Advertisement

ಬಜೆಟ್‌ನಲ್ಲಿ ಕೋಲಾರ ನಿರ್ಲಕ್ಷ್ಯಕ್ಕೆ ಆಕ್ರೋಶ

04:28 PM Mar 10, 2021 | Team Udayavani |

ಕೋಲಾರ: ಈ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದನ್ನು ಖಂಡಿಸಿ, ಜಿಲ್ಲೆಯನ್ನು ನೆರೆಯ ಆಂಧ್ರ ರಾಜ್ಯಕ್ಕೆ ಸೇರಿಸುವಂತೆ ಆಗ್ರಹಿಸಿ ರೈತ ಸಂಘದಿಂದ ನಗರದ ಮೆಕ್ಕೆ ವೃತ್ತದಲ್ಲಿ ಮುಖ್ಯಮಂತ್ರಿಸೇರಿದಂತೆ ಜಿಲ್ಲೆಯ ಸಂಸದರು, ಶಾಸಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ,ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿವೆ.

ಜಾಗ ನೀಡಿಲ್ಲ: ಅತಿವೃಷ್ಟಿ, ಅನಾವೃಷ್ಟಿಯಿಂದಾಗಿರೈತರು ಸಂಕಷ್ಟದಲ್ಲಿದ್ದು, ಸಾಲ ಮಾಡಿ ಬೆಳೆದಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯೂಇಲ್ಲದಾಗಿದ್ದು, ಕೋಲಾರ ಎಪಿಎಂಸಿ ಮಾರುಕಟ್ಟೆಗೆಅವಶ್ಯವಿರುವ 50 ಎಕರೆ ಜಾಗ ಗುರುತಿಸಿ ನೀಡಲುಈವರೆಗೂ ಸಾಧ್ಯವಾಗಿಲ್ಲ ಎಂದು ದೂರಿದರು.

ಶಾಶ್ವತ ಒರಿಹಾರ ಇಲ್ಲ: ಜಿಲ್ಲೆಯ ಗಡಿಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ವಾರಕ್ಕೆ2-3 ಬಾರಿ ಕಾಡಾನೆಗಳ ದಾಳಿ ನಡೆಯುತ್ತಲೇ ಇರುತ್ತದೆ. ಈಗಾಗಲೇ ಕೋಟ್ಯಂತರ ರೂ.ಬೆಳೆನಷ್ಟವುಂಟಾಗಿದ್ದು, ಹತ್ತಾರು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಆದರೂ ಶಾಶ್ವತ ಪರಿಹಾರ ಕಲ್ಪಿಸಿಕೊಡುವುದಕ್ಕೆ ಸರ್ಕಾರ ಮುಂದಾಗಿಲ್ಲ ಎಂದುದೂರಿದರು.

ಜಿಲ್ಲೆಗೆ ಬಜೆಟ್‌ನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು,ಮಾವು ಸಂಸ್ಕರಣಾ ಘಟಕಗಳು ಸೇರಿದಂತೆಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರವನ್ನಾದರೂನೀಡುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ ಎಂದುಅಸಮಾಧಾನ ವ್ಯಕ್ತಪಡಿಸಿದರು.

Advertisement

ಜಿಲ್ಲೆಗೆ ಅನ್ಯಾಯವಾಗಿದ್ದರೂ ಜಿಲ್ಲೆಯ 6 ಮಂದಿಶಾಸಕರ ಪೈಕಿ ಒಬ್ಬರೂ ಸಹ ಈ ಬಗ್ಗೆ ಚಕಾರವೆತ್ತದೆ ಮೌನಕ್ಕೆ ಶರಣಾಗಿರುವುದು ಖಂಡನೀಯವಾಗಿದ್ದು,ಜಿಲ್ಲೆಯ ಬಗ್ಗೆ ಇಷ್ಟರ ಮಟ್ಟಕ್ಕೆ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌, ತಾಲೂಕು ಅಧ್ಯಕ್ಷ ಈಕಂಬಳ್ಳಿಮಂಜುನಾಥ್‌, ರಾಜ್ಯ ಸಂಚಾಲಕ ಅನಿಲ್‌, ನಂಗಲಿ ಕಿಶೋರ್‌, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್‌,ಮಂಗಸಂದ್ರ ನಾಗೇಶ್‌, ತಿಮ್ಮಣ್ಣ, ಚಲಪತಿ, ಸುಪ್ರೀಂಚಲ, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ಕುವ್ವಣ್ಣ, ಅಶ್ವತ್ಥಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಶಾಸಕರಿಲ್ಲದ್ದಕ್ಕೆ ಕಡೆಗಣನೆ :  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಶಾಸಕರುಇಲ್ಲದ ಕಾರಣ ರಾಜ್ಯ ಸರ್ಕಾರ ಕಡೆಗಣಿಸಿದೆಎಂದು ಕಿಡಿಕಾರಿದರು. ಜಿಲ್ಲೆಗೆ ಖಾಯಂ ಜಿಲ್ಲಾಉಸ್ತುವಾರಿ ಸಚಿವರೂ ಇಲ್ಲದ ಕಾರಣ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೂ ಜನರಿಗೆಸಾಧ್ಯವಾಗುತ್ತಿಲ್ಲ. ಕೇವಲ ಧ್ವಜಾರೋಹಣಕೆ Rಮಾತ್ರವೇ ಸಿ.ಪಿ.ಯೋಗೇಶ್ವರ್‌ ಅವರನ್ನುಜಿಲ್ಲೆಗೆ ಕಳುಹಿಸಿದ್ದು, ಆ ಬಳಿಕ ಇತ್ತ ಯಾರನ್ನೂ ನೇಮಕ ಮಾಡದೆ ಇರುವುದು ಜನತೆಯಲ್ಲಿ ಆಕ್ರೋಶ ಮತ್ತಷ್ಟು ಎಚ್ಚಿಸಿದೆ ಎಂದು ತಿಳಿಸಿದರು.

ಬಜೆಟ್‌ ಸಮೀಪಿಸಿದ್ದ ಹಿನ್ನೆಲೆಯಲ್ಲಿ ಅನೇಕ ಹೋರಾಟಗಳ ಮೂಲಕ ಜಿಲ್ಲೆಯಸಮಸ್ಯೆಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿದ್ದರೂ, ಯಾವುದನ್ನೂ ಪರಿಗಣಿಸಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next