Advertisement

ಬಿಜೆಪಿಯಿಂದ ಪ್ರತಿಭಟನೆ

01:10 PM Jan 08, 2018 | |

ವೇಣೂರು: ಸಿಎಂ ಆಗಮನ ವೇಳೆ ರವಿವಾರ ಬೆಳ್ತಂಗಡಿ ಬಿಜೆಪಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ
ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

Advertisement

ರಾಜ್ಯ ಕಾಂಗ್ರೆಸ್‌ ಸರಕಾರ ಹಿಂದೂ ವಿರೋಧಿ ಧೋರಣೆಯಲ್ಲಿ ಆಡಳಿತ ನಡೆಸುತ್ತಿದೆ. ಇಲ್ಲಿ ಹಿಂದೂ ಸಮಾಜಕ್ಕೆ ರಕ್ಷಣೆಯೇ ಇಲ್ಲವಾಗಿದೆ. ಸಿದ್ದರಾಮಯ್ಯ ಸರಕಾರ ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿ ಸರಕಾರದ ವಿರುದ್ಧ, ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುಂಜಾಗ್ರತ ಕ್ರಮವಾಗಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಸರಕಾರಿ ಬಸ್‌ ಮೂಲಕ ವೇಣೂರು ಪೊಲೀಸ್‌ ಠಾಣೆಗೆ ಕರೆತಂದರು.

ಗೊಂದಲ ಸೃಷ್ಟಿ
ಪ್ರತಿಭಟನ ನಿರತ ಬಿಜೆಪಿ ಕಾರ್ಯಕರ್ತರನ್ನು ಸರಕಾರಿ ಬಸ್‌ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಬೆಳ್ತಂಗಡಿ ಮೂರು
ಮಾರ್ಗದ ಬಳಿ ಮುಖ್ಯಮಂತ್ರಿಗೆ ಕಾಯುತ್ತಿದ್ದ ಕಾರ್ಯಕರ್ತರೆದುರು  ಧಿಕ್ಕಾರ ಕೂಗಿದಾಗ ಗೊಂದಲ ಸೃಷ್ಟಿಯಾಯಿತು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರೂ ಕೂಡಾ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ವೇಣೂರು ಠಾಣೆಯ ಮುಂಭಾಗದಲ್ಲೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್‌ ಜಿ. ಗೌಡ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ, ಮುಖಂಡರಾದ
ಪ್ರಸಾದ್‌ ಕುಮಾರ್‌, ಶಾರದಾ ರೈ, ವಿಜಯ ಗೌಡ ವೇಣೂರು, ಲಕ್ಷ್ಮೀ ನಾರಾಯಣ ಕೊಕ್ಕಡ, ಮೋಹನದಾಸ ಲಾೖಲ, ಕಿಶೋರ್‌ ವಳಂಬ್ರ, ರಕ್ಷಿತ್‌ ಶೆಟ್ಟಿ, ಯಶೋಧರ ಬೆಳಾಲು ಮೊದಲಾದವರನ್ನು ಬಂಧಿಸಲಾಯಿತು.

ಬಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಹಾಗೂ ವಿಹಿಂಪ ತಾಲೂಕು ಕಾರ್ಯದರ್ಶಿ ನವೀನ್‌ ನೆರಿಯ
ಅವರನ್ನು ಬೆಳಗ್ಗೆಯೇ ಮುಂಜಾಗ್ರತ ಕ್ರಮವಾಗಿ ಬಂಧಿಸಲಾಗಿತ್ತು. ಭಾಸ್ಕರ ಅವರನ್ನು ಧರ್ಮಸ್ಥಳ ಪೊಲೀಸರು, ನವೀನ್‌ ಅವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next