Advertisement

ಗೋಕಳ್ಳತನ, ಅಕ್ರಮ ಗೋಸಾಗಾಟ ತಡೆಯುವಂತೆ ಆಗ್ರಹಿಸಿ ಕಾಪುವಿನಲ್ಲಿ ಪ್ರತಿಭಟನೆ

01:57 AM Jul 04, 2019 | sudhir |

ಕಾಪು: ಗೋವಂಶದ ಮೇಲಿನ ಕ್ರೌರ್ಯ, ಗೋಕಳ್ಳತನ, ಗೋವಧೆ, ಅಕ್ರಮ ಗೋ ಸಾಗಾಟ ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಕಾಪು ತಾಲೂಕು ಸಂಘಟನೆಯ ವತಿಯಿಂದ ಜು. 3ರಂದು ತಹಶೀಲ್ದಾರರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

Advertisement

ಕೋಮ ಗಲಭೆಗೆ ಸಂಚು

ಧರ್ಮ ಜಾಗರಣ ಮಂಗಳೂರು ವಿಭಾಗ‌ ಸಹ ಸಂಯೋಜಕ ಕುತ್ಯಾರು ಪ್ರಸಾದ್‌ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಅಕ್ರಮ ಗೋ ಸಾಗಾಟ, ಗೋಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ ಸರಕಾರ ಸುಮ್ಮನೆ ಕುಳಿತಿದೆ. ಹಟ್ಟಿಯಲ್ಲಿ ಅಥವಾ ಗದ್ದೆಗಳಲ್ಲಿ ಕಟ್ಟಿ ಹಾಕಿದ ಗೋವುಗಳನ್ನು ದರೋಡೆಗೈಯ್ಯುವ ಮೂಲಕ ಕೃಷಿಕನ ಬದುಕುವ ಹಕ್ಕನ್ನು ಕಿತ್ತು ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಗೋ ಕಳ್ಳತನ, ಗೋ ಹತ್ಯೆಯ ಮೂಲಕವಾಗಿ ಕರಾವಳಿಯಲ್ಲಿ ಕೋಮ ಗಲಭೆಗೆ ಸಂಚು ನಡೆಯುತ್ತಿದೆ. ಇದನ್ನು ಖಂಡಿಸಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು ಮಾತನಾಡಿ, ಗೋವು ಗಳ ಕಳ್ಳತನದ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡಲಾಗುತ್ತದೆ. ಅಕ್ರಮವಾಗಿ ನಡೆಯುವ ಗೋಹತ್ಯಾ ಪ್ರಕರಣವನ್ನು ತಡೆಯುವಲ್ಲಿ ಸರ ಕಾರ ವಿಫಲವಾಗಿದೆ. ಗೋ ಕಳ್ಳತನ ತಡೆಯಲು ಹೋದವರ ವಿರುದ್ಧವೇ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸುವ ನಿಟ್ಟಿನಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇನ್ನೂ ಮುಂದುವರಿದರೆ ಕರಾವಳಿ ಯಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.

ಕಾಪು ತಾಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಕಾಪು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಅವರ ಮೂಲಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಕಾಪು ತಾಲೂಕು ಸಂಘ ಚಾಲಕ‌ ತಾರನಾಥ ಕೋಟ್ಯಾನ್‌, ವಿಶ್ವ ಹಿಂದೂ ಪರಿಷತ್‌ ಕಾಪು ವಲಯಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಬಜರಂಗದಳ ಕಾಪು ಪ್ರಖಂಡ ಸಂಚಾಲಕ ರಾಜೇಶ್‌ ಕೋಟ್ಯಾನ್‌ ಪಡುಬಿದ್ರಿ, ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷ ಅರುಣ್‌ ಕಾಮತ್‌ ಕಾಪು, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ರಾಜೇಶ್‌ ಉಚ್ಚಿಲ, ಸುಧೀರ್‌ ಪೂಜಾರಿ ಕಲ್ಲುಗುಡ್ಡೆ, ನಿತೇಶ್‌ ಎರ್ಮಾಳ್‌, ಗೋವರ್ಧನ್‌ ಭಟ್, ಪ್ರಕಾಶ್‌ ಕೋಟ್ಯಾನ್‌, ಉಡುಪಿ ಜಿ.ಪಂ. ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ಶಶಿಕಾಂತ್‌ ಪಡುಬಿದ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ, ಬಿಜೆಪಿ ಪ್ರಮುಖರಾದ ಗಂಗಾಧರ ಸುವರ್ಣ, ಕೇಸರಿ ಯುವರಾಜ್‌, ಅರುಣ್‌ ಶೆಟ್ಟಿ ಪಾದೂರು, ಸಂದೀಪ್‌ ಶೆಟ್ಟಿ ಕಾಪು, ಶಿವಪ್ರಸಾದ್‌ ಶೆಟ್ಟಿ, ರಮಾ ವೈ. ಶೆಟ್ಟಿ, ಚಂದ್ರ ಮಲ್ಲಾರು ಮೊದಲಾದವರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್‌ ಮುಖಂಡ ರಮಾಕಾಂತ್‌ ದೇವಾಡಿಗ ಪ್ರಸ್ತಾವನೆ ಗೈದರು. ಬಜರಂಗದಳ ಕಾಪು ಪ್ರಖಂಡ ಸಂಚಾಲಕ ಜಯಪ್ರಕಾಶ್‌ ಪ್ರಭು ಮಟ್ಟಾರು ಸ್ವಾಗತಿಸಿದರು. ಜಿಲ್ಲಾ ಸಹ ಸಂಚಾಲಕ ಸುಧೀರ್‌ ಕುಮಾರ್‌ ನಿಟ್ಟೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next