Advertisement

24ರಿಂದ ಪಾರ್ಕ್‌ ಉಳಿವಿಗಾಗಿ ಅನಿರ್ದಿಷ್ಟಾವಧಿ ಧರಣಿ

02:43 PM Feb 22, 2022 | Team Udayavani |

ಹಾಸನ: ನಗರದ ಮಹಾರಾಜ ಪಾರ್ಕ್‌ನಲ್ಲಿ ಕಾಂಕ್ರೀಟ್‌ ಕಾಮಗಾರಿಗಳನ್ನು ನಿಲ್ಲಿಸಲು ಜಿಲ್ಲಾಡಳಿತವು ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆಗುರುವಾರದಿಂದ ಪಾರ್ಕ್‌ನಲ್ಲಿಯೇ ನಿರಂತರಧರಣಿ ನಡೆಸಲು ಮಹಾರಾಜ ಪಾರ್ಕ್‌ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ ಹೋರಾಟಗಾರರು,ಮಹಾರಾಜ ಪಾರ್ಕ್‌ನಲ್ಲಿ ಕಾಂಕ್ರಿಟೀಕರಣ ಬೇಡ,ಹಸಿರೀಕರಣ ಇರಲಿ ಎಂದು ಅನೇಕ ಬಾರಿ ಸಭೆ ನಡೆಸಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಸ್ಪಂದಿಸಿಲ್ಲ. ಇನ್ನು 3 ದಿನ ಕಾದು ನೋಡಿ ಗುರುವಾರದಿಂದ ಪಾರ್ಕ್‌ನಲ್ಲಿಯೇ ಅನಿರ್ದಿಷ್ಟಾವಧಿಯ ಧರಣಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದಾರೆ.

ಗುರುವಾರದೊಳಗೆ ಜಿಲ್ಲಾಡಳಿತವು ಪಾರ್ಕ್‌ನಲ್ಲಿ ಕಾಂಕ್ರೀಟ್‌ ಕಾಮಗಾರಿಗಳನ್ನು ನಿಲ್ಲಿಸಿರುವುದಾಗಿ ಖಚಿತಪಡಿಸಿದರೆ ಧರಣಿ ನಡೆಸುವುದಿಲ್ಲ. ಇಲ್ಲದಿದ್ದರೆ ಮಹಾರಾಜ ಪಾರ್ಕ್‌ ಉಳಿಸಿ ಎಂಬ ಘೋಷಣೆಯೊಂದಿಗೆ ಗುರುವಾರದಿಂದ ಧರಣಿ ನಡೆಸಲಾಗುವುದು. ಈ ಹೋರಾಟದ ಸಮಯದಲ್ಲಿ ಯಾವುದೇ ತೊಂದರೆಯಾದರೂ ಅದರ ಪೂರ್ಣ ಜವಾಬ್ದಾರಿ ಜಿಲ್ಲಾಡಳಿತವೇ ಹೊರಬೇಕಾಗುತ್ತದೆ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಯಾವ ಸಭೆಯನ್ನು ಮಾಡದೇ ಮಹಾರಾಜ ಪಾರ್ಕ್‌ ಉಳಿಸಿ ಎಂಬಕರಪತ್ರವನ್ನು ಮುದ್ರಿಸಿ ಅದರಲ್ಲಿ ಸರ್ಕಾರದ ನ್ಯೂನತೆಗಳನ್ನು ವಿವರಿಸಲಾಗುವುದು. ಪಾರ್ಕ್‌ಉಳಿಸುವ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸದಿರುವುದು, ರಾಜಕಾರಣಿಗಳು ಕೂಡ ಗಮನಕೊಡದ ಕಾರಣ ಮರಗಳನ್ನು ತಬ್ಬಿಕೊಳ್ಳುವಪರಿಸ್ಥಿತಿ ಬಂದಿದೆ ವಿಚಾರಗಳನ್ನು ಕರಪತ್ರದಲ್ಲಿ ಮುದ್ರಿಸಿ ಜನರ ಗಮನ ಸೆಳೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್‌, ಸಮಾಜಸೇವಕ ವೈ.ಎಸ್‌. ವೀರಭದ್ರಪ್ಪ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ. ಶಿವಣ್ಣ, ಜೆಡಿಎಸ್‌ ಹಾಸನ ತಾಲೂಕು ಅಧ್ಯಕ್ಷ ಎಸ್‌. ದ್ಯಾವೇಗೌಡ,ಡಾ. ರಾಜಕುಮಾರ್‌ ಅಭಿಮಾನಿ ಸಂಘದ ಗೌರವಾಧ್ಯಕ್ಷ ಬಾಳ್ಳುಗೋಪಾಲ್‌, ನಾಗರಾಜ್‌ಹೆತ್ತೂರು, ಸಂಘಟನೆಯ ಮುಖಂಡರಾದಧರ್ಮೇಶ್‌, ವೆಂಕಟೇಶ್‌, ಅಂಬುಗ ಮಲ್ಲೇಶ್‌ ,ಕೆಪಿಆರ್‌ಎಸ್‌. ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ಕುಮಾರ್‌, ಕೆ.ಟಿ. ಜಯಶ್ರೀ, ಸಿ. ಸುವರ್ಣಾ,ನಿರ್ಮಲಾ, ಬಾಳೆಹಣ್ಣು ವರ್ತಕರ ಸಂಘದ ಅಧ್ಯಕ್ಷಸಮೀರ್‌ ಅಹಮದ್‌, ಮುಬಾಶೀರ್‌ ಅಹಮದ್‌,ಜಾನೆಕೆರೆ ಹೇಮಂತ್‌, ಕರವೇ ತಾಲೂಕು ಅಧ್ಯಕ್ಷ ರಘುಗೌಡ ಇತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next