Advertisement

ಅಕ್ರಮ ಪಡಿತರ ಮಾರಾಟ ತಡೆಗೆ ಆಗ್ರಹ

03:25 PM Dec 02, 2020 | Suhan S |

ಜೇವರ್ಗಿ: ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಪಡಿತರ ಮಾರಾಟ ತಡೆಯಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕನ್ನಡ ಮತ್ತು ದಲಿತ ಪರ ಒಕ್ಕೂಟ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಜೈ ಕನ್ನಡಿಗರ ಸೇನೆ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ರಾಷ್ಟ್ರೀಯ ಸಮಾಜ ಪಕ್ಷ, ಕರವೇ, ಡಾ| ಬಾಬು ಜಗಜೀವನರಾಂ ಯುವಕರ ಸಂಘ, ಅಂಬೇಡ್ಕರ್‌ ಸೇನೆ ಯುವ ಘಟಕ, ಅಖೀಲ ಕರ್ನಾಟಕ ಭೋವಿ ಯುವ ವೇದಿಕೆ, ಜಯ-ಕರ್ನಾಟಕ ಸಂಘಟನೆ, ಬಂಜಾರಾ ರಕ್ಷಣಾ ವೇದಿಕೆಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿಪ್ರವಾಸಿ ಮಂದಿರದಿಂದ ತಹಶೀಲ್‌ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಸಿದರಾಯ ಭೋಸಗಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಕರವೇ ರಾಜ್ಯ ಸಂಚಾಲಕ ಮಂಜುನಾಥ ನಾಲವಾರಕರ್‌, ತಾಲೂಕಿನಾದ್ಯಂತ ಅಕ್ರಮ ಪಡಿತರ ಅಕ್ಕಿ ಮಾರಾಟ ಮಾಡಲಾಗುತ್ತಿದ್ದರೂ ಸಂಬಂಧಪಟ್ಟ ಅ ಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ತಡೆಯಲು ಹೋದ ಸಾಮಾಜಿಕ ಕಾರ್ಯಕರ್ತರ ಮೇಲೆ ಅಕ್ರಮ ಪಡಿತರ ಮಾರಾಟಗಾರರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ಅಕ್ರಮ ಪಡಿತರ ಸಾಗಾಟದ ಹಿಂದೆ ಇರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ  ಕೈಗೊಳ್ಳಬೇಕು. ಸಾಮಾಜಿಕ ಹೋರಾಟಗಾರರ ಮೇಲೆ ದಾಖಲಿಸಲಾದ ಸುಳ್ಳು ಪ್ರಕರಣ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ನಾರಾಯಣರೆಡ್ಡಿ, ಜಿ. ಶಿವಶಂಕರ, ರವಿಚಂದ್ರ ಗುತ್ತೇದಾರ, ಶ್ರವಣಕುಮಾರ ನಾಯಕ, ದೇವಿಂದ್ರ ಚಿಗರಳ್ಳಿ, ಶಿವುಕುಮಾರ ಕಟ್ಟಿಮನಿ,  ಅನೀಲಕುಮಾರ, ಕೃಷ್ಣಾ ಬೇಲೂರ, ಶಿವುಕುಮಾರ ಗುತ್ತೇದಾರ, ವಿಕ್ರಂ ಬೇಲೂರ, ಅಂಬರೀಶ, ಮಲ್ಲಿಕಾರ್ಜುನ ಸರಡಗಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next