Advertisement

“ಕಾಲಾ’ಗೆ ತಟ್ಟಿದ ಪ್ರತಿಭಟನೆ ಬಿಸಿ

06:30 AM Jun 08, 2018 | |

ಬೆಂಗಳೂರು: ತಮಿಳು ನಟ ರಜನಿಕಾಂತ್‌ ನಟನೆಯ “ಕಾಲಾ’ ಸಿನಿಮಾ ಬಿಡುಗಡೆಗೆ ಗುರುವಾರ ಕನ್ನಡಪರ
ಸಂಘಟನೆಗಳ ಬಿಸಿ ತಟ್ಟಿತು. ಚಲನಚಿತ್ರ ಮಂದಿರ ಹಾಗೂ ಮಾಲ್‌ಗ‌ಳ ಮುಂದೆ ಪ್ರತಿಭಟನೆ, ಧರಣಿಯಿಂದಾಗಿ ಬೆಳಗ್ಗೆ ಪ್ರದರ್ಶನ ಸ್ಥಗಿತಗೊಂಡಿತ್ತು.

Advertisement

ಮಧ್ಯಾಹ್ನದ ನಂತರ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಕೆಲವೆಡೆ ಪ್ರದರ್ಶನ ಪ್ರಾರಂಭಗೊಂಡಿತು. ಸಿನಿಮಾ ಬಿಡುಗಡೆಗೆ ಭದ್ರತೆ ನೀಡುವಂತೆ ಹೈಕೋರ್ಟ್‌ ಸೂಚನೆ ಮೇರೆಗೆ ರಾಜ್ಯ ಸರ್ಕಾರದಿಂದ ಭದ್ರತೆ ಒದಗಿಸಲಾಗಿತ್ತು. ಆದರೆ, ಕನ್ನಡ ಪರ ಸಂಘಟನೆ ಗಳ ಪ್ರತಿಭಟನೆಯಿಂದಾಗಿ ಚಿತ್ರಮಂದಿರದ ಮಾಲೀಕರು ಸ್ವಯಂ ಪ್ರೇರಿತವಾಗಿಯೇ ಬೆಳಗ್ಗೆ ಸಿನಿಮಾ ಪ್ರದರ್ಶನ ರದ್ದುಗೊಳಿಸಿದರು.

ಬೆಂಗಳೂರು, ರಾಯಚೂರು,ಬಳ್ಳಾರಿಯಲ್ಲಿ ಕನ್ನಡ ಸಂಘಟನೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದರು. ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಕರವೇ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಸಾ.ರಾ.ಗೋವಿಂದ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವಾಟಾಳ್‌, ಸಾ.ರಾ.ಗೋವಿಂದ್‌ ಪ್ರತಿಭಟನೆ: ಯಶವಂತಪುರದಲ್ಲಿರುವ ಒರಿಯಾನ್‌ ಮಾಲ್‌ಗೆ ಕಾರ್ಯಕರ್ತರ ಜತೆ ಆಗಮಿಸಿದ ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಚಿತ್ರ ಪ್ರದರ್ಶಿಸ ದಂತೆ ಮಾಲ್‌ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಟಾಳ್‌ ನಾಗರಾಜ್‌ ಇತರರನ್ನು ವಶಕ್ಕೆ ಪಡೆದು
ಠಾಣೆಗೆ ಕರೆದೊಯ್ದರು. ಇದೇ ವೇಳೆ ಮಂತ್ರಿಮಾಲ್‌ ಮುಂಭಾಗ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.
ರಾ.ಗೋವಿಂದು ಮತ್ತು ಕರವೇ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಪೊಲೀಸ್‌ ಬಿಗಿ ಭದ್ರತೆ: ಬೆಂಗಳೂರಿನ ಮಂತ್ರಿ ಸ್ವೀರ್‌, ಓರಾಯನ್‌, ಫೋರಂ, ಗರುಡಾ, ಈಟ, ಲಿಡೋ
ಹಾಗೂ ಇತರೆ ಮಾಲ್‌ಗ‌ಳಿಗೆ ಒಬ್ಬರು ಎಸಿಪಿ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿತ್ತು.

3 ಕೋಟಿ ರೂ. ನಷ್ಟ
ಕನ್ನಡ ಚಿತ್ರರಂಗದ ಪ್ರಮುಖ ವಿತರಕ ರೊಬ್ಬರು ಹೇಳುವ ಪ್ರಕಾರ, “ಕಾಲಾ’ಪ್ರದರ್ಶನ ರದ್ದಾಗಿದ್ದರಿಂದ ಅಂದಾಜು
3 ಕೋಟಿ ರೂ. ನಷ್ಟವಾಗಿದೆ. “ಕಾಲಾ’ ಸಿನಿಮಾದ ಕರ್ನಾಟಕದ ವಿತರಣೆ ಹಕ್ಕು ಪಡೆದಿರುವ ಕನಕಪುರ
ಶ್ರೀನಿವಾಸ್‌ ಕೂಡಾ ಪ್ರದರ್ಶನ ರದ್ದಾಗಿದ್ದರಿಂದ ನಷ್ಟವಾಗಿರುವುದನ್ನು ಒಪ್ಪಿಕೊಳ್ಳುತ್ತಾರೆ.

ರಜನಿಕಾಂತ್‌ ಕನ್ನಡಿಗರು. ಹಿರಿಯ ನಟ. ಅವರ ಮೇಲೆ ಗೌರವವಿದೆ. ಆದರೆ, ಕಾವೇರಿ ವಿಚಾರ ಬಂದಾಗ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಸಮಸ್ಯೆಯನ್ನು ಕೂತು ಬಗೆಹರಿಸುತ್ತೇವೆ ಎಂದು ಹೇಳಬಹುದಿತ್ತು. ಆದರೆ,ಬಾಯಿಗೆ ಬಂದ ಹಾಗೆ ಮಾತನಾಡಿ ದ್ದಾರೆ. ನಮ್ಮ ಹೋರಾಟ ನಿಲ್ಲಲ್ಲ.
– ಸಾ.ರಾ.ಗೋವಿಂದು,
ಫಿಲ್ಮಂ ಚೇಂಬರ್‌ ಅಧ್ಯಕ್ಷ

ಕಾಲಾ ಚಿತ್ರವನ್ನು ನೋಡದೆಜನ ಬದುಕಬಹುದು. ಆದರೆ, ನೀರಿಲ್ಲದೇ ಬದುಕಲು  ಸಾಧ್ಯವಿಲ್ಲ.ಹೀಗಾಗಿ ಕಾಲಾ
ಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುಗಡೆಗೆ ಅವಕಾಶ ನೀಡುವುದಿಲ್ಲ.
– ವಾಟಾಳ್‌ ನಾಗರಾಜ್‌, ಕನ್ನಡ
ಸಂಘಟನೆಗಳ ಒಕ್ಕೂಟ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next