Advertisement

ಡಿಸಿ ಕಚೇರಿ ಎದುರು ಪ್ರತಿಭಟನೆ

04:05 PM Mar 21, 2017 | Team Udayavani |

ಧಾರವಾಡ: ಅಳ್ನಾವರ ತಾಲೂಕು ಘೋಷಣೆ ಬೆನ್ನಲ್ಲೇ ಮತ್ತೆ ವಿವಾದ ಭುಗಿಲೆದ್ದಿದೆ. ಧಾರವಾಡ ಸಮೀಪದಲ್ಲೇ ಇರುವ ನಿಗದಿ ಹಾಗೂ ಸುತ್ತಲಿನ ಗ್ರಾಮಗಳನ್ನು ಧಾರವಾಡ ತಾಲೂಕಿನಲ್ಲೇ ಉಳಿಸುವಂತೆ ಆಗ್ರಹಿಸಿ ಹೋರಾಟ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. 

Advertisement

ರಾಜ್ಯ ಸರಕಾರ ಇದೀಗ ತಾಲೂಕು ವಿಭಜಿಸಿ ನೂತನವಾಗಿ ಅಳ್ನಾವರ ತಾಲೂಕು ರಚಿಸಲು ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಮುಂದಾಗಿರುವ ಕ್ರಮವನ್ನು ಸ್ವಾಗತಿಸಿರುವ ಸಮಿತಿ, ನಿಗದಿ ಹಾಗೂ ಸುತ್ತಲಿನ ಗ್ರಾಮಗಳನ್ನು ಮಾತ್ರ ಧಾರವಾಡ ತಾಲೂಕಿನಲ್ಲಿಯೇ ಉಳಿಸುವಂತೆ ಡಿಸಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. 

ನಿಗದಿ ಹಾಗೂ ಸುತ್ತಲಿನ ಗ್ರಾಮಗಳು ಧಾರವಾಡದಿಂದ 10-15 ಕಿ.ಮೀ. ವ್ಯಾಪ್ತಿಯಲ್ಲಿವೆ. ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಅಳ್ನಾವರ ಪಟ್ಟಣವು ಈ ಗ್ರಾಮಗಳಿಗೆ 40-55 ಕಿ.ಮೀ ಅಂತರದಲ್ಲಿದೆ. ಒಂದು ವೇಳೆ ಈ ಗ್ರಾಮಗಳನ್ನು ನೂತನ ತಾಲೂಕಿಗೆ ಸೇರಿಸಿದರೆ ಆರ್ಥಿಕವಾಗಿ ಅನಾನುಕೂಲ ಮಾತ್ರವಲ್ಲ ಅನಾವಶ್ಯಕವಾಗಿ ಸಮಯ ವ್ಯಯಿಸಬೇಕಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. 

ಹೀಗಾಗಿ ನಿಗದಿ ಹಾಗೂ ಸುತ್ತಲಿನ ಯರಿಕೊಪ್ಪ, ಮನಗುಂಡಿ, ಮನಸೂರ,ಚಿಕ್ಕಮಲ್ಲಿಗವಾಡ, ಹಳ್ಳಿಗೇರಿ, ದೇವರಹುಬ್ಬಳ್ಳಿ,  ಕಲಕೇರಿ, ಮಂಡಿಹಾಳ, ಮುಗದ, ಕ್ಯಾರಕೊಪ್ಪ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಧಾರವಾಡ ತಾಲೂಕಿನಲ್ಲೇ ಮುಂದುವರಿಸಬೇಕು. ಇದರಿಂದ ಈ ಗ್ರಾಮಗಳ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ಈ ಮನವಿ ಪರಿಗಣಿಸಿ ಬೇಡಿಕೆ ಈಡೇರಿಸದೇ ಇದ್ದರೆ ಉಗ್ರ ಹೋರಾಟ ಅನಿವಾರ್ಯ ಆಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. 

ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪದಾಧಿಕಾರಿಗಳಾದ ದಶರಥರಾವ್‌ ದೇಸಾಯಿ, ಕಲ್ಲಪ್ಪ ಹಟ್ಟಿ, ದೇವೇಂದ್ರ ಕಾಳೆ, ಕಲ್ಮೇಶ ಹಾವೇರಿಪೇಟ, ಗಂಗಾಧರ ನಿಸ್ಸಿಮನವರ, ಮಲ್ಲಪ್ಪ ಭಾವಿ, ನಾಗರಾಜ ಕುಂದಗೋಳ, ಎನ್‌. ಬಿ. ಜೋಡಳ್ಳಿ, ಕರೆಪ್ಪ ಅಮ್ಮಿನಬಾವಿ, ಬಸವರಾಜ ಗುಂಡಗೋವಿ, ಶಿವು ಹಡಪದ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next