Advertisement

ಎಲ್‌ಐಸಿ ಕಚೇರಿ ಎದುರು ಪ್ರತಿಭಟನೆ

03:17 PM Feb 05, 2020 | Suhan S |

ಹಾವೇರಿ: ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಎಲ್‌ಐಸಿ ನೌಕರರ ಸಂಘ ಮತ್ತು ಪ್ರತಿನಿಧಿಗಳ ಸಂಘದ ಸದಸ್ಯರು ಮಂಗಳವಾರ ಎಲ್‌ಐಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಬಜೆಟ್‌ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಎಲ್‌ಐಸಿಯನ್ನು ಶೇರು ಬಂಡವಾಳ ಮಾರುಕಟ್ಟೆಯಲ್ಲಿ ನೋಂದಾಯಿಸಿ ಸ್ವಲ್ಪ ಪ್ರಮಾಣದ ಶೇರನ್ನು ಖಾಸಗಿ ಕಂಪನಿಗಳಿಗೆ ವಿಕ್ರಯಿಸಿ ಬರುವ ಆದಾಯದಿಂದ ತಮ್ಮ ವಿತ್ತೀಯ ಕೊರತೆ ಸರಿದೂಗಿಸುವುದಾಗಿ ಪ್ರಸ್ತಾಪಿಸಿದ್ದಾರೆ. ಆ ಮೂಲಕ ಹಂತಹಂತವಾಗಿ ಖಾಸಗಿಯವರ ಕಬಂಧ ಬಾಹುಗಳಿಗೆ ವರ್ಗಾಯಿಸಲು ಹವಣಿಸಿದ್ದಾರೆ. ಇದಕ್ಕೆಲ್ಲ ಕಳೆದ 25 ವರ್ಷಗಳಲ್ಲಿನ ಆರ್ಥಿಕ ನೀತಿ ಮತ್ತು ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿನ ಆರ್ಥಿಕ ನೀತಿಗಳೇ ಕಾರಣವಾಗಿದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತ ಬಂದಿದೆ ಎಂದರು.

ಸರ್ಕಾರಕ್ಕೆ ಯೋಜನೆ ರೂಪಿಸಲು ಸರ್ಕಾರದಲ್ಲಿ ಹಣವಿಲ್ಲದಂತಾಗಿದೆ. ಅನೇಕ ಸಾರ್ವಜಿಕ ಉದ್ದಿಮೆಗಳು ನಷ್ಟದಲ್ಲಿರುವುದರಿಂದ ಸುಸೂತ್ರವಾಗಿ ಹೊರಟಿರುವ ಎಲ್‌ಐಸಿ ಶೇರು ಮಾರಾಟ ಮಾಡಿ ಆ ಹಣದಲ್ಲಿ ಯೋಜನೆ ರೂಪಿಸುವ ದುರಾಲೋಚನೆ ಸರ್ಕಾರದ್ದಾಗಿದೆ. ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು. ಜೀವ ವಿಮಾ ನಿಗಮವನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next