Advertisement

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

05:18 PM Nov 01, 2024 | Team Udayavani |

ದಾಂಡೇಲಿ: ರೈತರ ಜಮೀನನ್ನು ವಕ್ಫ್‌ಗೆ ಹಸ್ತಾಂತರಿಸುವ ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ನ.4ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಬಿಜೆಪಿ ಕರೆ ನೀಡಿದ ಹಿನ್ನೆಲೆಯಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕಿನ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರು ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುನೀಲ ಹೆಗಡೆ ಅವರು ಹೇಳಿದರು.

Advertisement

ಅವರು ಶುಕ್ರವಾರ ನಗರದಲ್ಲಿರುವ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಮಾಯಕ ರೈತರ ಪಹಣಿಗಳಲ್ಲಿ ‘ವಕ್ಫ್‌ ಆಸ್ತಿ, ಪರಭಾರೆ ನಿಷೇಧಿಸಿದೆ’ ಎಂದು ನಮೂದಿಸುವ ಮೂಲಕ ರಾಜ್ಯಾದ್ಯಂತ ರೈತರ ಜಮೀನು ಕಬಳಿಸುವ ಪ್ರಯತ್ನ ನಡೆದಿದೆ. ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ರೈತರ ಪರವಾಗಿ ಪ್ರತಿಭಟನೆ ಮಾಡಲಡಬೇಕಾಗಿದೆ. ಈ ಹೋರಾಟ ರೈತರ ಭೂಮಿಗಾಗಿ ಹೋರಾಟವಾಗಿದ್ದು, ಈ ಹೋರಾಟದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ವಿಶೇಷವಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸುನೀಲ‌ ಹೆಗಡೆಯವರು ಕರೆ‌ ನೀಡಿದರು.

ಈ ಸಂದರ್ಭದಲ್ಲಿ ದಾಂಡೇಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಬುದವಂತಗೌಡ ಪಾಟೀಲ್, ಜೋಯಿಡಾ ಬಿಜೆಪಿ ಮಂಡಲದ ಅಧ್ಯಕ್ಷರಾದ ಶಿವಾಜಿ ಗೋಸಾವಿ, ಪಕ್ಷದ ಪ್ರಮುಖರಾದ ರೋಷನ್ ನೇತ್ರಾವಳಿ, ಸುಧಾಕರ ರೆಡ್ಡಿ, ಗುರು ಮಠಪತಿ, ಗಿರೀಶ ಟೋಸೂರು, ರವಿ ಗಾಂವಕರ, ಪ್ರಶಾಂತ ಬಸೂರ್ತೆಕರ, ಗಿರೀಶ ಗೋಸಾವಿ, ಗುರಪ್ಪ ಹಣಬರ, ಚೆನ್ನಬಸಪ್ಪ‌ ಮುರುಗೋಡ, ಅಪ್ಪಸಾಹೇಬ ಕಾಂಬಳೆ, ಜಾನು, ಕೃಷ್ಣ ಕೋಕರೆ, ಉಮಾ ಹನುಮಸಾಗರ, ಬಿಜೆಪಿ ನಗರ ಸಭಾ ಸದಸ್ಯರುಗಳಾದ ವಿಜಯ ಕೋಲೆಕರ, ಶೋಭಾ ಜಾಧವ, ಪದ್ಮಜಾ ಪ್ರವೀಣ್ ಜನ್ನು, ರಮಾ ರವೀಂದ್ರ, ಅನ್ನಪೂರ್ಣ ಬಾಗಲಕೋಟೆ‌ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್

Advertisement

Udayavani is now on Telegram. Click here to join our channel and stay updated with the latest news.

Next