ಭಾರತೀನಗರ: ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಎತ್ತಿನಗಾಡಿಯ ರೈತರು ಪ್ರತಿಭಟನೆ ನಡೆಸಿದರು.
ಕಬ್ಬು ತೂಗುವ ಸ್ಥಳದಲ್ಲಿ ನೂರಾರು ಎತ್ತಿನಗಾಡಿಯ ರೈತರು ಜಮಾಯಿಸಿ, ಕುಡಿಯುವ ನೀರು, ಶೌಚಾಲಯ, ಜಾನುವಾರುಗಳಿಗೆ ನೀರು ಕಲ್ಪಿಸಬೇಕು. ಅಲ್ಲದೆ, ಯಾರ್ಡ್‌ನ ಅಂಗಳವನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ನಿತ್ಯ ನೂರಾರು ಎತ್ತಿನಗಾಡಿಯ ರೈತರು ಬರುತ್ತಿದ್ದಾರೆ. ಆದರೆ, ಇಲ್ಲಿ ಮೂಲ ಸೌಲಭ್ಯವಿಲ್ಲ. ರೈತರು ರಾತ್ರಿ ವೇಳೆಯಲ್ಲಿ ಮಲಗಲು, ಮಳೆ ಬಂದರೆ ನಿಲ್ಲಲು ಸ್ಥಳವಿಲ್ಲ. ಯಾರ್ಡ್ ಅಂಗಳದ ಕೆಸರಿನಲ್ಲಿ ಸಂಚಾರಕ್ಕೆ ಕಷ್ಟವಾಗಿದೆ. ಹೀಗಾಗಿ ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆ ಸ್ಥಗಿತ: ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಎತ್ತಿನಗಾಡಿಯ ಮಾಲೀ ಕರಿಗೆ ಟೋಕನ್ ವ್ಯವಸ್ಥೆ ರದ್ದು ಪಡಿಸ ಬೇಕು ಎಂದು 6 ಗಂಟೆಗಳ ಕಾಲ ಕಾರ್ಖಾನೆ ಯಂತ್ರವನ್ನು ಸ್ಥಗಿತಗೊಳಿಸಿದರು. ಕಾರ್ಖಾನೆಗೆ ಪರ್ಮಿಂಟ್ ನೀಡದಿ ದ್ದರಿಂದ ಲಾರಿ, ಟ್ರ್ಯಾಕ್ಟರ್, ಎತ್ತಿನಗಾಡಿಗಳು ಸಾಲುಸಾಲಾಗಿ ನಿಂತಿದ್ದವು. ಇದರಿಂದ ಜನಸಂಚಾರ ಅಸ್ತವ್ಯಸ್ಥಗೊಂಡಿತು. ಕಾರ್ಖಾನೆ ಅಧಿಕಾರಿ ಪುಟ್ಟಸ್ವಾಮಿ ಸ್ಥಳಕ್ಕೆ ಭೇಟಿನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮೇಲಧಿಕಾರಿಗಳೊಂದಿಗೆ ಮಾತ ನಾಡು ವುದಾಗಿ ಭರವಸೆ ನೀಡಿದರು.
ಸಬ್‌ಇನ್ಸ್‌ಪೆಕ್ಟರ್ ಶೇಷಾದ್ರಿ ಪ್ರತಿಭಟನಾಕಾರರ ಮನವೊಲಿಸಿ, ನಿಮ್ಮ ಸಮಸ್ಯೆಗಳನ್ನು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು. ಈ ವೇಳೆ ಮುಟ್ಟನಹಳ್ಳಿ ಚಂದ್ರು, ಕೀರ್ತಿ, ನಂದನ್, ಮುತ್ತುರಾಜು, ಕೃಷ್ಣ, ಬಸವರಾಜು, ಹನುಮಂತ, ಚಂದನ್, ಪ್ರಸನ್ನ ಹಾಜರಿದ್ದರು.