಪುನೀತ ಹಿಪ್ಪರಗಿ, ಬಿ.ಎಚ್. ಚಲವಾದಿ, ಪರಶುರಾಮ ಕೊನ್ನೂರ, ಮಲ್ಲಪ್ಪ ಹೊಸಮನಿ, ಮಹಾಂತೇಶ ಬೂದಿಹಾಳಮಠ, ವೀರೇಶ ಗುರುಮಠ ಮುಂತಾದವರು ಭಾಗವಹಿಸಿದ್ದರು.