Advertisement

ಕೊಪ್ಪಳ ನಗರಸಭೆ ಮುಂದೆ ಮಹಿಳೆ ಶವವಿಟ್ಟು ಪ್ರತಿಭಟನೆ

03:35 PM Nov 21, 2022 | Team Udayavani |

ಕೊಪ್ಪಳ: ಕೊಪ್ಪಳ ನಗರದ 30ನೇ ವಾರ್ಡಿನಲ್ಲಿ ಬಿಡಾಡಿ ದನಗಳ ದಾಳಿಯಿಂದಾಗಿ ರಮಿಜಾ ಬೇಗಂ ಎನ್ನುವ ಮಹಿಳೆ ಮೃತಪಟ್ಟಿದ್ದು, ಶವವನ್ನು ನಗರಸಭೆ ಮುಂದಿಟ್ಟು ಸೋಮವಾರ ಪ್ರತಿಭಟನೆ ನಡೆಸಲಾಗಿದೆ.

Advertisement

ಕೊಪ್ಪಳ ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಬಿಡಾಡಿ ದನಗಳ ಹಾವಳಿ ಮಿತಿ ಮೀರಿದ್ದು, ಇದರಿಂದ ಜನರು ರಸ್ತೆಯ ಮೇಲೆ ಸಂಚಾರ ಮಾಡದಂತ ಸ್ಥಿತಿ ಎದುರಾಗಿದೆ. ಹಗಲು ರಾತ್ರಿ ಎನ್ನದೇ ಬಿಡಾಡಿ ದನಗಳು ರಸ್ತೆ ಮೇಲೆ ಮಲಗಿ ಪ್ರಯಾಣಿಕರಿಗೆ ತುಂಬಾ ತೊಂದರೆ ಮಾಡುತ್ತಿವೆ. ಈ ಮಧ್ಯೆ ಕೊಪ್ಪಳ ನಗರದ 30 ನೇ ವಾರ್ಡಿನ ನಿವಾಸಿ ರಮಿಜಾ ಬೇಗಂ ಎನ್ನುವ ಮಹಿಳೆ ಭಾನುವಾರ ಹೋಟಲ್ ನಲ್ಲಿ ಕೆಲಸ ಮಾಡುತ್ತಾ ಹೊರಗೆ ಬಂದಿದ್ದು,ಎರಡು ಬಿಡಾಡಿ ಗುದ್ದಾಡುತ್ತಾ ರಮಿಜಾ ಹೊಟ್ಟೆಯ ಭಾಗಕ್ಕೆ ತಿವಿದಿವೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದು, ಕಿಡ್ನಿ ಹೊರ ಬಂದಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುವ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದಾರೆ.

ಇದರಿಂದ ಆಕ್ರೋಶಗೊಂಡ ವಾರ್ಡಿನ ನಿವಾಸಿಗಳು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಷ್ಟು ಬಾರಿ ಮನವಿ ಮಾಡಿದರೂ ಬಿಡಾಡಿ ದನಗಳನ್ನ ಗೋ ಶಾಲೆಗೆ ಸಾಗಿಸುತ್ತಿಲ್ಲ. ನಗರಸಭೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿತಲ್ಲದೇ ಮೃತ ಮಹಿಳೆ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಶವವನ್ನು ನಗರಸಭೆ ಮುಂದಿಟ್ಟು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಸ್ಥಳಕ್ಕೆ ಡಿಸಿ ಸೇರಿ ಶಾಸಕರು, ಸಂಸದರು ಬರಬೇಕು ಎಂದು ಒತ್ತಾಯ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next