Advertisement

ಬಜೆಟ್‌ನಲ್ಲಿ ಅನ್ಯಾಯ ಖಂಡಿಸಿ ನಿರಶನ

07:33 PM Mar 16, 2021 | Team Udayavani |

ರಾಯಚೂರು: ರಾಜ್ಯ ಬಜೆಟ್ನಲ್ಲಿ ಅಂಗನವಾಡಿ ನೌಕರರಿಗೆ ಸೂಕ್ತ ಅನುದಾನ ಮೀಸಲಿಡದೆ ವಂಚಿಸಿದ ರಾಜ್ಯ ಸರ್ಕಾರದ ನಡೆ ಖಂಡಿಸಿ ಡಿಸಿ ಕಚೇರಿ ಎದುರಿನ ಉದ್ಯಾನವನದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಸದಸ್ಯರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.

Advertisement

ಕುರಿತು ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ರಾಜ್ಯ ಸರ್ಕಾರಕ್ಕೆ ಅಂಗನವಾಡಿ ನೌಕರರ ಶ್ರಮದ ಬೆಲೆ ತಿಳಿಯದಾಗಿದೆ. ಜೀವದ ಹಂಗು ತೊರೆದು ಕೆಲಸ ಮಾಡಿದ ನಮ್ಮ ಮೂಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಜೆಟ್ನಲ್ಲಿ ವಿಶೇಷ ಒತ್ತು ನೀಡುವಂತೆ ಮುಂಚೆಯೇ ಮನವಿ ಸಲ್ಲಿಸಿದರೂ ಮುಖ್ಯಮಂತ್ರಿಗಳು ಪರಿಗಣಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಸೂಕ್ತ ಸೌಲಭ್ಯ ಇಲ್ಲದಿದ್ದರೂ ಕಷ್ಟಪಟ್ಟು ಕೆಲಸ ಮಾಡುವ ಸ್ಥಿತಿ ಇದೆ. ಕೆಲಸದ ಒತ್ತಡದಿಂದ 35 ಜನ, ಕೊರೊನಾ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ 28 ಜನ ಸಾವಿಗೀಡಾಗಿದ್ದಾರೆ. 173 ಕಾರ್ಯಕರ್ತರಿಗೆ ಕೊರೊನಾ ಸೋಂಕು ತಗುಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿಯರ ನೇಮಕಾತಿ, ವೇತನ ವ್ಯತ್ಯಾಸ, ನಿವೃತ್ತಿ ಸೌಲಭ್ಯ ಸೇರಿದಂತೆ 339.48 ಕೋಟಿ ರೂ. ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಆದರೆ, ಮೂರು ಶಿಫಾರಸುಗಳ ಅಂಶಗಳಲ್ಲಿ ಒಂದು ಅಂಶ ಕೂಡ ಬಜೆಟ್ನಲ್ಲಿ ಉಲ್ಲೇಖವಾಗಿಲ್ಲ. ಬಜೆಟ್ಅಂತಿಮಗೊಳಿಸುವ ವೇಳೆಯಲ್ಲಾದರೂ ಅಂಶಗಳನ್ನು ಸೇರಿಸಬೇಕು. ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷೆ ಎಚ್‌.ಪದ್ಮಾ, ಕಾರ್ಯದರ್ಶಿ ಪಾರ್ವತಿ ಮನ್ಸಲಾಪುರ, ಸದಸ್ಯರಾದ ಗಂಗಮ್ಮ, ಗೋಕರಮ್ಮ, ವರಲಕ್ಷ್ಮಿ , ಲಕ್ಷ್ಮಿ, ಗೌರಮ್ಮ, ಪ್ರಭಾವತಿ, ನರ್ಮದಾ, ರಾಜಶ್ರೀ, ಭಾಗ್ಯಮ್ಮ, ಸಿಐಟಿಯು ಸಂಘಟನೆ ಮುಖಂಡರಾದ ಡಿ.ಎಸ್‌. ಶರಣಬಸವ, ಕೆ.ಜಿ ವೀರೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next