Advertisement

ಗಾಂಧಿ ಜಯಂತಿ ದಿನ ಸರಣಿ ಪ್ರತಿಭಟನೆ

01:50 PM Oct 03, 2020 | Suhan S |

ಮಂಡ್ಯ: ನಗರದಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸರಣಿ ಪ್ರತಿಭಟನೆಗಳು ರಿಂಗಣಿಸಿದವು. ರೈತಸಂಘ,ಕೃಷಿ ಕೂಲಿಕಾರರ ಪ್ರಾಂತ ರೈತಸಂಘ, ಸ್ವಂತ ಮನೆ ನಮ್ಮ ಹಕ್ಕು, ಸಿಐಟಿಯು, ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು, ಮಹಿಳಾ ಮುನ್ನಡೆ ಸೇರಿದಂತೆ ನಾಲ್ಕೈದು ಸಂಘಟನೆ ಗಳು ಸರಣಿ ಪ್ರತಿಭಟನೆ ನಡೆಸಿದವು.

Advertisement

ಕಾಯ್ದೆಗಳ ವಿರುದ್ಧ ಆಕ್ರೋಶ: ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್‌ ತಿದ್ದುಪಡಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಸರ್ಕಾರಗಳ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿ ಭಟನಾಕಾರರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

 ಒಕ್ಕಲೆಬ್ಬಿಸುವಕೆಲಸ: ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂ ಗೌಡ ಮಾತನಾಡಿ, ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ರೈತರ ಜಮೀನನ್ನು ಬಂಡವಾಳ ಶಾಹಿಗಳಿಗೆ ಕೊಡಲು ಸರ್ಕಾರ ಗಳು ಹೊರಟಿವೆ. ಉಳುವವನೇ ಭೂಮಿಯ ಒಡೆಯ ಎಂಬನಿಯಮ ತೆಗೆದು ಹಾಕಿ, ಉಳ್ಳವನೇ ಭೂಮಿಯ ಒಡೆಯಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಕಿಡಿಕಾರಿದರು. ರೈತರ ಬೆಳೆಗಳಿಗೆ ಬೆಂಬಲ ಬೆಲೆಘೋಷಿಸುವ ಬದಲು ಎಪಿ

ಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಬಂಡವಾಳ ಶಾಹಿಗಳ ಕೈಗೆ ಒಪ್ಪಿಸುವಮೂಲಕರೈತರುಕೃಷಿಯಿಂದವಿಮುಖರಾಗುವಂತೆ ಮಾಡಲು ಸರ್ಕಾರ ಹೊರಟಿವೆ. ಇದರ ಜೊತೆಗೆ ವಿದ್ಯುತ್‌ನ್ನುಖಾಸಗಿಗೆ ನೀಡುವ ಮೂಲಕ ರೈತರು, ಸಾರ್ವಜನಿಕರು, ಬಡವರಿಂದ ಹಣ ವಸೂಲಿ ಮಾಡಲು ಮುಂದಾಗಿದೆ. ವಿದ್ಯುತ್‌ ಖಾಸಗಿಯಿಂದ ಎಲ್ಲ ವರ್ಗದ ಜನರಿಗೆ ತೊಂದರೆ ಯಾಗಲಿದೆ. ಖಾಸಗಿಯವರು ಇಷ್ಟಬಂದಂತೆ ದರ ಏರಿಸುವುದರಿಂದ ಜನರು ಹೈರಾಣರಾಗಲಿದ್ದಾರೆ. ಆದ್ದರಿಂದ ರೈತರ ವಿರೋಧಿ ಕಾಯ್ದೆಗಳನ್ನುಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ರೈತಸಂಘ ಮಹಿಳಾಧ್ಯಕ್ಷೆ ಲತಾಶಂಕರ್‌, ಸಾಮಾಜಿಕ ಕಾರ್ಯಕರ್ತ ಕೆ.ಆರ್‌.ರವೀಂದ್ರ, ರಾಜಣ್ಣ ಹಾಜರಿದ್ದರು.

ಉದ್ಯೋಗಖಾತ್ರಿಕೂಲಿ ಹೆಚ್ಚಳಕ್ಕೆ ಆಗ್ರಹ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರೆ ಯೋಜನೆಯಡಿ ದಿನಕ್ಕೆ 600 ರೂ. ಕೂಲಿ, ವರ್ಷದಲ್ಲಿ 200 ದಿನ ಕೆಲಸ, ಯಂತ್ರದ ಹಾವಳಿ ತಪ್ಪಿಸಿ, ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಲು ಮತ್ತುಕೃಷಿ, ಕಾರ್ಮಿಕ, ವಿದ್ಯುತ್‌, ದಿನಬಳಕೆ ವಸ್ತುಗಳ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆಕೂಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ತಿಂಗಳಿಗೊಂದು ರೋಜ್‌ಗಾರ್‌ ದಿವಸದ ಕಡ್ಡಾಯ ಆಚರಣೆ ಮಾಡಬೇಕು. ಯಂತ್ರದ ಹಾವಳಿ ತಪ್ಪಿಸಬೇಕು. ಕಾಯಕ ಬಂಧುಗಳ ನೋಂದಾಯಿಸಿ ಗುರುತಿನ ಕಾರ್ಡ್‌ ನೀಡಬೇಕು. ಒಂದು ತಿಂಗಳಿನಿಂದ ಬಾಕಿ ಉಳಿದಿರುವ ಕೂಲಿ ನೀಡಬೇಕು. ಕೃಷಿ, ಕಾರ್ಮಿಕ, ವಿದ್ಯುತ್‌, ದಿನಬಳಕೆ ವಸ್ತುಗಳ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಎಂ.ಪುಟ್ಟಮಾಧು, ಬಿ.ಹನುಮೇಶ್‌, ಕೆ. ಹನುಮೇಗೌಡ, ಶಿವಮಲ್ಲಯ್ಯ, ನಾಗರಾಜು, ಅಮಾ ಸಯ್ಯ, ಗಿರೀಶ್‌, ಆರ್‌.ರಾಜು, ಶಂಕರಪ್ಪ, ಬಸವಣ್ಣ, ಶುಭಾವತಿ, ರಾಮಣ್ಣ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next