Advertisement

ಉಪ್ಪುಂದ: ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

09:31 PM Jun 28, 2019 | Sriram |


ಉಪ್ಪುಂದ: ಶಿಕ್ಷಕರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಉಪ್ಪುಂದ ಪ್ರೌಢಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಜೂ. 28ರಂದು ಪ್ರತಿಭಟನೆ ನಡೆಸಿದರು.

Advertisement

ಉಪ್ಪುಂದ ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ 287 ಹುಡುಗರು ಹಾಗೂ 325 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. 16 ಅಧ್ಯಾಪಕರು ಇದ್ದಾರೆ. ಇದರಲ್ಲಿ 5 ಶಿಕ್ಷಕರನ್ನು ಶಿಕ್ಷಣ ಇಲಾಖೆ ಏಕಾಏಕಿ ವರ್ಗಾವಣೆ ಆದೇಶ ಹೊರಡಿಸಿರುವುದು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದೆ.

ಸರಕಾರಿ ಶಾಲೆ
ಮುಚ್ಚುವ ಹುನ್ನಾರ?
ಸರಕಾರದ ನಿಯಮದಂತೆ 612 ವಿದ್ಯಾರ್ಥಿಗಳಿಗೆ 17 ಶಿಕ್ಷಕರು ಇರಬೇಕು. ಪ್ರಸ್ತುತ ಇರುವುದು 16 ಶಿಕ್ಷಕರು. ಒಂದು ಶಿಕ್ಷಕರ ಕೊರತೆಯ ನಡುವೆ ಪಾಠ ಮಾಡುತ್ತಿರುವುದರ ನಡುವೆ ಕನ್ನಡ ವಿಭಾಗ, ಇಂಗ್ಲಿಷ್‌, ಹಿಂದಿ, ವಿಜ್ಞಾನ ಹಾಗೂ ಸಮಾಜ ವಿಭಾಗದ ಶಿಕ್ಷರನ್ನು ವರ್ಗಾವಣೆ ಮಾಡಲಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ. ಅಲ್ಲದೇ ಶಾಲಾ ಎಸ್‌ಡಿಎಂಸಿ ಹಾಗೂ ಶಿಕ್ಷಕರ ಪ್ರಯತ್ನದಿಂದಾಗಿ 2019ನೇ ಸಾಲಿನ ದಾಖಲಾತಿಯಲ್ಲಿ 80 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಇವುಗಳ ನಡುವೆ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು. ವಿದ್ಯಾರ್ಥಿಗಳೊಂದಿಗೆ ಹೆತ್ತವರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರಕಾರಿ ಶಾಲೆಯನ್ನು ಉಳಿಸಬೇಕಾದ ಸರಕಾರವೇ ಶಿಕ್ಷಕರನ್ನು ವರ್ಗಾಯಿಸುವ ಮೂಲಕ ಶಿಕ್ಷರ ಕೊರತೆ ಉಂಟುಮಾಡಿ ಖಾಸಗಿ ಶಾಲೆಗಳಿಗೆ ಬೆಂಬಲ ನೀಡುವುದು ಇದರ ಮೂಲ ಉದ್ದೇಶವಾಗಿದೆ. ಸಮಾಜಕ್ಕೆ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸದಂತೆ ಮಾಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ತಡವಾಗಿ ಆಗಮಿಸಿದ ಕ್ಷೇತ್ರ ಶಿಕ³Òಣಾಧಿ ಕಾರಿ ಶಿಕ್ಷಕರ ಕೊಠಡಿಯಲ್ಲಿ ಕುಳಿತು ಮಾತನಾಡುತ್ತಿರುವುದನ್ನು ತಿಳಿದ ಹೆತ್ತವರು ನಾವು ಬಿಸಿಲಿನಲ್ಲಿ ಇದ್ದೇವೆ ನೀವು ಹೊರಗೆ ಬಂದು ಮಕ್ಕಳೊಂದಿಗೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಸದಸ್ಯರು, ಹೆತ್ತವರು ಪಾಲ್ಗೊಂಡರು.

ಶಿಕ್ಷಕರ ವರ್ಗಾವಣೆ ಕುರಿತು ಪಿಎಂ ನರೇಂದ್ರ ಮೋದಿ ಹಾಗೂ ರಾಜ್ಯದ ಶಿಕ್ಷಣ ಸಚಿವರಿಗೆ ಸಮಸ್ಯೆ ತಿಳಿಸಿದ್ದೇವೆ. ಯಾವುದೇ ಸ್ಪಂದನೆ ಇಲ್ಲ. 5 ಶಿಕ್ಷಕರನ್ನು ವರ್ಗಾವಣೆ ಮಾಡಿರುವುದರಿಂದ 612 ವಿದ್ಯಾರ್ಥಿಗಳಿಗೆ 11 ಶಿಕ್ಷಕರಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. 5 ಶಿಕ್ಷಕರ ವರ್ಗಾವಣೆ ರದ್ದು ಪಡಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟನೆ ಕೈಗೊಳ್ಳುತ್ತೇವೆ.
-ಶ್ರೀವರ್ಷಾ, ವಿದ್ಯಾರ್ಥಿನಿ

Advertisement

ವರ್ಗಾವಣೆ ಮಾಡುವುದಿಲ್ಲ
ವಿದ್ಯಾರ್ಥಿಗಳ ಹಾಗೂ ಪಾಲಕರ ನೋವು ಅರ್ಥವಾಗುತ್ತದೆ. ನಿಮ್ಮ ಬೇಡಿಕೆಯನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿ, ಮನವರಿಕೆ ಮಾಡಿ ಅವರ ಸಲಹೆ ಪಡೆದುಕೊಂಡು ಕ್ರಮ ಕೈಗೊಳ್ಳುತ್ತೇನೆ. ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ.
– ಜ್ಯೋತಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next