Advertisement

ವಾರದ ಸಂತೆಗೆ ಸ್ಥಳ ನೀಡಲು ಒತ್ತಾಯ

09:22 PM Nov 13, 2020 | Suhan S |

ಚಿಕ್ಕಮಗಳೂರು: ನಗರದ ಸಂತೆ ಮೈದಾನದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ನಗರಸಭೆಯಿಂದ ಸ್ಥಳವಕಾಶ ಕಲ್ಪಿಸಲಾಗಿದೆ. ಸಂತೆ ಮೈದಾನದಲ್ಲಿ ಸ್ಥಳಾವಕಾಶ ಬೇಡ. ಹಿಂದೆ ವ್ಯಾಪಾರ ಮಾಡುತ್ತಿದ್ದ ರಸ್ತೆಬದಿಯಲ್ಲೇ ವ್ಯಾಪಾರ- ವಹಿವಾಟು ನಡೆಸಲು ಅವಕಾಶ ನೀಡಬೇಕು. ವಾರದ ಸಂತೆ ಇದೇ ಸ್ಥಳದಲ್ಲಿ ನಡೆಸಲು ಅವಕಾಶ ನೀಡಬೇಕೆಂದುಒತ್ತಾಯಿಸಿ ಬೀದಿಬದಿ ವ್ಯಾಪಾರಸ್ಥರು ಸಂತೆ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಗುರುವಾರ ನಗರದ ಮಾರ್ಕೆಟ್‌ ರಸ್ತೆಯಲ್ಲಿರುವ ಸಂತೆ ಮೈದಾನದಲ್ಲಿರುವಸಂತೆ ಮೈದಾನದಲ್ಲಿ ಸಮಾವೇಶಗೊಂಡ ಬೀದಿಬದಿ ವ್ಯಾಪಾರಸ್ಥರು ಮತ್ತು ಸಂತೆ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿ ನಗರಸಭೆವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬೀದಿಬದಿ ವ್ಯಾಪಾರಸ್ಥ ಕುಮಾರ್‌ಮಾತನಾಡಿ, ಬೀದಿಬದಿ ವ್ಯಪಾರಸ್ಥರಿಗೆ ಸಂತೆ ಮೈದಾನದಲ್ಲಿ ಜಾಗ ನೀಡಲಾಗಿದೆ. ನೂರಾರು ಅಂಗಡಿಗಳು ಒಂದೇ ಸ್ಥಳದಲ್ಲಿ ಇಡುವುದರಿಂದ ವ್ಯಾಪಾರ- ವಹಿವಾಟು ಕಡಿಮೆಯಾಗಲಿದೆ. ಗ್ರಾಹಕರು ಪ್ರತಿನಿತ್ಯ ಸಂತೆ ಮೈದಾನಕ್ಕೆ ಬಂದು ವ್ಯಾಪಾರ ಮಾಡುತ್ತಾರೆಂಬ ನಂಬಿಕೆಯಿಲ್ಲ. ಇದರಿಂದ ಹಾಕಿದ ಬಂಡವಾಳವೂ ಬರುವ ಸ್ಥಿತಿಯಿಲ್ಲ ಎಂದರು.

ತಳ್ಳುಗಾಡಿ ಹಣ್ಣು ವ್ಯಾಪಾರಸ್ಥ ಧನು ಮಾತನಾಡಿ, ಹಬ್ಬಗಳ ಸಂದರ್ಭದಲ್ಲಿ ಸಂತೆ ಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಬಹುದು. ಬೇರೆ ದಿನಗಳಲ್ಲಿ ಇಲ್ಲಿ ವ್ಯಾಪಾರ- ವಹಿವಾಟು ನಡೆಸಲು ಸಾಧ್ಯವಿಲ್ಲ. ಹಣ್ಣು ಮತ್ತು ಹೂವು ಬೇಗ ಹಾಳಾಗಿ ಹೋಗುತ್ತವೆ. ಇದರಿಂದ ವ್ಯಾಪಾರಸ್ಥರು ಕಷ್ಟಕ್ಕೆ ಸಿಲುಕುವ ಸ್ಥಿತಿ ಇದೆ. ಆದ್ದರಿಂದ ಈ ಹಿಂದೆ ಇದ್ದ ಸ್ಥಳದಲ್ಲೇ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಸರ್ವೇ ಕಾರ್ಯ ನಡೆಸಿ ಜಾಗ ನಿಗದಿಪಡಿಸಲಿ ಎಂದು ಒತ್ತಾಯಿಸಿದರು.

ಸರ್ಕಾರ ಬೀದಿಬದಿ ವ್ಯಾಪಾರಸ್ಥರಿಗೆ ಶಾಶ್ವತ ನೆಲೆ ಕಲ್ಪಿಸಿಕೊಡುವ ಸುತ್ತೋಲೆ ಹೊರಡಿಸಿದ್ದು, ಅದರಂತೆ ಸಂತೆಮೈದಾನದಲ್ಲಿ ಜಾಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಳಿಗೆಗಳನ್ನುನಿರ್ಮಾಣ ಮಾಡಿಕೊಡಲಾಗುವುದು. ತಳ್ಳುಗಾಡಿಗಳಲ್ಲಿ ಸುತ್ತಾಡಿ ವ್ಯಾಪಾರ ಮಾಡುವರಿಗೆ ಯಾವುದೇಅಭ್ಯಂತರವಿಲ್ಲ. ನಗರದ ಪ್ರಮುಖ ಸರ್ಕಲ್‌ಗ‌ಳಲ್ಲಿ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗುವಂತಹ ಬೀದಿಬದಿವ್ಯಾಪಾರಸ್ಥರಿಗೆ ಸಂತೆ ಮೈದಾನದಲ್ಲಿ ಸ್ಥಳ ನೀಡಲಾಗಿದೆ. –ಬಸವರಾಜ್‌, ನಗರಸಭೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next