Advertisement

Panchamasali ಮೀಸಲಾತಿಗೆ ಮತ್ತೆ ಹೋರಾಟ ಆರಂಭ: ಬಸವ ಜಯಮೃತ್ಯುಂಜಯ ಸ್ವಾಮೀಜಿ

04:31 PM Aug 18, 2023 | Team Udayavani |

ದಾವಣಗೆರೆ: ಪಂಚಮಸಾಲಿ‌ ಸಮಾಜಕ್ಕೆ ಮೀಸಲಾತಿ‌ ಕಲ್ಪಿಸುವಂತೆ ಆಗ್ರಹಿಸಿ ಮತ್ತೆ ಹೋರಾಟ ಆರಂಭಿಸಲಾಗುತ್ತಿದ್ದು, ಶ್ರಾವಣ ಮಾಸದಲ್ಲಿ‌ ಇಷ್ಟಲಿಂಗ ಪೂಜೆ ಮೂಲಕ‌ ಹೋರಾಟಕ್ಕೆ ಚಾಲನೆ ನೀಡಲಾಗುವುದು. ಎಲ್ಲಿಂದ ಹೋರಾಟ ಆರಂಭಿಸಬೇಕು ಎಂಬುದರ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ‌ಕಾಂಗ್ರೆಸ್ ಸರ್ಕಾರ ಬಂದಿದೆ. ಸಿದ್ದರಾಮಯ್ಯ ಸರ್ಕಾರ ಬರಬೇಕಾದರೆ ಪಂಚಮಸಾಲಿ ಸಮಾಜದ ಸಹಕಾರ ಸಹ‌ ಇದೆ. ಈ ವಿಚಾರ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಅಧಿವೇಶನ ಮುಗಿದ ಬಳಿದ ಸಂವಿಧಾನ ಹಾಗೂ ಕಾನೂನು ಪಂಡಿತರ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ‌ಈಗ ಅಧಿವೇಶನ ಮುಗಿದು ಒಂದು ತಿಂಗಳಾಗುತ್ತ ಬಂದಿದೆ. ಸಭೆ ಕರೆದು ಸಿದ್ದರಾಮಯ್ಯ ಅವರು‌ ನಿರ್ಧಾರ ತೆಗೆದುಕೊಳ್ಳಬೇಕು. ತನ್ಮೂಲಕ ಸಮಾಜದ ಋಣಭಾರ ತೀರಿಸಬೇಕು ಎಂದರು.

ಇದನ್ನೂ ಓದಿ:Kota: ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಪ್ಪಿಸಲು ಜಿಲ್ಲಾಡಳಿತದಿಂದ ಮಾಸ್ಟರ್‌ಪ್ಲಾನ್‌!

ಈಗಾಗಲೇ  ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ವಿಚಾರವಾಗಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಅದೇ ರೀತಿ‌ ಬೇರೆ ಸಮಾಜದ ಬೇಡಿಕೆಗಳ ಬಗ್ಗೆ ಸಿಎಂ ಗಮನ ಹರಿಸಲಿ ಎಂದರು.

ಪಂಚಮಸಾಲಿ ಸಮಾಜ 3ಬಿ ಯಲ್ಲಿತ್ತು. ಈಗ 2ಎ ಇಲ್ಲವೇ 2ಡಿಯಲ್ಲಿ ತರಲಾಗಿದೆ. ಇವೆರಡೂ ಒಂದೆ. ಸಮಾಜದವರಿಗೆ ಅನ್ಯಾಯವಾಗದಂತೆ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದರು.

Advertisement

ಪ್ರತ್ಯೇಕ‌ ಲಿಂಗಾಯತ ಧರ್ಮ ಹೋರಾಟ ನಡೆಯುತ್ತಿದೆ. ನಾನು‌ ಮಾತ್ರ ಈಗ ಪಂಚಮಸಾಲಿ‌‌ ಮೀಸಲಾತಿಯಲ್ಲಿ ಬ್ಯೂಸಿ ಇದ್ದೇನೆ. ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ನೇತೃತ್ವದಲ್ಲಿ‌ ಪ್ರತ್ಯೇಕ‌‌‌ ಲಿಂಗಾಯತ ಧರ್ಮದ ಹೋರಾಟ ನಡೆಯುತ್ತಿದೆ. ಆದರೆ ನಾನು‌ ಮಾತ್ರ ಸದ್ಯ‌ ಪಂಚಮಸಾಲಿ ಸಮಾಜದ ಮೀಸಲಾತಿಗೆ ಓಡಾಡುತ್ತಿರುವೆ.‌ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಬಗ್ಗೆ ನಾನು‌ ಈಗ ಏನೂ ಹೇಳಲಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next